ಬೆಂಗಳೂರು: ರಾಜರಥ ತಂಡ ಸಂದರ್ಶನದ ವೇಳೆ ಮಾತನಾಡಿದ ಪದಗಳಿಂದ ಕನ್ನಡಿಗರಿಗೆ ಆಗಿರುವ ನೋವಿಗೆ ಆರ್‌ಜೆ ರಶ್ಮಿ ಕನ್ನಡಿಗರ ಕ್ಷಮೆ ಕೇಳಿದ್ದಾರೆ.
ಚಿತ್ರ ತಂಡ ಬಳಸಿದ ಪದಗಳು ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡಿದೆ. ಪ್ರತಿ ದಿನ ಒಂದೊಂದು ತಿರುವು ಪಡೆದುಕೊಂಡು ಕನ್ನಡಿಗರಿಗೆ ಬೇಸರ ಉಂಟು ಮಾಡಿದೆ. ಹಾಗಾಗಿ ಇವತ್ತು ನಾನೆ ಖುದ್ದು ಸಾರಾ ಗೋವಿಂದ್ ಅವರನ್ನು ಹುಡುಕಿ ಕೊಂಡು ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಬಂದಿದ್ದೇನೆ. ಭೇಟಿಗೆ ಅವಕಾಶ ಮಾಡಿಕೊಟ್ಟ ಸಾರಾ ಗೋವಿಂದ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
Advertisement
ನಮ್ಮ ಕಾಯಕ್ರಮದಿಂದ ಕನ್ನಡಿಗರಿಗೆ ನೋವಾಗಿದೆ ನಮ್ಮ ಕಡೆಯಿಂದ ಕ್ಷಮೆ ಇರಲಿ. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕ್ರಮದಲ್ಲಿ ಈ ರೀತಿ ಘಟನೆಗಳಿಗೆ ಅವಕಾಶ ಮಾಡಿಕೊಡವುದಿಲ್ಲ ಎಂದು ಭರವಸೆ ನೀಡಿದ್ದಾರೆ.
Advertisement
Advertisement
ನನ್ನ ಪ್ರಶ್ನೆಗೆ ಆ ರೀತಿ ಉತ್ತರ ಕೊಟ್ಟರು ಯಾಕೆ ಪ್ರತಿಕ್ರಿಯಿಸಿಲ್ಲ ಅಂತ ನನ್ನನ್ನು ಜನ ಪ್ರಶ್ನೆ ಮಾಡುತ್ತಿದ್ದಾರೆ. ಆ ಕ್ಷಣದಲ್ಲಿ ಹೊಳೆದಿಲ್ಲ ಕ್ಷಮಿಸಿ ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳುತ್ತೇನೆ. ಹೀಗಾದಲ್ಲಿ ತಕ್ಷಣವೇ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.
Advertisement
ಕನ್ನಡಿಗರ ಮನಸ್ಸಿಗೆ ನೊವಾಗುವಂತಹ ವಿಚಾರ ಬಂದಾಗ ಎಚ್ಚರದಿಂದ ಇರುತ್ತೇನೆ. ಇಷ್ಟು ವರ್ಷಗಳ ಕಾಲ ಆರ್‍ಜೆ ಆಗಿದ್ದೇನೆ. ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ಕೊಡುವಂತಹ ಕಾರ್ಯಕ್ರಮಗಳನ್ನು ಹುಟ್ಟು ಹಾಕಿದ್ದೇನೆ. ಕಳೆದ ಒಂದು ವರ್ಷದಲ್ಲಿ ನಮ್ಮ ಕಾರ್ಯಕ್ರಮಕ್ಕೆ ನಹಳಷ್ಟು ಚಿತ್ರ ತಂಡದವರು ಬಂದಿದ್ದಾರೆ. ಇನ್ನಮುಂದೆ ಕೂಡ ನಿಮ್ಮ ಸಹಕಾರ ಹೀಗೆ ಇರಲಿ. ನಮ್ಮ ಕಾರ್ಯಕ್ರಮದ ಉದ್ದೇಶ ಚಿತ್ರದ ಪ್ರಚಾರಕ್ಕಷ್ಟೇ ಸೀಮಿತ ವಾಗಿರುತ್ತದೆ ಎಂದು ಮತ್ತೊಮ್ಮೆ ಹೇಳಿ ಕನ್ನಡಿಗರಲ್ಲಿ ರಶ್ಮಿ ಅವರು ಕ್ಷಮಾಪಣೆ ಕೇಳಿದ್ದಾರೆ. ಇದನ್ನೂ ಓದಿ: ರಾಜರಥ ಸಿನಿಮಾ ತಂಡದ ವಿರುದ್ಧ ಮತ್ತೊಂದು ದೂರು ದಾಖಲು
ಸಾರಾ ಗೋವಿಂದ್ ಮಾತನಾಡಿ ಒಂದು ಹೆಣ್ಣು ಮಗಳು ಖುದ್ದು ಬಂದು ಮೊದಲ ಬಾರಿ ಆಗಿರುವ ತಪ್ಪಿಗೆ ಕ್ಷಮಾಪಣೆ ಕೇಳುತ್ತಿದ್ದಾರೆ. ಕನ್ನಡಿಗರು ಔದಾರ್ಯದಿಂದ ಕ್ಷಮಿಸಬೇಕೆಂದು ತಿಳಿಸಿದರು. ಇದನ್ನೂ ಓದಿ: ದಯವಿಟ್ಟು ಕ್ಷಮಿಸಿ, ಇನ್ನು ಮುಂದೆ ಹೀಗೆ ಆಗಲ್ಲ: ಅನೂಪ್ ಭಂಡಾರಿ