ಕಾರವಾರ: ಒಂದೆಡೆ ಸಮುದ್ರದ ಅಲೆಗಳನ್ನು ಸೀಳಿ ಶತ್ರುಗಳತ್ತ ಮುನ್ನುಗ್ಗುತ್ತಿರುವ ಕೋಸ್ಟ್ ಗಾರ್ಡ್ ಹಡಗು. ಮತ್ತೊಂದೆಡೆ ಶತ್ರುವನ್ನು ಗುರಿ ಇಟ್ಟು ಗುಂಡಿನ ದಾಳಿ ನಡೆಸುತ್ತಿರುವ ದೃಶ್ಯ. ಹೌದು, ಇದು ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ (Karwar) ಭಾಗದ ಅರಬ್ಬಿ ಸಮುದ್ರದಲ್ಲಿ (Arabian Sea) ನಡೆದ ಕಾರ್ಯಾಚರಣೆಯ ದೃಶ್ಯಗಳು. ಭಾರತೀಯ ತಟರಕ್ಷಣಾಪಡೆ (Coastal Defence) ತನ್ನ ಸಾಮರ್ಥ್ಯವನ್ನು ಅಣಕು ಕಾರ್ಯಾಚರಣೆ (Mock Operation) ಮೂಲಕ ತಾವೆಷ್ಟು ಸಮರ್ಥರು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.
ಇದಕ್ಕಾಗಿ ಕಾರವಾರದಲ್ಲಿರುವ ಕೋಸ್ಟ್ ಗಾರ್ಡ್ ತಟರಕ್ಷಕ ತಂಡದ ಹಡಗುಗಳಾದ ಐಸಿಜಿಎಸ್ ಕಸ್ತೂರ್ ಬಾ ಗಾಂಧಿ, ಐಸಿಜಿಎಸ್ ಸಾವಿತ್ರಿ ಬಾಯಿ ಪುಲೆ, ಐಸಿಜಿಎಸ್ ಸಿ-448, ಐಸಿಜಿಎಸ್ ವಿಕ್ರಮ್ ಕಾರ್ಯಾಚರಣೆಗಾಗಿ ಜನರನ್ನು ಹೊತ್ತುಕೊಂಡು ಸಮುದ್ರ ಭಾಗದ ಆರು ನಾಟಿಕಲ್ ಮೈಲು ದೂರದಲ್ಲಿ ಸಾಗಿ ತನ್ನ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿತು. ಜೊತೆಗೆ ತಾವು ನಿರ್ವಹಿಸುವ ಕರ್ತವ್ಯದ ಕುರಿತು ನೆರೆದಿದ್ದ ಜನರಿಗೆ ಅರಿವು ಮೂಡಿಸಿದರು. ಇದನ್ನೂ ಓದಿ: ಅಡ್ವಾಣಿಯನ್ನು ಬಿಜೆಪಿಯವರೇ ಮೂಲೆಗುಂಪು ಮಾಡಿದ್ರು, ಬುದ್ಧಿ ಬಂದ ಮೇಲೆ ‘ಭಾರತ ರತ್ನ’ ಕೊಟ್ಟಿದ್ದಾರೆ: ರಾಮಲಿಂಗಾ ರೆಡ್ಡಿ
Advertisement
Advertisement
ಫೆ.1ಕ್ಕೆ ಇಂಡಿಯನ್ ಕೋಸ್ಟ್ ಗಾರ್ಡ್ ಡೇ ಆಚರಣೆ ಹಿನ್ನೆಲೆ ಕೋಸ್ಟ್ ಗಾರ್ಡ್ ವತಿಯಿಂದ ಎರಡು ದಿನಗಳ ಕಾಲ ಈ ಅಣಕು ಕಾರ್ಯಾಚರಣೆ ಆಯೋಜಿಸಲಾಗಿತ್ತು. ಇಂಡಿಯನ್ ಕೋಸ್ಟ್ ಗಾರ್ಡ್ಸ್ ಯಾವ ರೀತಿಯಲ್ಲಿ ಭಾರತದ ಸಮುದ್ರ ಭಾಗದ ಸರಹದ್ದಿನಲ್ಲಿ ಪಹರೆ ಕಾಯುತ್ತೆ, ಸಮುದ್ರದಲ್ಲಿ ಮೀನುಗಾರರು ಅಪಾಯದಲ್ಲಿದ್ದಾಗ ಯಾವ ರೀತಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತೆ, ಸಮುದ್ರ ಭಾಗದಲ್ಲಿ ಯಾವುದಾದರು ಶಿಪ್ ಅಥವಾ ಬೋಟ್‌ಗಳಲ್ಲಿ ಅಗ್ನಿ ಅವಘಢ ನಡೆದರೆ, ಸಮುದ್ರದ ಲೂಟಿಕೋರರು ದಾಳಿಯನ್ನು ಯಾವ ರೀತಿ ಎದುರಿಸಲಾಗುತ್ತದೆ ಮುಂತಾದವುಗಳ ಬಗ್ಗೆ ಜನರಿಗೆ ಪ್ರಾತಕ್ಷಿಕೆ ಮೂಲಕ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಅಣಕು ಕಾರ್ಯಾಚರಣೆ ನಡೆಸಲಾಗಿತ್ತು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್‍ಗೆ ಕೋಲಾರದ ಮಹಿಳೆ ಆಯ್ಕೆ
Advertisement
Advertisement
ಸುಮಾರು ನಾಲ್ಕು ಗಸ್ತು ಶಿಪ್‌ಗಳಲ್ಲಿ ಸುಮಾರು 16 ನಾಟಿಕಲ್ ಮೈಲುದೂರದ ಸಮುದ್ರದಲ್ಲಿ ತೆರಳಿದ ನೂರಾರು ಜನರು, ಇಂಡಿಯನ್ ಕೋಸ್ಟ್ ಗಾರ್ಡ್‌ಗಳ ಕಾರ್ಯವೈಖರಿ ಕಂಡು ಸಂತೋಷ ಪಟ್ಟರು. ಇದನ್ನೂ ಓದಿ: ಪಿತೂರಿಗೆ ಬಲಿಯಾಗಿ ನಾನು, ಪ್ರೀತಂ ವಿಷಕಂಠರಾಗಿದ್ದೇವೆ: ಸಿ.ಟಿ ರವಿ
ಕ್ಷಣಕ್ಷಣಕ್ಕೂ ವಿವಿಧೆಡೆ ನಡೆಯುವ ಕಾರ್ಯಾಚರಣೆಯ ಮಾಹಿತಿಯನ್ನು ಕೂಡಾ ಸಿಬ್ಬಂದಿ ಮೂಲಕ ಜನರು ಪಡೆದುಕೊಂಡರು. ಸಾಕಷ್ಟು ಬಾರಿ ಸಮುದ್ರದಾಳದಲ್ಲಿ ಸಿಲುಕಿದ್ದ ಮೀನುಗಾರರ ರಕ್ಷಣೆ ಮಾಡಿದ್ದಲ್ಲದೇ, ವಿದೇಶಗಳಿಂದ ಬರುವ ಸರಕು ಹಡಗುಗಳ ಮೇಲೆ ಲೂಟಿಕೋರರು ದಾಳಿ ನಡೆಸಿದಾಗಲೂ ಇಂಡಿಯನ್ ಕೋಸ್ಟ್ ಗಾರ್ಡ್ ಕೂಡಲೇ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು. ಇಂದು ನಡೆದ ಅಣಕು ಕಾರ್ಯಾಚರಣೆಯ ಮೂಲಕ ಇಂಡಿಯನ್ ಕೋಸ್ಟ್ ಗಾರ್ಡ್ ನಡೆಸಿದ ಆಪರೇಷನ್ ಅನ್ನು ಕಣ್ಣಾರೆ ಕಂಡ ಜನರಿಗೆ ತಾವೂ ದೇಶ ರಕ್ಷಣೆಯಲ್ಲಿ ತೊಡಗಬೇಕು ಎಂಬ ಹುಮ್ಮಸ್ಸನ್ನು ತಂದಿತ್ತು. ಇದನ್ನೂ ಓದಿ: ರಾಜ್ಯದ ಹಿತಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ: ಡಿಕೆ ಸುರೇಶ್
ಒಟ್ಟಿನಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ಸಮುದ್ರದಾಳದಲ್ಲಿ ನಡೆಸಿದ ಅಣಕು ಕಾರ್ಯಾಚರಣೆ ಜನರಿಗೆ ಅತ್ಯದ್ಭುತ ಅನುಭವ ನೀಡಿ ಪುಳಕಿತಗೊಳಿಸಿದ್ದಲ್ಲದೇ, ದೇಶಸೇವೆಗೆ ತಾವೂ ಸೇರಬೇಕು ಎಂಬ ಹುಮ್ಮಸ್ಸನ್ನು ಹುಟ್ಟಿಸಿದ್ದು ಸುಳ್ಳಲ್ಲ. ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ ನೀಡಿದ 20 ವರ್ಷದ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಲಿ: ಆರ್.ಅಶೋಕ್