ಸಿಹಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಸಿಹಿ ಎಂದರೆ ಸಾಕು ಬಾಯಲ್ಲಿ ನೀರೂರುತ್ತದೆ. ಕಡಿಮೆ ಸಮಯದಲ್ಲಿ ಸಿಹಿ ಮಾಡಬೇಕು ಎಂದುಕೊಂಡಿದ್ದರೆ ಈ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ ನೋಡಿ. ಇವತ್ತಿನ ನಮ್ಮ ರೆಸಿಪಿಯ ಹೆಸರು ರಂಗೀಲಾ ಬರ್ಫಿ. ಹಾಗಿದ್ದರೆ ಇದನ್ನು ಹೇಗೆ ಮಾಡೋದು ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಉಳಿದ ಅನ್ನ ಇದ್ರೆ ಖಂಡಿತ ಟ್ರೈ ಮಾಡಿ ಬೆಳ್ಳುಳ್ಳಿ ರೈಸ್
Advertisement
ಬೇಕಾಗುವ ಸಾಮಗ್ರಿಗಳು:
ಹಾಲಿನ ಪೌಡರ್- 2 ಕಪ್
ಹಾಲು- 1 ಕಪ್
ಸಕ್ಕರೆ- ಅರ್ಧ ಕಪ್
ತುಪ್ಪ- ಅರ್ಧ ಕಪ್
ಕಲರ್ ಪೌಡರ್- ಸ್ವಲ್ಪ
ಏಲಕ್ಕಿ ಪುಡಿ- ಸ್ವಲ್ಪ
Advertisement
Advertisement
ಮಾಡುವ ವಿಧಾನ:
Advertisement
- ಮೊದಲಿಗೆ ಒಂದು ಪ್ಯಾನ್‌ನಲ್ಲಿ ತುಪ್ಪ ಹಾಕಿಕೊಂಡು ಮಧ್ಯಮ ಉರಿಯಲ್ಲಿ ಅದನ್ನು ಕರಗಿಸಿಕೊಳ್ಳಿ. ಬಳಿಕ ಅದಕ್ಕೆ ಹಾಲನ್ನು ಹಾಕಿ ಚನ್ನಾಗಿ ತಿರುವಿಕೊಳ್ಳಬೇಕು.
- ಬಳಿಕ ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಾಲಿನ ಪೌಡರ್ ಮತ್ತು ಸಕ್ಕರೆಯನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವು ಮಂದವಾಗುತ್ತಾ ಬಂದಾಗ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿಕೊಂಡು ತಿರುವಿಕೊಳ್ಳಿ.
- ನಂತರ ಆ ಮಿಶ್ರಣವನ್ನು ಒಂದು ಬೌಲಿಗೆ ಹಾಕಿಕೊಂಡು ಅದಕ್ಕೆ ಕಲರ್ ಪೌಡರ್ ಸೇರಿಸಿಕೊಳ್ಳಿ. ಬಳಿಕ ಒಂದು ಟ್ರೇ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಸವರಿಕೊಳ್ಳಿ. ಬೇಕಿಂಗ್ ಪೇಪರ್ ಕೂಡಾ ಬಳಸಿಕೊಳ್ಳಬಹುದು.
- ಬಳಿಕ ಆ ಟ್ರೇಗೆ ಮಿಶ್ರಣವನ್ನು ಹಾಕಿಕೊಂಡು ಎಲ್ಲಾ ಕಡೆ ಹರಡಿಕೊಳ್ಳಿ. ನಂತರ ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ನಂತರ ಅದನ್ನು ಒಂದು ಪ್ಲೇಟ್‌ಗೆ ಹಾಕಿಕೊಂಡು ಬಾದಾಮಿ ಪೀಸ್‌ಗಳಿಂದ ಅಲಂಕರಿಸಿ. ರಂಗೀಲಾ ಬರ್ಫಿ ತಿನ್ನಲು ರೆಡಿ. ಇದನ್ನೂ ಓದಿ: ದೇಹಕ್ಕೆ, ಮನಸ್ಸಿಗೆ ಮುದನೀಡುವ ಡ್ರೈಫ್ರೂಟ್ಸ್ ಮಿಲ್ಕ್‌ಶೇಕ್