ಏನಿದು ಜಾಕ್ ಮಾಮಾ ಅಂತ ಯೋಚನೆ ಮಾಡುತ್ತಾ ಇದ್ದೀರಾ. ಇಂಥ ಡಿಫರೆಂಟ್ ಹೆಸರು ಕೇಳಿದರೆ ಆಶ್ಚರ್ಯ ಹುಟ್ಟಲಿಲ್ಲ ಎಂದರೆ ಹೇಗೆ ಹೇಳಿ. ಜಾಕ್ ಮಾಮಾ ಅಂತ ಖುಷಿಯಲ್ಲಿ ಎಲ್ಲರ ನಾಲಿಗೆ ಮೇಲೆ ಓಡಾಡುವ ಪಾತ್ರ ಮಾಡಿರುವುದು ನಮ್ಮ ರಂಗಾಯಣ ರಘು. ಇವರು ಇದ್ದಾರೆ ಎಂದರೆ ನಗು, ಮನರಂಜನೆ, ಸಂದೇಶ, ಸಿನಿಮಾವಂತು ಖಂಡಿತ ಎಲ್ಲರ ಮನಸ್ಸಲ್ಲೂ ಉಳಿದುಕೊಳ್ಳುವಂತ ಸನ್ನಿವೇಶ ಹುಟ್ಟಿಕೊಂಡಿರುತ್ತದೆ ಎಂಬುದು ಗ್ಯಾರಂಟಿ.
Advertisement
ಅಂದಿನಿಂದ ಇಂದಿನವರೆಗೂ ನಗಿಸಿಕೊಂಡು ಬಂದಿರುವ ಪರಿಪೂರ್ಣ ನಟ ರಂಗಾಯಣ ರಘು ಅವರು ವೀಲ್‌ಚೇರ್ ರೋಮಿಯೋ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅದೇ ಜಾಕ್ ಮಾಮಾ. ತನ್ನ ವಿಶಿಷ್ಟ ನಟನೆಯಿಂದಲೂ ಎಲ್ಲರನ್ನು ಸೆಳೆದಿರುವ ನಟ, ವೀಲ್‌ಚೇರ್ ರೋಮಿಯೋ ಮೂಲಕವೂ ವಿಭಿನ್ನವಾಗಿ ಎಲ್ಲರ ಮನಸ್ಸಲ್ಲೂ ಉಳಿದುಕೊಳ್ಳಲಿದ್ದಾರೆ. ಇದೇ 27ಕ್ಕೆ ಸಿನಿಮಾ ತೆರೆಗೆ ಬರಲಿದೆ. ಜಾಕ್ ಮಾಮಾ ಹೆಸರೇ ಇಷ್ಟೊಂದು ಚೆನ್ನಾಗಿರುವಾಗ ಪಾತ್ರ ಇನ್ನೆಷ್ಟು ಪರಿಣಾಮಕಾರಿಯಾಗಿ ಕಾಡುತ್ತದೆ ಎಂಬ ಕ್ಯೂರಿಯಾಸಿಟಿ ಹುಟ್ಟಿಕೊಂಡಿದೆ. ಇದನ್ನೂ ಓದಿ: ನಯನತಾರಾಗೆ ಲೋಕಲ್ ಫುಡ್ ತಿನ್ನಿಸಿದ ಭಾವಿಪತಿ ವಿಘ್ನೇಶ್
Advertisement
Advertisement
ಸಿನಿಮಾ ಎಂದು ಬಂದಾಗ ಕಥೆ ಬರೆಯುವಾಗ ಕಲಾವಿದರು ಕಣ್ಣ ಮುಂದೆ ಬರುತ್ತಾರೆ. ಈ ಪಾತ್ರಕ್ಕೆ ಇವರೇ ಸೂಕ್ತ ಎಂಬುದು ನಿರ್ದೇಶಕರ ತಲೆಯಲ್ಲಿ ಅಚ್ಚೊತ್ತಿ ಕುಳಿತು ಬಿಟ್ಟಿದೆ. ಹಾಗೆಯೇ ನಿರ್ದೇಶಕರ ಮನಸ್ಸಿನ ಕನ್ನಡಿಯಲ್ಲಿ ರಂಗಾಯಣ ರಘು ಅವರ ಭಾವಚಿತ್ರ ಹಾಗೇ ಕಂಗೊಳಿಸುತ್ತಿತ್ತು. ವೀಲ್ ಚೇರ್ ರೋಮಿಯೋ ಸಿನಿಮಾದಲ್ಲಿ ಈ ಪಾತ್ರಕ್ಕೆ ಅವರೇ ಸೂಕ್ತ ಎಂಬುದು ಫಿಕ್ಸ್ ಆಗಿತ್ತು. ಹೀಗಾಗಿ ಅವರನ್ನೇ ಆ ಪಾತ್ರಕ್ಕೆ ಅಪ್ರೋಚ್ ಮಾಡಿ, ನಿರೀಕ್ಷೆಗೆ ತಕ್ಕಂತೆ ಎಕ್ಸಿಕ್ಯೂಟ್ ಮಾಡಲಾಗಿದೆ.
Advertisement
ನಟನೆಯನ್ನೇ ಕರಗತ ಮಾಡಿಕೊಂಡಿರುವ ರಂಗಾಯಣ ರಘು ಅವರು ಅದ್ಭುತವಾಗಿ ನಟಿಸಿದ್ದಾರೆ. ಅವರ ಪಾತ್ರ ಎಂಥದ್ದು, ಜಾಕ್ ಮಾಮಾ ಏನು ಮಾಡಲಿದ್ದಾರೆ ಎಂಬುದನ್ನು ಇದೇ ತಿಂಗಳ 27ಕ್ಕೆ ಆನಾವರಣಗೊಳ್ಳಲಿದೆ. ಟೈಟಲ್‍ಗೆ ತಕ್ಕಂತೆ ವೀಲ್ ಚೇರ್ ಮೇಲೆ ನಾಯಕ ನಟನ ಪಾತ್ರ ಸಾಗುತ್ತೆ. ಕಿರುತೆರೆ ನಟ ರಾಮ್ ಚೇತನ್ ವೀಲ್ ಚೇರ್ ರೋಮಿಯೋ ಆಗಿ ಕಾಣಿಸಿಕೊಂಡಿದ್ದಾರೆ. ವೇಶ್ಯಾ ವೃತ್ತಿಯಲ್ಲಿ ಸಾಗುವ ನಾಯಕಿ ಪಾತ್ರವನ್ನು ಮಯೂರಿ ನಿಭಾಯಿಸಿದ್ದಾರೆ.
ಬಿ.ಜೆ.ಭರತ್ ಅವರ ಸಂಗೀತ, ಗುರುಕಶ್ಯಪ್ ಸಂಭಾಷಣೆ, ಸಂತೋಷ್ ಪಾಂಡಿ ಕ್ಯಾಮೆರಾ ವರ್ಕ್, ವಿ.ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಸಾಹಿತ್ಯ ಕೃಷಿ ಚಿತ್ರಕ್ಕಿದೆ. ಸುಚೇಂದ್ರ ಪ್ರಸಾದ್, ತಬಲನಾಣಿ, ರಂಗಾಯಣ ರಘು ಚಿತ್ರ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಬ್ಯಾನರ್ ನಡಿ ವೆಂಕಟಾಚಲಯ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದನ್ನೂ ಓದಿ: ಮೇ 26 ರಿಂದ ಮಸೀದಿ ಪರ ಅರ್ಜಿ ವಿಚಾರಣೆ, ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್ ಆದೇಶ