ಹಲವಾರು ವರ್ಷಗಳ ಕಾಲ ರಂಗಭೂಮಿ, ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಉಪನ್ಯಾಸಕರಾಗಿಯೂ ಕೆಲಸ ಮಾಡಿರುವ ಗೋಪಾಲ್ ಹಳ್ಳೇರ (Gopal Hallera) ಹೊನ್ನಾವರ ರಾಬರಿಯಲ್ಲಿ ಗಳಿಸಿದ ನಿಧಿಯ ಸುತ್ತ ನಡೆಯುವ ಕಥಾಹಂದರ ಇಟ್ಟುಕೊಂಡು ‘1 ರಾಬರಿ ಕಥೆ’ (Ondu Robbery Kathe) ಚಿತ್ರ ಮಾಡಿದ್ದಾರೆ. ಬೇಲೂರಿನ ಸಂತೋಷ್ ನಾಗೇನಹಳ್ಳಿ ಅವರು ಸಮನ್ವಿ ಕ್ರಿಯೇಷನ್ಸ್ ಬೇಲೂರು ಸಂಸ್ಥೆಯಡಿ ನಿರ್ಮಿಸಿರುವ ಪ್ರಥಮ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ರಕ್ಕಂ ಖ್ಯಾತಿಯ ರಣಧೀರ್ ಗೌಡ (Randhir Gowda) ನಾಯಕನಾಗಿ ನಟಿಸಿದ್ದು, ಹೊಸ ಪ್ರತಿಭೆ ರಿಷ್ವಿ ಭಟ್ (Rishvi Bhatt) ನಾಯಕಿಯಾಗಿದ್ದಾರೆ.
Advertisement
ಈ ಚಿತ್ರದ ನಾಟಿಸ್ಟೈಲ್ ಸಾಂಗ್ ಹಾಗೂ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವಂತಹ ಪಕ್ಕಾ ಮಾಸ್ ಕಮರ್ಷಿಯಲ್, ಕಾಮಿಡಿ, ಸೆಂಟಿಮೆಂಟ್ ಕಥಾಹಂದರ ಒಳಗೊಂಡ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಗೋಪಾಲ್ ಹಳ್ಳೇರ ಮಾತನಾಡುತ್ತಾ, ‘ರಕ್ಕಂ ಚಿತ್ರದ ಸಮಯದಲ್ಲಿ ಈ ಎಳೆಯನ್ನು ರಣಧೀರ್ ಗೌಡ ಅವರಿಗೆ ಹೇಳಿದ್ದೆ. ಆನಂತರ ನಿರ್ಮಾಪಕರನ್ನು ಹುಡುಕಿಕೊಂಡು ಬಂದಮೇಲೆ ಚಿತ್ರ ಆರಂಭವಾಯಿತು. ಉತ್ತರ ಕರ್ನಾಟಕದಲ್ಲಿ ನಡೆಯುವ ಕಥೆಯಿದು. ನಾಯಕ ಒಂದು ದೊಡ್ಡ ರಾಬರಿಯಲ್ಲಿ ಬಂಗಾರ ದರೋಡೆಮಾಡಿ ಆ ನಿಧಿಯನ್ನು ಒಂದೆಡೆ ಸಂಗ್ರಹಿಸಿಡುತ್ತಾನೆ. ನಂತರ ಆತ 5 ವರ್ಷ ಜೈಲಲ್ಲಿರಬೇಕಾಗುತ್ತದೆ. ಜೈಲಿಂದ ಬಂದಮೇಲೆ ನಿಧಿಯಿಟ್ಟಿದ್ದ ಜಾಗದಲ್ಲಿ ದೇವಸ್ಥಾನವೊಂದು ನಿರ್ಮಾಣವಾಗಿರುತ್ತದೆ. ನಾಯಕ ಮತ್ತೆ ಆ ನಿಧಿಯನ್ನು ಪಡೆದುಕೊಳ್ಳಲು ಸಾಧ್ಯವಾಯಿತೇ ಅಥವಾ ಇಲ್ಲವೇ ಎನ್ನುವುದೇ ಚಿತ್ರದ ಕಥೆ’ ಎಂದರು.
Advertisement
Advertisement
ನಾಯಕ ರಣಧೀರ್ ಗೌಡ ಮಾತನಾಡಿ ‘ಕೃಷ್ಣ ಎನ್ನುವ ನನ್ನ ಪಾತ್ರಕ್ಕೆ 2 ಶೇಡ್ ಇದೆ. ಸಿಂಧನೂರಿನ ರವಕುಂದದಲ್ಲಿ 25ದಿನ, ಬೇಲೂರು, ಚಿಕ್ಕಮಗಳೂರು, ಸಕಲೇಶಪುರ, ಹೊನ್ನಾವರ ಸುತ್ತಮುತ್ತ 15 ದಿನ ನಂತರ ಬೆಂಗಳೂರು ಸೇರಿ 45 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಮಾಸ್, ಕಮರ್ಷಿಯಲ್ ಜೊತೆ ಒಳ್ಳೆಯ ಕಂಟೆಂಟ್ ಇರುವ ಚಿತ್ರವಿದು’ ಎಂದರು. ಇದನ್ನೂ ಓದಿ:`ಸಿಟಾಡೆಲ್’ ಫಸ್ಟ್ ಲುಕ್ ಔಟ್: ಆ್ಯಕ್ಷನ್ ಅವತಾರದಲ್ಲಿ ಪ್ರಿಯಾಂಕಾ ಚೋಪ್ರಾ
Advertisement
ನಾಯಕಿ ರಿಷ್ವಿ ಭಟ್ ಮಾತನಾಡಿ ‘ಚಿತ್ರದಲ್ಲಿ ಅಂಗನವಾಡಿ ಟೀಚರ್ ಭಾಮಾ ಎಂಬ ಪಾತ್ರವನ್ನು ಮಾಡಿದ್ದೇನೆ. ಊರಿಗೆ ಸರ್ವೆ ಆಫೀಸರ್ ಬಂದಾಗ ಅವರ ಮೇಲೆ ಹೇಗೆ ಲವ್ವಾಗುತ್ತದೆ ಎನ್ನುವುದು ನನ್ನ ಪಾತ್ರ’ ಎಂದರು. ಹಿರಿಯನಟ ಸುಂದರರಾಜ್ ಅವರು ಈ ಚಿತ್ರದಲ್ಲಿ ನೆಗೆಟಿವ್ ಶೇಡ್ ಇರುವಂತಹ ಎಂಎಲ್‌ಎ ಪಾತ್ರ ಮಾಡಿದ್ದಾರೆ. ಶಿವರಾಜ್ ಕೆಆರ್ ಪೇಟೆ ಡೀಲ್ ಡಿಂಗ್ರಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹಾಡುಗಳಿಗೆ ಶ್ರೀವತ್ಸ ಸಂಗೀತ ಸಂಯೋಜನೆ ಮಾಡಿದ್ದಾರೆ. ಕರಿಸುಬ್ಬು, ಕಡ್ಡಿಪುಡಿ ಚಂದ್ರು, ತಬಲಾ ನಾಣಿ, ಜಹಾಂಗೀರ್, ಗಿರೀಶ್ ಶಿವಣ್ಣ, ಮೂಗ್ ಸುರೇಶ್, ಎಂ.ಕೆ.ಮಠ್, ನವೀನ್ ಪಡೀಲ್, ಸಂಜುಬಸಯ್ಯ ಇತರರು ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ.