ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇದೀಗ ಹಾಲಿವುಡ್ನತ್ತ ಮುಖ ಮಾಡಿದ್ದಾರೆ. ಸದ್ಯ `ಸಿಟಾಡೆಲ್’ (Citadel) ಚಿತ್ರದ ಫಸ್ಟ್ ಲುಕ್ನಿಂದ ಪ್ರಿಯಾಂಕಾ ಗಮನ ಸೆಳೆಯುತ್ತಿದ್ದಾರೆ. ಆ್ಯಕ್ಷನ್ ಲುಕ್ನಲ್ಲಿ ಪಿಗ್ಗಿ ಮಿಂಚಿದ್ದಾರೆ.
ಪತಿ ನಿಕ್ ಜೋನಸ್ ಮತ್ತು ಮುದ್ದು ಮಗಳ ಪಾಲನೆಯಲ್ಲಿ ಬ್ಯುಸಿಯಿರುವ ನಟಿ ಪ್ರಿಯಾಂಕಾ ಈಗ ಹಾಲಿವುಡ್ (Hollywood) ಚಿತ್ರಗಳ (Films) ಮೂಲಕ ಛಾಪು ಮೂಡಿಸಲು ರೆಡಿಯಾಗಿದ್ದಾರೆ. ಬಾಲಿವುಡ್ ಸಿನಿಮಾಗಳಿಗೆ ಬೈ ಹೇಳಿ, ಇಂಗ್ಲೀಷ್ ಸಿನಿಮಾಗಳತ್ತ ನಟಿ ಮುಖ ಮಾಡಿದ್ದಾರೆ.
View this post on Instagram
ಸದ್ಯ ಪ್ರಿಯಾಂಕಾ ಚೋಪ್ರಾ ನಟನೆಯ ನಟನೆಯ `ಸಿಟಾಡೆಲ್’ ಫಸ್ಟ್ ಲುಕ್ ರಿವೀಲ್ ಆಗಿದೆ. ಟ್ರೈಲರ್ನ ಸಣ್ಣ ತುಣುಕನ್ನ ನಟಿ ಹಂಚಿಕೊಂಡಿದ್ದಾರೆ. ಸಿಟಾಡೆಲ್ನಲ್ಲಿ ಪ್ರಿಯಾಂಕಾ ಖಡಕ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್ ಅವತಾರದಲ್ಲಿರುವ ಪಿಗ್ಗಿ ನ್ಯೂ ಲುಕ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇನ್ನೂ ಸದ್ಯದಲ್ಲೇ ಚಿತ್ರದ ಟ್ರೈಲರ್ ಕೂಡ ರಿವೀಲ್ ಆಗಲಿದೆ. ಇದನ್ನೂ ಓದಿ: ನಡುರಸ್ತೆಯಲ್ಲಿ ಹುಡುಗಿಗೆ ಹೊಡೆದ ಲವರ್ಗೆ ಜಾಡಿಸಿದ ನಟ ನಾಗಶೌರ್ಯ
View this post on Instagram
ಸಿಟಾಡೆಲ್ ವೆಬ್ ಸರಣಿಯನ್ನು ಭಾರತದಲ್ಲೂ ನಿರ್ಮಾಣ ಮಾಡಲಾಗುತ್ತಿದೆ. ಇಂಡಿಯನ್ ವರ್ಷನ್ನಲ್ಲಿ ಸಮಂತಾ (Samantha) ಅವರು ನಟಿಸುತ್ತಿದ್ದಾರೆ. ಅವರು ಕೂಡ ಭರ್ಜರಿ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.