ಸ್ಯಾಂಡಲ್‌ವುಡ್‌ಗೆ(Sandalwood) ಕಮ್‌ಬ್ಯಾಕ್ ಆಗುತ್ತಿರುವ ರಮ್ಯಾ(Actress Ramya) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಂಬ್ಯಾಕ್ ಪ್ರಾಜೆಕ್ಟ್ `ಉತ್ತರಕಾಂಡ’ (Uttarakanda Film) ಚಿತ್ರದ ಬಗ್ಗೆ ರಮ್ಯಾ ರಿಯಾಕ್ಷನ್ ಕೊಟ್ಟಿದ್ದಾರೆ. ಈ ಸಿನಿಮಾದ ಬಗ್ಗೆ ರಮ್ಯಾ ಟ್ವೀಟ್ ಮಾಡಿದ್ದಾರೆ.
ಮೋಹಕತಾರೆ ರಮ್ಯಾ 10 ವರ್ಷಗಳ ನಂತರ ಮತ್ತೆ ಬಣ್ಣದ ಲೋಕಕ್ಕೆ ಬರುತ್ತಿದ್ದಾರೆ. ಕಮ್‌ಬ್ಯಾಕ್‌ಗೆ ಗಟ್ಟಿ ಕಥೆಯನ್ನೇ ನಟಿ ಆಯ್ಕೆ ಮಾಡಿಕೊಂಡಿದ್ದಾರೆ. ಡಾಲಿಗೆ ನಾಯಕಿಯಾಗುತ್ತಿರುವ `ಉತ್ತರಕಾಂಡ’ ಚಿತ್ರದ ಬಗ್ಗೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಹಿಂದಿ ಬಾಕ್ಸಾಫೀಸ್‌ನಲ್ಲಿ ರಿಷಬ್ ಶೆಟ್ಟಿ ಅಬ್ಬರ: 62 ಕೋಟಿ ರೂ. ಗಳಿಸಿದ ʻಕಾಂತಾರʼ
ಹತ್ತು ವರ್ಷಗಳ ನಂತರ `ಉತ್ತರಕಾಂಡ’ (Uttarakanda Film) ಮೂಲಕ ನಾನು ಬೆಳ್ಳಿ ಪರದೆಗೆ ಹಿಂತಿರುಗುತ್ತಿದ್ದೇನೆ. ಈ ಹಿಂದೆ ರತ್ನನ್ ಪ್ರಪಂಚದಲ್ಲಿ ಮಾಡೋಕಾಗಿಲ್ಲ ಎಂಬ ಬೇಸರ ಇತ್ತು. ಆದರೆ ಈಗ ಅದೇ ಸಿನಿಮಾ ತಂಡ ಜೊತೆ ಸಿನಿಮಾ ಮಾಡ್ತಿರೋದು ತುಂಬಾ ಸಂತೋಷದ ವಿಚಾರ. ಸ್ಕ್ರಿಪ್ಟ್ ಚಿಂದಿಯಾಗಿದೆ. ದೈತ್ಯ ಪ್ರತಿಭೆಗಳ ಜೊತೆ ಕೆಲಸ ಮಾಡಲು ಕಾಯುತ್ತಿದ್ದೇನೆ ಎಂದು ರಮ್ಯಾ ಟ್ವೀಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತ ಕೂಡ ನೆರವೇರಿದ್ದು, ರಮ್ಯಾ ವಾಯ್ಸ್‌ಯಿರುವ ಮುಹೂರ್ತದ ಝಲಕ್ ಅನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
The wait is finally over! The comeback- #UttaraKaanda ♥️
@KRG_Studios @VKiragandur @Dhananjayaka @Karthik1423 @yogigraj #RohitPadaki pic.twitter.com/NIoCo4J2co
— Ramya/Divya Spandana (@divyaspandana) November 7, 2022
ಕೆಆರ್‌ಜಿ ಸ್ಟುಡಿಯೋ ಸಂಸ್ಥೆ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಉತ್ತರಕಾಂಡ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಟ ರಾಕ್ಷಸ ಧನಂಜಯ್ ಮತ್ತು ರಮ್ಯಾ ಮೊದಲ ಬಾರಿಗೆ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ `ಉತ್ತರಕಾಂಡ’ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಒಟ್ನಲ್ಲಿ ರಮ್ಯಾ ಮತ್ತು ಈ ಹೊಸ ಜೋಡಿಯನ್ನ, ತೆರೆಯ ಮೇಲೆ ಮಿಂಚಲು ನೋಡುವುದನ್ನೇ ಫ್ಯಾನ್ಸ್ ಕಾಯ್ತಿದ್ದಾರೆ.