Bengaluru CityCinemaDistrictsKarnatakaLatestMain PostSandalwoodTV Shows

ಹಿಂದಿ ಬಾಕ್ಸಾಫೀಸ್‌ನಲ್ಲಿ ರಿಷಬ್ ಶೆಟ್ಟಿ ಅಬ್ಬರ: 62 ಕೋಟಿ ರೂ. ಗಳಿಸಿದ ʻಕಾಂತಾರʼ

ನ್ನಡದ `ಕಾಂತಾರ'(Kantara Film) ಇದೀಗ ದೇಶದ ಮೂಲೆ ಮೂಲೆಯೂ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಅದರಲ್ಲೂ ಬಾಲಿವುಡ್ (Bollywood) ಬಾಕ್ಸಾಫೀಸ್‌ನಲ್ಲಿ `ಕಾಂತಾರ’ ಭರ್ಜರಿ ಬೇಡಿಕೆ ಶುರುವಾಗಿದೆ. ಹಿಂದಿ ಸಿನಿಮಾಗೆ ಸಿಗದ ಮನ್ನಣೆ ಕನ್ನಡ `ಕಾಂತಾರ’ ಚಿತ್ರಕ್ಕೆ ಪ್ರೇಕ್ಷಕರು ಜೈಕಾರ ಹಾಕುತ್ತಿದ್ದಾರೆ. ಇದೀಗ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ 60 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ `ಕಾಂತಾರ’ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪಂಜುರ್ಲಿ ದೈವದ ಕಥೆಯನ್ನ ಪ್ರೇಕ್ಷಕರ ಮನಸ್ಸಿಗೆ ನಾಟುವ ಹಾಗೇ ಅದ್ಭುತವಾಗಿ ತೆರೆಯ ಮೇಲೆ ತೋರಿಸಿ ಸೈ ಎನಿಸಿಕೊಂಡಿದ್ದಾರೆ. ರಿಷಬ್ ಭಿನ್ನ ಪ್ರಯತ್ನಕ್ಕೆ ಫ್ಯಾನ್ಸ್ ಮನಸೋತಿದ್ದಾರೆ. ಈಗ ಕನ್ನಡದ ಸಿನಿಮಾ `ಕಾಂತಾರ’ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ನಾಲ್ಕನೇ ವಾರದತ್ತ ಮುನ್ನುಗ್ಗಿ, ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಇದನ್ನೂ ಓದಿ:ಸಾನ್ಯ ಮಡಿಲಿನಲ್ಲಿ ತಲೆಯಿಟ್ಟು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ `ಕಾಂತಾರ’ ಚಿತ್ರ ನಾಲ್ಕನೇ ವಾರದಲ್ಲಿ 62.40 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹಿಂದಿ ಸಿನಿಮಾಗೆ ಭರ್ಜರಿ ಪೈಪೋಟಿ ಕೊಟ್ಟು ಕೋಟಿ ಕೋಟಿ ಲೂಟಿ ಮಾಡುತ್ತಿದೆ `ಕಾಂತಾರ’ ಸಿನಿಮಾ.

ಇನ್ನೂ `ಕಾಂತಾರ’ ಚಿತ್ರದ ವರ್ಲ್ಡ್ ವೈಡ್ ಕಲೆಕ್ಷನ್‌ನಲ್ಲಿಯೂ ಹಿಂದೆ ಬಿದ್ದಿಲ್ಲ. `ಕಾಂತಾರ’ ಒಟ್ಟು 332 ಕೋಟಿ ಬಾಚಿ, ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

Live Tv

Leave a Reply

Your email address will not be published. Required fields are marked *

Back to top button