ಮೈಸೂರು: ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇದ್ದ ಹೋಟೆಲ್ ಮುಂದೆ ರಮ್ಯಾ ರಘುಪತಿ ಅವರು ದೊಡ್ಡ ಹೈಡ್ರಾಮಾ ಮಾಡಿದ್ದಾರೆ.
Advertisement
ಮೈಸೂರಿನ ಹುಣಸೂರು ರಸ್ತೆಯ ಹೋಟೆಲ್ ಒಂದರಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಒಂದೇ ರೂಮ್‌ನಲ್ಲಿದ್ದರು. ಹೀಗಾಗಿ ರೂಮ್ ಬಳಿಯೇ ಕಾದು ಕುಳಿತಿದ್ದ ರಮ್ಯಾ ರಘುಪತಿ, ಪತಿ ನರೇಶ್, ಪವಿತ್ರಾ ಹೊರ ಬರುತ್ತಿದ್ದಂತೆಯೇ ಚಪ್ಪಲಿಯಲ್ಲಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಕೂಡಲೇ ಪೊಲೀಸರು ರಮ್ಯಾ ರಘುಪತಿಯನ್ನು ತಡೆದಿದ್ದಾರೆ. ಇದನ್ನೂ ಓದಿ: ನಟಿ ಪವಿತ್ರಾ ಲೋಕೇಶ್ ಭಾವನೆ ಘಾಸಿಗೊಳಿಸಲಾರೆ ಎಂದ ಸುಚೇಂದ್ರ ಪ್ರಸಾದ್
Advertisement
ನಂತರ ಪವಿತ್ರಾ ಲೋಕೇಶ್ ಹಾಗೂ ನರೇಶ್‍ಗೆ ಅವಾಚ್ಯ ಶಬ್ದಗಳಿಂದ ರಮ್ಯಾ ರಘುಪತಿ ನಿಂದಿಸಿದ್ದಾರೆ. ಈ ವೇಳೆ ನರೇಶ್ ಅವರು ನೀನೊಬ್ಬಳು ವಂಚಕಿ, ಮೋಸಗಾತಿ ಎಂದು ಜೋರಾಗಿ ಕಿರುಚಾಡುತ್ತಾ, ವಿಜಲ್ ಹೊಡೆಯುತ್ತಾ ಲಿಫ್ಟ್ ಮೂಲಕ ತೆರಳಿದರು. ಇದನ್ನೂ ಓದಿ: Exclusive- ನನ್ನ ಜೊತೆ ಇರೋದು ನನ್ನದೇ ಒಡವೆ, ನರೇಶ್ ಪತ್ನಿ ರಮ್ಯಾದ್ದಲ್ಲ : ನಟಿ ಪವಿತ್ರಾ ಲೋಕೇಶ್