CinemaKarnatakaLatestMain PostSandalwood

ನಟಿ ಪವಿತ್ರಾ ಲೋಕೇಶ್ ಭಾವನೆ ಘಾಸಿಗೊಳಿಸಲಾರೆ ಎಂದ ಸುಚೇಂದ್ರ ಪ್ರಸಾದ್

ತೆಲುಗು ನಟ ನರೇಶ್ ಮತ್ತು ಅವರ ಪತ್ನಿ ರಮ್ಯಾ ಕೌಟುಂಬಿಕ ಗಲಾಟೆಯು ಸುಚೇಂದ್ರ ಪ್ರಸಾದ್ ಮತ್ತು ಪವಿತ್ರಾ ಲೋಕೇಶ್ ಬಾಳಿನಲ್ಲಿ ಬಿರುಗಾಳಿ ಎಬ್ಬಿಸಿದೆ. ತನ್ನ ಪಾಡಿಗೆ ತಾನು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಸುಚೇಂದ್ರ ಪ್ರಸಾದ್ ಅವರನ್ನು ಸುಖಾಸುಮ್ಮನೆ ಎಳೆತಂದು, ಅವರ ಖಾಸಗಿ ವಿಚಾರಗಳನ್ನು ಬಹಿರಂಗವಾಗಿ ಮಾತಾಡುವಂತಾಗಿದೆ. ಅಲ್ಲದೇ, ಪವಿತ್ರಾ ಲೋಕೇಶ್ ಮತ್ತು ಸುಚೇಂದ್ರ ಪ್ರಸಾದ್ ಅವರ ವೈಹಿವಾಹಿಕ ಜೀವನ ಕುರಿತು ಇದೀಗ ಚರ್ಚೆ ಶುರುವಾಗಿದೆ.

ಸುಚೇಂದ್ರ ಪ್ರಸಾದ್ ಅವರ ಧ್ವನಿ ಎನ್ನಲಾದ ಆಡಿಯೋವೊಂದರಲ್ಲಿ ‘ಪವಿತ್ರಾ ಲೋಕೇಶ್ ದುಡ್ಡಿಗಾಗಿ ನರೇಶ್ ಹಿಂದೆ ಹೋಗಿದ್ದಾರೆ’ ಎನ್ನುವ ಅರ್ಥದಲ್ಲಿ ಮಾತನಾಡಲಾಗಿತ್ತು. ನರೇಶ್ ಜೊತೆ ಪವಿತ್ರಾ ಆರು ತಿಂಗಳು ಕೂಡ ಇರುವುದಿಲ್ಲ ಎನ್ನುವ ಮಾತುಗಳೂ ಇದ್ದವು. ಈ ಕುರಿತು ಪವಿತ್ರಾ ಲೋಕೇಶ್ ಕೂಡ ತಿರುಗೇಟು ನೀಡಿದ್ದಾರೆ. ನನಗೆ ಹಣದ ಆಸೆ ಇದ್ದರೆ ಏನೂ ಇಲ್ಲದೇ ಇದ್ದ ಸುಚೇಂದ್ರ ಪ್ರಸಾದ್ ಜೊತೆ ಜೀವನ ನಡೆಸುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:`ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ

ಸುಚೇಂದ್ರ ಪ್ರಸಾದ್ ಅವರ ಜೊತೆ ಹನ್ನೊಂದು ತಿಂಗಳು ಕಾಲ ಜೀವನ ನಡೆಸಿದರೂ, ಅವರೊಂದಿಗೆ ನನ್ನ ಮದುವೆ ಆಗಿಲ್ಲವೆಂದು ಪವಿತ್ರಾ ಲೋಕೇಶ್ ಹೇಳಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಎರಡು ಮಕ್ಕಳ ದಂಪತಿ ಹೀಗೆ ಹೇಳಬಹುದೆ? ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಆದರೆ, ಈ ಕುರಿತು ಸುಚೇಂದ್ರ ಪ್ರಸಾದ್ ಕೂಲ್ ಆಗಿಯೇ ಉತ್ತರಿಸಿದ್ದು, ಪವಿತ್ರಾ ಲೋಕೇಶ್ ಹೇಳಿಕೆಗೆ ಗೌರವ ಕೊಡುವುದಾಗಿ ತಿಳಿಸಿದ್ದಾರೆ. ಈ ಕುರಿತು ನಾನೇನೂ ಮಾತನಾಡಲಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Live Tv

Leave a Reply

Your email address will not be published.

Back to top button