ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಬಾಲಿವುಡ್ ನ ಹಿರಿಯ ನಟಿ, ಮಾಜಿ ಸಂಸದೆ ಜಯಪ್ರದ ವಿರುದ್ಧ ಉತ್ತರ ಪ್ರದೇಶದ ರಾಂಪೂರ್ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಮೂರು ವರ್ಷಗಳ ಹಿಂದಿನ ಕೇಸ್ ಇದಾಗಿದ್ದು, ಸತತವಾಗಿ ಕೋರ್ಟಿಗೆ ಅವರು ಹಾಜರಾಗದ ಹಿನ್ನೆಲೆಯಲ್ಲಿ ವಾರೆಂಟ್ ಜಾರಿ ಮಾಡಿದ್ದು, ನಟಿಯ ಈ ನಡೆಗೆ ಕೋರ್ಟ್ ಆಕ್ರೋಶ ಕೂಡ ವ್ಯಕ್ತಪಡಿಸಿದೆ.
Advertisement
2019ರ ಲೋಕಸಭೆ ಚುನಾವಣೆ ವೇಳೆ ನಿಯಮಾವಳಿಗಳನ್ನು ಅವರು ಉಲ್ಲಂಘಿಸಿದ್ದರು ಅನ್ನುವ ಕಾರಣಕ್ಕಾಗಿ ಜಯಪ್ರದ ವಿರುದ್ಧ 2 ಕೇಸ್ ದಾಖಲಾಗಿದ್ದವು. ರಾಂಪೂರ್ ಕೋರ್ಟ್ ವಿಚಾರಣೆಗಾಗಿ ಹಾಜರಾಗುವಂತೆ ನೋಟಿಸ್ ನೀಡಿದ್ದರೂ, ಜಯಪ್ರದ ಗೈರು ಹಾಜರಾಗಿದ್ದರಿಂದ ಕೋರ್ಟ್ ಗೆ ಅವರನ್ನು ಹಾಜರುಪಡಿಸಬೇಕು ಎಂದು ರಾಂಪೂರ್ ಎಸ್‌ಪಿಗೆ ಕೋರ್ಟ್ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಜನವರಿ 9ಕ್ಕೆ ನಿಗದಿ ಮಾಡಿದೆ. ಇದನ್ನೂ ಓದಿ: ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ
Advertisement
Advertisement
2019ರಲ್ಲಿ ನಡೆದ ಚುನಾವಣೆಯಲ್ಲಿ ಜಯಪ್ರದ ಅವರು ರಾಂಪುರದ ಕಾಮ್ರೀ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಚುನಾವಣಾ ನಿಯಮವನ್ನು ಉಲ್ಲಂಘನೆ ಮಾಡಿದ್ದರು. ಹಾಗಾಗಿ ಇವರ ಮೇಲೆ ಅದೇ ಸ್ಟೇಶನ್‌ನಲ್ಲೇ ಕೇಸ್ ದಾಖಲಾಗಿತ್ತು. ಎರಡನೇ ಪ್ರಕರಣವು ಸ್ವರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿತ್ತು. ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು.