ತೈವಾನ್‌ನಲ್ಲಿ ಮತ್ತೆ ಪ್ರಬಲ ಭೂಕಂಪ – ನೆಲಕ್ಕುರುಳಿದ ಬೃಹತ್‌ ಕಟ್ಟಡಗಳು

1 Min Read

ತೈಪೆ: ತೈವಾನ್‌ನ (Taiwan) ಈಶಾನ್ಯ ಕರಾವಳಿ ನಗರವಾದ ಯಿಲಾನ್‌ನಲ್ಲಿ ಶುಕ್ರವಾರ 7.0 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದೆ.

73 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ. ಇನ್ನೂ ಭೂಮಿ ಕಂಪಿಸಿದ ಹಿನ್ನೆಲೆ ರಾಜಧಾನಿ ತೈಪೆಯಲ್ಲಿ ಬೃಹತ್‌ ಕಟ್ಟಡಗಳು ನೆಲಕ್ಕುರುಳಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಗಂಟೆಗೆ 700 ಕಿ.ಮೀ ವೇಗದಲ್ಲಿ ಸಂಚರಿಸುವ ರೈಲು ಅಭಿವೃದ್ಧಿಪಡಿಸಿದ ಚೀನಾ – ಜಸ್ಟ್ 2 ಸೆಕೆಂಡ್‌ನಲ್ಲಿ ಕಣ್ಣ ಮುಂದೆಯೇ ಪಾಸ್ ಆಗುತ್ತೆ

ರಕ್ಷಣಾ ತಂಡಗಳು ಈಗಾಗಲೇ ಸ್ಥಳಕ್ಕೆ ದೌಡಾಯಿಸಿದ್ದು, ಕಟ್ಟಡ ಅವಶೇಷಗಳ ಅಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಇದರೊಂದಿಗೆ ಹಾನಿಯ ಪ್ರಮಾಣವನ್ನು ಅಂದಾಜು ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಸಂಸ್ಥೆ ತಿಳಿಸಿದೆ.

ಕಳೆದ ಬುಧವಾರ ತೈವಾನ್‌ನಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದು ಈವಾರದಲ್ಲಿ ನಡೆದ 2ನೇ ಭೂಕಂಪ ಆಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ಭಾರೀ ಹಿಮಪಾತ – 1,000 ಕ್ಕೂ ಹೆಚ್ಚು ವಿಮಾನ ಸೇವೆ ರದ್ದು, 4,000 ವಿಮಾನ ಹಾರಾಟ ವಿಳಂಬ

ಇನ್ನೂ 2016 ರಲ್ಲಿ ದಕ್ಷಿಣ ತೈವಾನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಇದಕ್ಕೂ ಮುನ್ನ 1999 ರಲ್ಲಿ 7.3 ತೀವ್ರತೆಯ ಭೂಕಂಪದಲ್ಲಿ 2,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

Share This Article