ಬದುಕು ದೊಡ್ಡದು, ಎಲ್ಲಾ ಕನ್ನಡ ಸಿನಿಮಾಗಳನ್ನ ಸಂಭ್ರಮಿಸೋಣ – ಫ್ಯಾನ್ಸ್‌‌ ವಾರ್‌ ಬಗ್ಗೆ ಡಾಲಿ, ಸಪ್ತಮಿ ರಿಯಾಕ್ಷನ್‌

1 Min Read

ಬೆಳಗಾವಿ: ಅಭಿಮಾನಿಗಳು (Fans) ಹೊಡೆದಾಡಿಕೊಳ್ಳುವ ಅವಶ್ಯಕತೆಯಿಲ್ಲ. ಎಲ್ಲದಕ್ಕಿಂತ ನಿಮ್ಮ ನಿಮ್ಮ ಬದುಕು ದೊಡ್ಡದು. ಬದುಕು ಗಟ್ಟಿಯಾಗಿ ಕಟ್ಟಿಕೊಂಡರೆ ನಿಮ್ಮ ಸ್ಟಾರ್‌ಗಳಿಗೆ ಅದಕ್ಕಿಂತಲೂ ಹೆಚ್ಚಿನ ಖುಷಿ ಮತ್ತೊಂದಿಲ್ಲ ಎಂದು ನಟ ಡಾಲಿ ಧನಂಜಯ್‌ (Daali Dhananjaya) ಕಿವಿಮಾತು ಹೇಳಿದ್ದಾರೆ.

ಬೆಳಗಾವಿ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ನಟ ಡಾಲಿ ಹಾಗೂ ಕಾಂತಾರ ಬೆಡಗಿ ಸಪ್ತಮಿ ಗೌಡ (Sapthami Gowda) ಫ್ಯಾನ್ಸ್‌ ವಾರ್‌ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ – ಪಬ್‌, ಕ್ಲಬ್‌, ಬಾರ್‌ಗಳಿಗೆ ಬೆಂಗಳೂರು ಪೊಲೀಸರಿಂದ 30 ಮಾರ್ಗಸೂಚಿ

ಅಭಿಮಾನಿಗಳು ಎಲ್ಲ ಕನ್ನಡ ಸಿನಿಮಾಗಳನ್ನ (Kannada Cinema) ನೋಡಿ. ಫ್ಯಾನ್ಸ್‌ ವಾರ್‌ಗಿಂತಲೂ ನಿಮ್ಮ ನಿಮ್ಮ ಬದುಕು ನಿಮಗೆ ದೊಡ್ಡದು, ಅದನ್ನ ಗಟ್ಟಿಯಾಗಿ ಕಟ್ಟಿಕೊಳ್ಳಿ. ನಿಮ್ಮ ಸ್ಟಾರ್‌ಗಳಿಗೆ ಅದಕ್ಕಿಂತ ಖುಷಿ ಮತ್ತೊಂದಿರಲ್ಲ. ಎಲ್ಲರಿಗೂ ಕುಟುಂಬ ಇರುತ್ತೆ, ಅಪ್ಪ-ಅಮ್ಮ ಇರ್ತಾರೆ, ಅದು ಎಲ್ಲದಕ್ಕಿಂತ ಮುಖ್ಯ. ಹೊಡೆದಾಟುವ ಅಗತ್ಯವಿಲ್ಲ. ಎಲ್ಲ ಕನ್ನಡ ಸಿನಿಮಾಗಳನ್ನ ನೋಡಿ ಸೆಲೆಬ್ರೇಟ್‌ ಮಾಡೋಣ. ಸಿನಿಮಾ ಇಷ್ಟ ಆಗಿಲ್ಲ ಅಂದ್ರೆ ಹೇಳಿ, ತಿದ್ದಿಕೊಳ್ಳುತ್ತೇವೆ ಅಂತ ಹೇಳಿದ್ದಾರೆ.

ಇನ್ನೂ ಕಾಂತಾರ ಬೆಡಗಿ ಸಪ್ತಮಿ ಗೌಡ ಮಾತನಾಡಿ, ದೊಡ್ಡ ಮಟ್ಟದಲ್ಲಿ ಬೆಳಗಾವಿ ಉತ್ಸವ ಆಗ್ತಿರೋದು ಖುಷಿ ಆಗ್ತಿದೆ. ಈ ಮುಂಚೆಯೂ ಬೆಳಗಾವಿಗೆ ಬಂದಿದ್ದೇನೆ. ಆದ್ರೆ ಉತ್ಸವಕ್ಕೆ ಬರ್ತಿರೋದು ಖುಷಿ ಆಗಿದೆ ಎಂದರು. ಇದನ್ನೂ ಓದಿ: ಮಾರ್ಕ್ ಸಿನಿಮಾಗೆ ಪೈರಸಿ ಕಾಟ; ಎಷ್ಟು ಲಿಂಕ್ ಡಿಲೀಟ್ ಮಾಡಿಸಿದ್ದು..?

ಅಭಿಮಾನಿಗಳ ಕಿತ್ತಾಟ ವಿಚಾರವಾಗಿ ಮಾತನಾಡಿ, ಅಭಿಮಾನಿಗಳು ಎಲ್ಲರ ಸಿನಿಮಾ ನೋಡಿ. ಸಿನಿಮಾ ಮಾಡ್ತಿರೋದೇ ಕನ್ನಡದಲ್ಲಿ, ಕನ್ನಡ ಸಿನಿಮಾಗಳೂ ಕೂಡ ಒಂದು ಹೋರಾಟ. ಕನ್ನಡ ಚಿತ್ರವನ್ನ ಬೆಂಬಲಿಸಿದ್ರೆ ಕಲಾವಿದರ ಜೀವನ ನಡೆಯುತ್ತೆ. ಹಾಗಾಗಿ ಎಲ್ಲ ನಟ, ನಟಿಯರ ಕನ್ನಡ ಸಿನಿಮಾಗಳನ್ನ ನೋಡೋಣ, ಸಂಭ್ರಮಿಸೋಣ ಎಂದು ಫ್ಯಾನ್ಸ್‌ಗೆ ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಕಪಾಳಕ್ಕೆ ಹೊಡಿಸ್ಕೊಳ್ಳುವಷ್ಟು ಒಳ್ಳೆಯವನಲ್ಲ: ಸುದೀಪ್‌ 

Share This Article