ಚಿಕ್ಕೋಡಿ: ಲಕ್ಷ್ಮಣ ಸವದಿ ಖರ್ಚು ಮಾಡುತ್ತಿರುವ ಹಣ ಬಿಜೆಪಿಯದ್ದು, ಇದರಿಂದಾಗಿ ಸವದಿ ಅವರಿಂದ ದುಡ್ಡು ಪಡೆದು ಬಿಜೆಪಿಗೆ (BJP) ಮತ ಚಲಾಯಿಸಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ತಿಳಿಸಿದರು.
ಪ್ರಚಾರದ ವೇಳೆ ಮಾತನಾಡಿದ ಅವರು, ಸವದಿ (Laxman Savadi) ಕಣ್ಣೀರು ಹಾಕಿ ನಾಟಕ ಮಾಡುತ್ತಿದ್ದಾರೆ. ಪಕ್ಷದಿಂದ ಅವರಿಗೆ ಎಲ್ಲವನ್ನು ನೀಡಲಾಗಿತ್ತು. ಆದರೆ ಅವರು ಅಧಿಕಾರ ನೀಡಿದ ಎಲ್ಲರಿಗೂ ಮೋಸ ಮಾಡಿದ್ದಾರೆ. ಬಿ.ಎಲ್ ಸಂತೋಷ್ (BL Santhosh), ಉಮೇಶ್ ಕತ್ತಿಗೂ (Umesh Katti) ಸವದಿ ಮೋಸ ಮಾಡಿದ್ದಾರೆ. ಅವರಿಗೆ ಈ ಚುನಾವಣೆಯಲ್ಲಿ (Election) ತಕ್ಕ ಉತ್ತರವನ್ನು ನೀಡಬೇಕು ಎಂದು ಸವದಿ ವಿರುದ್ಧ ಕಿಡಿಕಾರಿದರು.
- Advertisement -
- Advertisement -
ಸವದಿ ಅವರು ನಮ್ಮನ್ನು ತುಂಬಾ ಕೀಳು ಮಟ್ಟದಿಂದ ನೋಡಿದರು. ಅದರಲ್ಲೂ ಅವರು ಡಿಸಿಎಂ ಆದ ಮೇಲೆ ನಮ್ಮನ್ನು ಕೀಳುಮಟ್ಟದಿಂದ ನೋಡಿದ್ದಾರೆ. ಇಲ್ಲಿ ಲಕ್ಷ್ಮಣ ಸವದಿ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎದೆ ಉಬ್ಬಿಸಿ ಮಾತನಾಡುತ್ತಿದ್ದ ಸವದಿ ತಮ್ಮ ಕಷ್ಟದ ದಿನಗಳನ್ನು ಮರೆತಿದ್ದಾರೆ. ನಮ್ಮ ತಂದೆ, ತಾಯಿಯು ಕೂಲಿ ಮಾಡಿದ್ದಾರೆ, ನಾವು ನಮ್ಮ ಕಷ್ಟದ ದಿನಗಳನ್ನು ಮರೆತಿಲ್ಲ ಎಂದರು. ಇದನ್ನೂ ಓದಿ: ರಾಜ್ಯ ನಾಯಕರಿಗೆ ಕ್ಲಾಸ್ – ಬಂಡಾಯ ಶಮನಕ್ಕೆ ಶಾ ಮದ್ದು
- Advertisement -
- Advertisement -
ನನಗೆ ಅಥಣಿ ರಾಜಕೀಯವಾಗಿ ಶಕ್ತಿ ತುಂಬಿದ ಕ್ಷೇತ್ರ ಎಂದ ಅವರು, ಕುಮಟಳ್ಳಿಗೆ ಸಚಿವ ಸ್ಥಾನ ನೀಡಲಿಲ್ಲ ಮೋಸವಾಗಿದೆ ಎಂದು ನಾವು ಪಕ್ಷವನ್ನು ಬಿಡಬೇಕಾ? ಆದರೆ ನಾವು ಪಕ್ಷದಲ್ಲಿ ಇದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ನಾಮಪತ್ರ ತಿರಸ್ಕೃತ ಭೀತಿಯಲ್ಲಿದ್ದಾರೆ ಸವದತ್ತಿ ಬಿಜೆಪಿ ಅಭ್ಯರ್ಥಿ