ನಟಿ ಆಶಿಕಾ ರಂಗನಾಥ್ (Ashika Ranganath) ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ‘ಮದಗಜ’ ನಟಿ ಆಶಿಕಾ ನಟಿಸುತ್ತಿದ್ದಾರೆ. ಸೌತ್‌ನಲ್ಲಿ ಕನ್ನಡದ ನಟಿಯರಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನೂ ಓದಿ: ರೀಲ್ಸ್ ಕೇಸ್ – ರಜತ್ ಜೈಲಿಗೆ, ವಿನಯ್‌ಗೆ 500 ರೂ. ದಂಡ
ರಶ್ಮಿಕಾ ಮಂದಣ್ಣ, ಶ್ರೀಲೀಲಾರಂತೆಯೇ ಸೌತ್‌ನಲ್ಲಿ ಮೋಡಿ ಮಾಡಲು ಆಶಿಕಾ ರೆಡಿಯಾಗಿದ್ದಾರೆ. ಸದ್ಯ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’, ಕಾರ್ತಿ ನಟನೆಯ ‘ಸರ್ದಾರ್ 2’ನಲ್ಲಿ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ. ಈ ಸ್ಟಾರ್ ನಟರ ಸಿನಿಮಾದಲ್ಲಿ ನಟನೆಗೆ ಸ್ಕೋಪ್ ಇರುವ ಪಾತ್ರಗಳು ಅವರಿಗೆ ಸಿಕ್ಕಿದೆ. ಇದನ್ನೂ ಓದಿ:ಶ್ರೀದೇವಿ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧ ಎಂದ ಪೂಜಾ ಹೆಗ್ಡೆ
ಸೌತ್‌ನಲ್ಲಿ ಬ್ಯುಸಿಯಾಗಿದ್ರು ಕನ್ನಡದ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಸೇರಿದಂತೆ ಹಲವು ಚಿತ್ರಗಳಲ್ಲಿ ಆಶಿಕಾ ನಟಿಸುತ್ತಿದ್ದಾರೆ.
ಈಗಾಗಲೇ ಸೌತ್‌ನಲ್ಲಿ ನಂದಮೂರಿ ಕಲ್ಯಾಣ್ ಜೊತೆ ಅಮಿಗೋಸ್, ನಾಗಾರ್ಜುನ ಜೊತೆ ನಾ ಸಾಮಿ ರಂಗ, ಸಿದ್ಧಾರ್ಥ್ ಜೊತೆ ಮಿಸ್ ಯೂ ಚಿತ್ರಗಳಲ್ಲಿ ನಾಯಕಿಯಾಗಿ ಆಶಿಕಾ ನಟಿಸಿದ್ದಾರೆ.