ಬೆಂಗಳೂರು: ರಾಮ ಮಂದಿರ ದೇಣಿಗೆ ಅಕ್ರಮ (Ram Mandir Donation Row) ವಿಚಾರ ಮನಸಿಗೆ ಘಾಸಿ ಉಂಟು ಮಾಡಿದೆ. ಯೋಗಿ ಯಾರ ತಪ್ಪನ್ನೂ ಸಹಿಸಲ್ಲ ಎಂದು ಬಿಜೆಪಿ ನಾಯಕ ಸಿ.ಟಿ ರವಿ (CT Ravi) ತಿಳಿಸಿದ್ದಾರೆ.
ರಾಮ ಮಂದಿರ ದೇಣಿಗೆ ಅಕ್ರಮ ವಿಚಾರ ಮತ್ತು ಬಿಜೆಪಿ – ಆರ್‌ಎಸ್‌ಎಸ್‌ಗೆ ಡೊನೇಷನ್ ಫಸ್ಟ್ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಮ ಮಂದಿರ ನಿರ್ಮಾಣ ಕಾರ್ಯ 500 ವರ್ಷಗಳ ಶ್ರಮ. ಇದಕ್ಕಾಗಿ ಲಕ್ಷಾಂತರ ಜನ ಪ್ರಾಣ ಕೊಟ್ಟಿದ್ದಾರೆ. 1 ರೂ.ನಿಂದ ಕೋಟಿ ರೂಪಾಯಿ ಡೊನೇಷನ್ ಕೊಟ್ಟಿದ್ದಾರೆ. ಆ ಭಾವನೆಗೆ ಬೆಲೆ ಕಟ್ಟಲು ಆಗಲ್ಲ. ಆ ಭಾವನೆಗೆ ಘಾಸಿ ಆಗಬಾರದು. ಈ ಸುದ್ದಿ ನಮ್ಮ ಮನಸಿಗೆ ಘಾಸಿ ಮಾಡಿದೆ ಎಂದರು. ಇದನ್ನೂ ಓದಿ: ಬ್ಯಾಂಕ್‌ನಲ್ಲಿ 6.62 ಕೋಟಿ ಗೋಲ್ಮಾಲ್ – ಆರೋಪ ಎದುರಿಸ್ತಿದ್ದ ಅಧ್ಯಕ್ಷ 3 ಪುಟಗಳ ಡೆತ್‌ನೋಟ್, ವಿಡಿಯೋ ಮಾಡಿಟ್ಟು ಆತ್ಮಹತ್ಯೆ
ರಾಮ ಮಂದಿರ ವಿರೋಧಿಗಳಿಗೆ ಈಗ ಯಾಕೆ ಸಂಕಟ ಆಗುತ್ತಿದೆ. ಅವರ ಉದ್ದೇಶ ರಾಮ ಮಂದಿರದ ದೇಣಿಗೆ ಕುರಿತು ಅಲ್ಲ. ರಾಮನ ಅಸ್ತಿತ್ವ ಪ್ರಶ್ನೆ ಮಾಡಿದವರು ಇವರು. ರಾಜಕೀಯಕ್ಕೆ ಇದನ್ನ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮಿಸ್ಟರ್ ಪ್ರಿಯಾಂಕ್ ಖರ್ಗೆ ಅವರೇ ಈ ಟ್ರಸ್ಟ್ನಲ್ಲಿ ಬಿಜೆಪಿಯ ಯಾವ ಪದಾಧಿಕಾರಿಗಳೂ ಇರಲಿಲ್ಲ. ರಾಮ ಮಂದಿರಕ್ಕಾಗಿ ನಾವು ಕರ ಸೇವೆಗೆ ಹೋಗಿದ್ವಿ, ಜೈಲಿಗೆ ಹೋಗಿದ್ವಿ. ನೀವು ರಾಮಮಂದಿರ ಆಗಲಿ ಅಂತ ಹೇಳೋಕಾಗದೇ ಹೇಡಿಗಳು ಆಗಿದ್ರಿ ಎಂದು ಕಿಡಿಕಾರಿದರು. ಇದನ್ನೂ ಓದಿ: ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ – ಹೊತ್ತಿ ಉರಿದ ಆಪರೇಷನ್ ಥಿಯೇಟರ್
ಚಿಂತೆ ಮಾಡಬೇಡಿ ಅಲ್ಲಿ ಯೋಗಿ (Yogi Adityanath) ಇದ್ದಾರೆ. ಯೋಗಿ ಯಾರ ತಪ್ಪನ್ನೂ ಸಹಿಸಲ್ಲ. ಹಾಗಾಗಿ 8 ಜನರನ್ನು ಜೈಲಿಗೆ ಹಾಕಿದ್ದಾರೆ. ನಿಮ್ಮ ಬಳಿ ಬೇರೆ ಮಾಹಿತಿ ಇದ್ದರೆ ಎಸ್‌ಐಟಿಗೆ ಕೊಡಲಿ ಅಂತ ತಿರುಗೇಟು ಕೊಟ್ಟರು. ಕಾಂಗ್ರೆಸ್ ಅವರಿಗೆ ರಾಮನ ಬಗ್ಗೆ ಪ್ರೀತಿ ಇಲ್ಲ. ರಾಮ ಮಂದಿರ ನಿರ್ಮಾಣಕ್ಕೆ ನೀವು ಅಡತಡೆ ನಿವಾರಿಸಿಲ್ಲ, ವಿರೋಧಿಸಿದ್ರಿ. ಈಗ ಯಾಕೆ ಮಾತನಾಡುತ್ತೀರಾ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಮಮಂದಿರ ದೇಣಿಗೆ ಕಳ್ಳತನ ಕೇಸಲ್ಲಿ ಮುಸ್ಲಿಂ ಇದ್ದಿದ್ರೆ ಇಷ್ಟೊತ್ತಿಗೆ ಎನ್‌ಕೌಂಟರ್ ಮಾಡ್ತಿದ್ರು: ಓವೈಸಿ ವಾಗ್ದಾಳಿ
