ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ; ಇಂದಿನಿಂದ ಪೂಜಾಕಾರ್ಯ ಆರಂಭ – ಯಾವ ದಿನ ಏನು ಕಾರ್ಯಕ್ರಮ?

Public TV
2 Min Read
ram mandir 3

ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ (Ayodhya) ಭವ್ಯವಾದ ರಾಮಮಂದಿರದ (Ram Mandir) ಉದ್ಘಾಟನೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಮಂದಿರದಲ್ಲಿ ರಾಮಲಲ್ಲಾನ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಇಂದಿನಿಂದ ಆರಂಭವಾಗಲಿದೆ. ಏಳು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಜನವರಿ 22ರಂದು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2020 ಆಗಸ್ಟ್‌ 5 ರಂದು ಭವ್ಯವಾದ ರಾಮಮಂದಿರದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಈಗ ಅಯೋಧ್ಯೆಯು ಬೃಹತ್ ಪರಿವರ್ತನೆಗೆ ಒಳಗಾಗಿದೆ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದಲ್ಲಿ ಚಿನ್ನದ ಬಾಗಿಲು ಅಳವಡಿಕೆ ಕಾರ್ಯ ಪೂರ್ಣ

RAMMANDIR

ದೇವಾಲಯದ ಟ್ರಸ್ಟ್‌ನಿಂದ 7,000 ಕ್ಕೂ ಹೆಚ್ಚು ಜನರನ್ನು ಆಹ್ವಾನಿಸಲಾಗಿದೆ. ಅವರಲ್ಲಿ ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ, ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಸೇರಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿರುವ ದೇವಸ್ಥಾನದಲ್ಲಿ ನಡೆಯುವ ಅದ್ಧೂರಿ ಸಮಾರಂಭಕ್ಕೆ ನಗರ ಸಜ್ಜುಗೊಳ್ಳುತ್ತಿದೆ.

ಏಳು ದಿನಗಳ ಕಾಲ (ಜನವರಿ 16 ರಿಂದ 22 ರ ವರೆಗೆ) ಅಯೋಧ್ಯೆಯಲ್ಲಿ ಏನೇನು ಕಾರ್ಯಕ್ರಮಗಳು ನಡೆಯಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ನಾಳೆಯಿಂದ್ಲೇ ಪೂರ್ವಭಾವಿ ಪೂಜೆಗಳು ಆರಂಭ: ಚಂಪತ್‌ ರೈ

ayodhya ram mandir

ಜನವರಿ 16
ಮಹಾಮಸ್ತಕಾಭಿಷೇಕದ ವಿಧಿವಿಧಾನಗಳು ಇಂದಿನಿಂದ ಆರಂಭವಾಗಲಿವೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ದೇವಸ್ಥಾನದ ಟ್ರಸ್ಟ್ ನೇಮಿಸಿದ ಆತಿಥೇಯರು ಪ್ರಾಯಶ್ಚಿತ್ತ ಸಮಾರಂಭವನ್ನು ನಡೆಸಲಿದ್ದಾರೆ. ಸರಯೂ ನದಿಯ ದಡದಲ್ಲಿ ‘ದಶವಿಧ’ ಸ್ನಾನ, ವಿಷ್ಣು ಪೂಜೆ ನಡೆಯಲಿದೆ.

ಜನವರಿ 17
ರಾಮಲಲ್ಲಾ ಮೂರ್ತಿಯನ್ನು ಹೊತ್ತ ಮೆರವಣಿಗೆ ಅಯೋಧ್ಯೆಗೆ ತಲುಪಲಿದೆ. ಮಂಗಳ ಕಲಶದಲ್ಲಿ ಸರಯು ಜಲವನ್ನು ಹೊತ್ತ ಭಕ್ತರು ರಾಮಜನ್ಮಭೂಮಿ ದೇವಸ್ಥಾನವನ್ನು ತಲುಪಲಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಕರುನಾಡಿನ ರಾಮ – ಮೈಸೂರಿನ ಯೋಗಿರಾಜ್‌ ನಿರ್ಮಿಸಿದ ಮೂರ್ತಿ ಫೈನಲ್‌

Ram Mandir New

ಜನವರಿ 18
ಗಣೇಶ ಅಂಬಿಕಾ ಪೂಜೆ, ವರುಣ ಪೂಜೆ, ಮಾತೃಕಾ ಪೂಜೆ, ಬ್ರಾಹ್ಮಣ ವರಣ ಮತ್ತು ವಾಸ್ತು ಪೂಜೆಯೊಂದಿಗೆ ಔಪಚಾರಿಕ ಆಚರಣೆಗಳು ಪ್ರಾರಂಭವಾಗುತ್ತವೆ.

ಜನವರಿ 19
ಪವಿತ್ರ ಅಗ್ನಿಯನ್ನು ಬೆಳಗಿಸಲಾಗುತ್ತದೆ. ನಂತರ ‘ನವಗ್ರಹ’ ಮತ್ತು ‘ಹವನ’ (ಬೆಂಕಿಯ ಸುತ್ತಲಿನ ಪವಿತ್ರ ಆಚರಣೆ) ಸ್ಥಾಪನೆಯಾಗುತ್ತದೆ. ಇದನ್ನೂ ಓದಿ: Ayodhya Ram Mandir: ರಾಮನೂರಿನಲ್ಲಿ ತಲೆಎತ್ತಲಿದೆ ದೇಶದ ಮೊದಲ 7 ಸ್ಟಾರ್‌ ಸಸ್ಯಹಾರಿ ಹೋಟೆಲ್‌

ಜನವರಿ 20
ಜನವರಿ 20 ರಂದು ರಾಮ ಜನ್ಮಭೂಮಿ ದೇವಸ್ಥಾನದ ಗರ್ಭಗುಡಿಯನ್ನು ಸರಯು ನದಿ ನೀರಿನಿಂದ ತೊಳೆಯಲಾಗುತ್ತದೆ. ನಂತರ ವಾಸ್ತು ಶಾಂತಿ ಮತ್ತು ‘ಅನ್ನಾಧಿವಾಸ್’ ಆಚರಣೆಗಳು ನಡೆಯುತ್ತವೆ.

Ayodhya Ram Mandir 1

ಜನವರಿ 21
ರಾಮಲಲ್ಲಾ ವಿಗ್ರಹಕ್ಕೆ 125 ಕಲಶಗಳಲ್ಲಿ ಸ್ನಾನ ಮಾಡಿಸಲಾಗುವುದು. ನಂತರ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಗುವುದು.

ಜನವರಿ 22
ಕಾರ್ಯಕ್ರಮಕ್ಕಾಗಿ ಆಹ್ವಾನಿತರೊಂದಿಗೆ 100 ಕ್ಕೂ ಹೆಚ್ಚು ಚಾರ್ಟರ್ಡ್ ಜೆಟ್‌ಗಳು ಅಯೋಧ್ಯೆಗೆ ಬಂದಿಳಿಯಲಿವೆ. ಅಂತಿಮ ದಿನದ ಸಮಾರಂಭದಲ್ಲಿ 150 ದೇಶಗಳ ಭಕ್ತರು ಅಯೋಧ್ಯೆ ‘ಪ್ರಾಣ ಪ್ರತಿಷ್ಠೆ’ಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮಧ್ಯಾಹ್ನ 12:30 ರಿಂದ 1 ಗಂಟೆಯ ವರೆಗೆ ‘ಪ್ರಾಣ ಪ್ರತಿಷ್ಠೆ’ ಸಮಾರಂಭ ನಡೆಯಲಿದ್ದು, ರಾಮಲಲ್ಲಾ ದೇವರ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠೆ ದಿನ ಶಾಸಕ ಅಭಯ ಪಾಟೀಲ್‌ ಕಡೆಯಿಂದ 5 ಲಕ್ಷ ಲಾಡು ವಿತರಣೆ

ಜನವರಿ 21 ಮತ್ತು 22 ರಂದು ದೇವಾಲಯವನ್ನು ಮುಚ್ಚಲಾಗುವುದು ಮತ್ತು ಮರುದಿನ ಜನವರಿ 23 ರಂದು ಭಕ್ತರಿಗಾಗಿ ದೇವಾಲಯ ತೆರೆಯಲಾಗುತ್ತದೆ.

Share This Article