ಅಯೋಧ್ಯೆ: ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಇಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ (Ram Mandir) ಭವ್ಯವಾಗಿ ನೆರವೇರಿತು. ಮಧ್ಯಾಹ್ನ 12:29:08 ಸೆಕೆಂಡ್‌ನಿಂದ 12:30:34 ರವರೆಗಿನ 84 ಸೆಕೆಂಡ್‌ಗಳ ಶುಭ ಅಭಿಜಿನ್ ಲಗ್ನದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನಾ ಮಹೋತ್ಸವ ನೆರವೇರಿತು. ಶ್ರೀರಾಮೋತ್ಸವದ ಪ್ರಧಾನ ಯಜಮಾನ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ, ಮಂತ್ರಘೋಷಗಳ ನಡುವೆ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಿದೆ.
Advertisement
ಮೋದಿ ಕೈಯಲ್ಲಿತ್ತು ಕಮಲ!
ಗರ್ಭಗುಡಿಯನ್ನು ಪ್ರವೇಶಿಸಿದ ಮೋದಿ ಕಮಲದ ಹೂವನ್ನು (Lotus Flower) ತೆಗೆದುಕೊಂಡು ಅನುಷ್ಠಾನ ವಿಧಿವಿಧಾನ ಆರಂಭಿಸಿದರು. ಇವೆಲ್ಲ ಕಾರ್ಯಗಳ ಬಳಿಕ ಮೋದಿ ಅವರು ಕಮಲದ ಹೂವನ್ನು ಬಾಲರಾಮನ ಪಾದಕ್ಕೆ ಸಮರ್ಪಿಸಿದರು. ನಂತರ ಮೋದಿ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆರತಿ ಬೆಳಗಿದರು. ನಂತರ ಮೋದಿ ಬಾಲರಾಮನ ಮುಂದೆ ಸಾಷ್ಟಾಂಗ ವಂದಿಸಿದರು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವ ಸಮಯ ಗೊತ್ತಾ..?
Advertisement
Advertisement
ಈ ವೇಳೆ ದೇವಸ್ಥಾನ ಒಳಗೆ ಮತ್ತು ಹೊರಗೆ ಸೇರಿದ್ದವರು ಶ್ರೀರಾಮ, ಜಯರಾಮ ಘೋಷಣೆ ಕೂಗಿದರು. ಸೇನಾ ಹೆಲಿಕಾಪ್ಟರ್ ಮೂಲಕ ಮಂದಿರದ ಮೇಲೆ ಪುಷ್ಪವೃಷ್ಟಿಯನ್ನೂ ಮಾಡಲಾಯಿತು. ಇದನ್ನೂ ಓದಿ: 35 ನಿಮಿಷದ ಭಾಷಣದಲ್ಲಿ 114 ಬಾರಿ ರಾಮ ನಾಮ ಸ್ಮರಿಸಿದ ಮೋದಿ!