– ಗುಜರಾತ್‌ನ ಆ ಇಬ್ಬರು ಕೊಡುಗೈ ದಾನಿಗಳು ಯಾರು?
ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನೆಗೆ ಸಮರೋಪಾದಿಯಲ್ಲಿ ಸಿದ್ಧತೆ ನಡೆಯುತ್ತಿದೆ. ಜ.22 ರಂದು ಭವ್ಯವಾದ ರಾಮಮಂದಿರ ಉದ್ಘಾಟನೆಯಾಗಲಿದ್ದು, ಅದೇ ದಿನ ರಾಮಲಲ್ಲಾ (ಬಾಲ ರಾಮ) ಗರ್ಭಗುಡಿಯಲ್ಲಿ ಆಸೀನರಾಗಲಿದ್ದಾರೆ. ರಾಮಭಕ್ತರ ದೇಣಿಗೆಯಿಂದ ಅಯೋಧ್ಯೆಯಲ್ಲಿ ಭಗವಾನ್ ರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಪುಣ್ಯ ಕಾರ್ಯಕ್ಕೆ ರಾಮಭಕ್ತರು ಕೊಡುಗೈ ದಾನಿಗಳಾಗಿದ್ದಾರೆ.
Advertisement
ರಾಮಮಂದಿರದ ಮೊದಲ ಮಹಡಿ ಸಂಪೂರ್ಣವಾಗಿ ಸಿದ್ಧವಾಗಿದ್ದು, ಅದರಲ್ಲಿ ರಾಮಲಲ್ಲಾ ವಿಗ್ರಹವನ್ನು ಸ್ಥಾಪಿಸಲಾಗುವುದು. ಇಲ್ಲಿಯವರೆಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮಮಂದಿರಕ್ಕಾಗಿ 5,500 ಕೋಟಿ ರೂ.ಗೂ ಹೆಚ್ಚು ದೇಣಿಗೆ ಪಡೆದಿದೆ. ಅದರಲ್ಲಿ ಗುಜರಾತಿಗಳೇ ಮುಂಚೂಣಿಯಲ್ಲಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಗುಜರಾತ್‌ನ ಇಬ್ಬರು ಗರಿಷ್ಠ ದೇಣಿಗೆ ನೀಡಿದ್ದಾರೆ. ಇದನ್ನೂ ಓದಿ: ಹೃದ್ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ನೆರವಾಗಲಿದೆ ರಾಮ್ ಕಿಟ್- ಏನಿದು?, ಉಪಯೋಗವೇನು?
Advertisement
Advertisement
ರಾಮಮಂದಿರಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದವರ ಪಟ್ಟಿಯಲ್ಲಿ ಮೊರಾರಿ ಬಾಪು ಅವರ ಹೆಸರು ಅಗ್ರಸ್ಥಾನದಲ್ಲಿದೆ. ಗುಜರಾತ್‌ನಿಂದ ಬಂದಿರುವ ಮೊರಾರಿ ಬಾಪು ರಾಮಮಂದಿರಕ್ಕಾಗಿ ಇಲ್ಲಿಯವರೆಗೆ ಅತಿ ಹೆಚ್ಚು ದೇಣಿಗೆ ನೀಡಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಮೊರಾರಿ ಬಾಪು ಅವರು ರಾಮಮಂದಿರಕ್ಕಾಗಿ 11.3 ಕೋಟಿ ರೂ. ದೇಣಿಗೆ ಕೊಟ್ಟಿದ್ದಾರೆ.
Advertisement
ಯಾರು ಈ ಕೊಡುಗೈ ದಾನಿ
ಮೊರಾರಿ ಬಾಪು ಹುಟ್ಟಿದ್ದು ಗುಜರಾತ್‌ನ ಭಾವನಗರದಲ್ಲಿ. ಇಂದಿಗೂ ಅವರು ತಮ್ಮ ಕುಟುಂಬದೊಂದಿಗೆ ಅಲ್ಲಿಯೇ ವಾಸಿಸುತ್ತಿದ್ದಾರೆ. ಅವರಿಂದ ಸ್ಫೂರ್ತಿ ಪಡೆದ ಅಮೆರಿಕ, ಕೆನಡಾ ಮತ್ತು ಬ್ರಿಟನ್‌ನ ಅವರ ಅನುಯಾಯಿಗಳು ಪ್ರತ್ಯೇಕವಾಗಿ ಒಟ್ಟು 8 ಕೋಟಿ ರೂ. ದೇಣಿಗೆ ಕೊಟ್ಟಿದ್ದಾರೆ. ಇದನ್ನೂ ಓದಿ: ಸರಯೂ ನದಿ ತಟದಲ್ಲಿ 1008 ಯಜ್ಞ ಮಂಟಪ ನಿರ್ಮಾಣ – 21 ಸಾವಿರ ಯತಿಗಳಿಂದ ರಾಮನಾಮ ಮಹಾ ಯಜ್ಞ
ಮುಂಚೂಣಿಯಲ್ಲಿದ್ದಾರೆ ಈ ಇಬ್ಬರು ದೇಣಿಗೆದಾರರು
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕೆ ದೇಣಿಗೆ ನೀಡಿದವರಲ್ಲಿ ಗುಜರಾತ್‌ನ ಇಬ್ಬರು ಮೊದಲೆರಡು ಸ್ಥಾನ ಗಳಿಸಿದ್ದಾರೆ. ಮೊರಾರಿ ಬಾಪು ಮೊದಲ ಸ್ಥಾನದಲ್ಲಿದ್ದರೆ, ಅವರ ನಂತರದ ಸ್ಥಾನದಲ್ಲಿ ಅತಿ ಹೆಚ್ಚು ದೇಣಿಗೆ ನೀಡಿದ ಗುಜರಾತ್‌ನ ಉದ್ಯಮಿಯೂ ಇದ್ದಾರೆ. ಹೌದು, ಗುಜರಾತ್‌ನ ವಜ್ರದ ಉದ್ಯಮಿ ಗೋವಿಂದಭಾಯ್ ಧೋಲಾಕಿಯಾ ಅವರು ರಾಮಮಂದಿರ ನಿರ್ಮಾಣಕ್ಕೆ 11 ಕೋಟಿ ರೂ. ದೇಣಿಗೆ ನೀಡಿದ್ದಾರೆ. ನಿಧಿ ಸಂಗ್ರಹ ಅಭಿಯಾನದ ಅಂಗವಾಗಿ ಅವರು ರಾಮಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ಗೆ 11 ಕೋಟಿ ರೂಪಾಯಿ ದೇಣಿಗೆಯನ್ನು ಚೆಕ್ ಮುಖಾಂತರ ಹಸ್ತಾಂತರಿಸಿದ್ದಾರೆ.
ಗೋವಿಂದಭಾಯಿ ಧೋಲಾಕಿಯಾ ವಜ್ರ ಕಂಪನಿ ಶ್ರೀರಾಮಕೃಷ್ಣ ಎಕ್ಸ್‌ಪೋರ್ಟ್ಸ್‌ನ ಮಾಲೀಕರಾಗಿದ್ದಾರೆ. ಗೋವಿಂದಭಾಯಿ ಪ್ರತಿ ವರ್ಷವೂ ದೀಪಾವಳಿಯ ಸಮಯದಲ್ಲಿ ತಮ್ಮ ನೂರಾರು ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ದುಬಾರಿ ಉಡುಗೊರೆಗಳನ್ನು ನೀಡುತ್ತಾ ಬಂದವರು. ಸೂರತ್ ವಜ್ರದ ವ್ಯಾಪಾರಿ ಗೋವಿಂದಭಾಯಿ ಧೋಲಾಕಿಯಾ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ವರ್ಷಗಳಿಂದ ನಿಕಟ ಸಂಬಂಧ ಹೊಂದಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ತಲುಪಿತು 2,400 ಕೆ.ಜಿಯ ದೇಶದ ಅತೀ ದೊಡ್ಡ ಘಂಟೆ
ರಾಮಮಂದಿರಕ್ಕೆ ಈವರೆಗೆ ಬಂದ ದೇಣಿಗೆ ಎಷ್ಟು?
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇದುವರೆಗೆ ರಾಮಮಂದಿರ ನಿರ್ಮಾಣಕ್ಕಾಗಿ 5,000 ಕೋಟಿ ರೂ.ಗೂ ಹೆಚ್ಚು ದೇಣಿಗೆ ಪಡೆದಿದೆ. ರಾಮಮಂದಿರ ಟ್ರಸ್ಟ್ ದೇಶದ 11 ಕೋಟಿ ಜನರಿಂದ 900 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ ಇಲ್ಲಿಯವರೆಗೆ 5,500 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ದೇಣಿಗೆಯನ್ನು ಭಗವಾನ್ ರಾಮನ ದೇವಾಲಯಕ್ಕಾಗಿ ಸ್ವೀಕರಿಸಲಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ರಾಮಮಂದಿರ ನಿರ್ಮಾಣಕ್ಕಾಗಿ ಇದುವರೆಗೆ ಸುಮಾರು 18 ಕೋಟಿ ರಾಮಭಕ್ತರು ನ್ಯಾಷನಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಖಾತೆಗಳಲ್ಲಿ ಸುಮಾರು 3,200 ಕೋಟಿ ರೂಪಾಯಿಗಳ ಸಮರ್ಪಣಾ ನಿಧಿಯನ್ನು ಜಮಾ ಮಾಡಿದ್ದಾರೆ. ಟ್ರಸ್ಟ್ ಈ ಬ್ಯಾಂಕ್ ಖಾತೆಗಳಲ್ಲಿ ದೇಣಿಗೆ ಹಣದ ಎಫ್‌ಡಿ ಮಾಡಿದೆ. ಅದರಿಂದ ಪಡೆದ ಬಡ್ಡಿಯೊಂದಿಗೆ ರಾಮಮಂದಿರದ ಪ್ರಸ್ತುತ ರೂಪವನ್ನು ಅಂದರೆ ಮೊದಲ ಮಹಡಿಯನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ: 8 ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 km ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ