Ayodhya Ram Mandir: ಅಹಮದಾಬಾದ್‌ ಗ್ರೂಪ್‌ನಿಂದ ಅಯೋಧ್ಯೆಗೆ 450 ಕೆ.ಜಿ ತೂಕದ ಮೆಗಾ ಡ್ರಮ್ ಗಿಫ್ಟ್‌

Public TV
2 Min Read
MEGA DRUM AYODHYA

ಅಹಮದಾಬಾದ್‌:‌ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮಮಂದಿರದ (Ram Mandir in Uttar Pradesh’s Ayodhya) ಕಾಮಗಾರಿ ಅಂತಿಮ ಹಂತದಲ್ಲಿದ್ದು, ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ದೇಶದ ವಿವಿಧ ಭಾಗಗಳ ಜನರು ಅಯೋಧ್ಯೆಗೆ ತಮ್ಮ ಕೈಲಾದಷ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ. ಅಂತೆಯೇ ಇದೀಗ ಅಹಮದಾಬಾದ್‌ನ ಸಂಸ್ಥೆಯೊಂದು ದೇಗುಲಕ್ಕೆ ಉಡುಗೊರೆಯಾಗಿ ನೀಡಲೆಂದು ಮೆಗಾ ಡ್ರಮ್ (ದೊಡ್ಡ ನಗಾರಿ) ಅನ್ನು ಸಿದ್ಧಪಡಿಸಿದೆ.

AYODHYA RAMMANDIR

ಅಖಿಲ ಭಾರತ ದಗ್ಬರ್ ಸಮಾಜ ತಯಾರಿಸಿದ ಈ ವಿಶೇಷ ಡ್ರಮ್ (Mega Drum) ಬರೋಬ್ಬರಿ 450 ಕೆ.ಜಿ ತೂಗುತ್ತದೆ. ಇದನ್ನು 2024 ರ ಜನವರಿ 22 ರ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಅಯೋಧ್ಯೆಗೆ ತಲುಪಿಸುವ ಪ್ಲ್ಯಾನ್‌ ಕೂಡ ನಡೆಯುತ್ತಿದೆ. ಈ ಡ್ರಮ್‌ ಅಥವಾ ನಗಾರಿಯನ್ನು ಕೊಂಡೊಯ್ಯಲು ಸಂಸ್ಥೆಯು ಈಗಾಗಲೇ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದು, ಅದಕ್ಕಾಗಿಯೇ 700 ಕೆ.ಜಿ ತೂಕದ ವಿಶೇಷವಾದ ರಥವೊಂದನ್ನು (Power Steering Chariot) ಕೂಡ ರೆಡಿ ಮಾಡುತ್ತಿದೆ.

ಈ ಕುರಿತು ದಗ್ಬರ್ ಸಮಾಜದ (Dagbar Samaj) ಪ್ರತಿನಿಧಿ ಅಂಬಾಲಾಲ್ ದಗ್ಬರ್ ಪ್ರತಿಕ್ರಿಯಿಸಿ, ರಾಮ ಮಂದಿರಕ್ಕಾಗಿ ನಿರ್ಮಿಸಲಾಗುತ್ತಿರುವ ಈ ಡ್ರಮ್‌ನಲ್ಲಿ ಕಬ್ಬಿಣದ ತಟ್ಟೆಗಳನ್ನು ಬಳಸಲಾಗಿದೆ. ಹೀಗಾಗಿ ಇದು ಸಾವಿರಾರು ವರ್ಷಗಳ ಕಾಲ ಬಾಳಿಕೆ ಬರಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರೈಲ್ವೇ ನಿಲ್ದಾಣಕ್ಕೆ `ಅಯೋಧ್ಯಾ ಧಾಮ್’ ಎಂದು ಮರುನಾಮಕರಣ- ವಿಶೇಷತೆ ಏನು?

ಇದೇ ಸಂಸ್ಥೆಯ ಮತ್ತೋರ್ವ ಸದಸ್ಯ ದೀಪಕ್ ದಗ್ಬರ್ ಮಾತನಾಡಿ, ಈ ಡ್ರಮ್‌ ತಯಾರಿಕೆಯ ಬಹುತೇಕ ಕೆಲಸ ಮುಗಿದಿದ್ದು, ಇನ್ನು ಇದರ ಹೊರ ಭಾಗದಲ್ಲಿ ತಾಮ್ರದ ಫಲಕಗಳನ್ನು ಕೆತ್ತುವ ಪ್ರಕ್ರಿಯೆ ಬಾಕಿ ಉಳಿದಿದ್ದು, ಕೆಲವೇ ದಿನಗಳಲ್ಲಿ ಈ ಕೆಲಸವೂ ಮುಗಿಯುತ್ತದೆ. ಇದಕ್ಕೆ ಚಿನ್ನ ಮತ್ತು ಬೆಳ್ಳಿಯ ಲೇಪನ ಬಳಕೆ ಮಾಡಲಾಗುತ್ತದೆ. ಒಟ್ಟಾರೆಯಾಗಿ ಈ ಮೆಗಾ ಡ್ರಮ್ ಪೂರ್ಣಗೊಳಿಸಲು ಎರಡೂವರೆ ತಿಂಗಳು ತೆಗೆದುಕೊಂಡಿದ್ದು, ಮುಂದಿನ ವಾರದ ವೇಳೆಗೆ ಡ್ರಮ್‌ ಒಯ್ಯಲು ರಥ ಕೂಡ ಸಿದ್ಧವಾಗಲಿದೆ ಎಂದು ಅವರು ವಿವರಿಸಿದರು.

ಸದ್ಯ ಅಹಮದಾಬಾದ್‌ನ ದ್ರ್ಯಾಪುರ್‌ನಲ್ಲಿ ಡ್ರಮ್ ಈಗಾಗಲೇ ಆಕರ್ಷಣೆಯ ಬಿಂದುವಾಗಿದೆ. ಜನವರಿ 8 ರಂದು ಅಯೋಧ್ಯೆಗೆ ಕಳುಹಿಸುವ ಮೊದಲು ಡ್ರಮ್ ನೋಡಲು ಸಾವಿರಾರು ಜನ ಮುಗಿಬೀಳುತ್ತಿದ್ದಾರೆ. ಇದನ್ನೂ ಓದಿ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸಲಿರುವ ಗಣ್ಯರಿಗೆ ದೊರೆಯಲಿದೆ ವಿಶೇಷ ಉಡುಗೊರೆ – ಏನಿದು ಸ್ಪೆಷಲ್ ಗಿಫ್ಟ್?

ದಗ್ಬರ್ ಸಮಾಜವು ಅಯೋಧ್ಯೆಗೆ‌ ತೆಗೆದುಕೊಂಡು ಹೋಗುವಾಗ ವಿವಿಧ ಸ್ಥಳಗಳಲ್ಲಿ ಡ್ರಮ್ ಅನ್ನು ಸ್ವಾಗತಿಸಲು ವಿಶೇಷ ಕಾರ್ಯಕ್ರಮಗಳನ್ನು ಕೂಡ ಆಯೋಜನೆ ಮಾಡಲು ಯೋಚಿಸುತ್ತಿದೆ. ಸದ್ಯ ಯೋಜನೆಯಂತೆ ಜನವರಿ 15ರಂದು ಡ್ರಮ್ ಅನ್ನು ರಾಮಮಂದಿರಕ್ಕೆ ಹಸ್ತಾಂತರಿಸಲಾಗುವುದು.

Share This Article