ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸಿನಿಮಾ ಲಾಂಚ್ ಈವೆಂಟ್‌ವೊಂದರಲ್ಲಿ ಭಾಗಿಯಾಗಿದ್ದ ಮಹೇಶ್ ಬಾಬು ಹಿಂದಿ ಚಿತ್ರರಂಗದ ಎಂಟ್ರಿ ಕುರಿತು ಪ್ರಶ್ನಿಸಲಾಗಿತ್ತು. ಬಾಲಿವುಡ್ ನನ್ನ ತಡ್ಕೋಳೋಕೆ ಆಗಲ್ಲ ಎಂಬ ಮಹೇಶ್ ಬಾಬು ಉತ್ತರಕ್ಕೆ ನಿರ್ದೇಶಕ ಆರ್‌ಜಿವಿ ಈಗ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಇತ್ತೀಚೆಗೆ ಟ್ರೇಲರ್ ಲಾಂಚ್ ಕಾರ್ಯಕ್ರಮವೊಂದರಲ್ಲಿ ಭಾಗಿದ್ದ ನಟ ಮಹೇಶ್ ಬಾಬು ನೀಡಿರೋ ಹೇಳಿಕೆ ಇದೀಗ ಸಂಚಲನ ಮೂಡಿಸುತ್ತಿದೆ. ನನಗೆ ಹಿಂದಿ ಚಿತ್ರರಂಗದಿಂದ ಸಾಕಷ್ಟು ಆಫರ್‌ಗಳು ಬರುತ್ತಿವೆ ಆದರೆ ಬಾಲಿವುಡ್‌ಗೆ ನನ್ನ ತಡ್ಕೋಳಕೆ ಆಗಲ್ಲ. ಹಾಗಾಗಿ ನಾನು ಚಿತ್ರ ಮಾಡಲಿಲ್ಲ ಅಂತಾ ಖಡಕ್ ಆಗಿ ಉತ್ತರಿಸಿದ್ರು. ಇದೀಗ ಮಹೇಶ್ ಬಾಬು ಹೇಳಿಕೆಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯೇ ನೀಡಿದ್ದಾರೆ.

ಸಧ್ಯ `ಸರ್ಕಾರಿ ವಾರಿ ಪಾಟ’ ಚಿತ್ರ ತೆರೆ ಕಂಡಿದೆ. ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ನಟನೆಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ಸಿನಿಮಾ ಕಥೆ ವಿಚಾರಕ್ಕೆ ಬಂದರೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.



