CinemaLatestMain PostSouth cinema

ನಿರ್ದೇಶಕ ಆರ್‌ಜಿವಿ ವಿರುದ್ಧ 56 ಲಕ್ಷ ವಂಚನೆ ಪ್ರಕರಣ ದಾಖಲು

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಹೈದರಾಬಾದ್‌ನ ಪ್ರೊಡಕ್ಷನ್ ಹೌಸ್‌ಗೆ 56 ಲಕ್ಷ ವಂಚಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಶೇಖರ್ ಆರ್ಟ್ಸ್‌  ಕ್ರಿಯೇಷನ್ಸ್ ಕೊಪ್ಪದ ಶೇಖರ್ ರಾಜು ದೂರಿನ ಮೇರೆಗೆ ಸೈಬರಾಬಾದ್ ಪೊಲೀಸ್ ವ್ಯಾಪ್ತಿಯ ಮಿಯಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಟಾಲಿವುಡ್‌ನ ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ವಿರುದ್ಧ ವಂಚನೆ ಕೇಸ್ ದಾಖಲಾಗಿದೆ. ಹೈದರಾಬಾದ್‌ನ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್‌ಗೆ 56 ಲಕ್ಷ ರೂ. ವಂಚಿಸಿದ ಆರೋಪವನ್ನ ಆರ್‌ಜಿವಿ ಎದುರಿಸುತ್ತಿದ್ದಾರೆ. `ದಿಶಾ’ ಎಂಬ ಟೈಟಲ್ ಅಡಿ ಸಿನಿಮಾ ನಿರ್ಮಾಣ ಮಾಡುವುದಾಗಿ ಕೊಪ್ಪದ ಶೇಖರ್ ರಾಜು ಅವರ ಬಳಿ 2020ರಲ್ಲಿ 56 ಲಕ್ಷ ರೂ. ಪಡೆದಿದ್ದರು. ಈ ಚಿತ್ರದ ರಿಲೀಸ್‌ಗೂ ಮುಂಚೆ ಹಣ ಕೊಡುವುದಾಗಿ ಭರವಸೆ ನೀಡಿದ್ದರು. ಇದನ್ನೂ ಓದಿ: ಬರಲಿದೆ, ಭಾರತದ ಶ್ರೀಮಂತ ಟಾಟಾ ಫ್ಯಾಮಿಲಿ ಬಯೋಪಿಕ್

2019ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಕುರಿತು ಚಿತ್ರ ಮಾಡುವುದಾಗಿ ಹೇಳಿ, 56 ಲಕ್ಷ ಆರ್‌ಜಿವಿ ಪಡೆದಿದ್ರು. ಇದೀಗ ಈ ಚಿತ್ರಕ್ಕೂ ಆರ್‌ಜಿವಿ ಯಾವುದೇ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ. ಹಣ ಮರು ಪಾವತಿ ಆಗದೇ ಇರುವ ಕಾರಣ ರಾಮ್ ಗೋಪಾಲ್ ವಿರುದ್ಧ ಹೈದರಾಬಾದ್‌ನ ಸೈಬರಾಬಾದ್ ಪೊಲೀಸ್ ವ್ಯಾಪ್ತಿಯ ಮಿಯಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Back to top button