CinemaDistrictsKarnatakaLatestMain PostSandalwood

ಬರಲಿದೆ, ಭಾರತದ ಶ್ರೀಮಂತ ಟಾಟಾ ಫ್ಯಾಮಿಲಿ ಬಯೋಪಿಕ್

ದ್ಯಮ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ, ಭಾರತೀಯ ಶ್ರೀಮಂತರ ಸಾಲಿನಲ್ಲಿ ಸದಾ ಕಾಣಿಸಿಕೊಳ್ಳುವ ಟಾಟಾ ಕುಟುಂಬದವರ ಕುರಿತಾಗಿ ಸಿನಿಮಾ ಮಾಡಲು ಟೀ ಸಿರೀಸ್ ಫಿಲ್ಮ್ಸ್ ಮುಂದಾಗಿದೆ. ಈ ಕುರಿತು ಅದು ಅಧಿಕೃತ ಮಾಹಿತಿಯನ್ನು ತನ್ನ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿಕೊಂಡಿದೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾ

ಟಾಟಾ ಕುಟುಂಬವು ಕೇವಲ ಉದ್ಯಮಿಗಳಾಗಿರದೇ, ಉದ್ಯಮದಿಂದ ಬಂದ ಲಾಭವನ್ನು ಸಮಾಜಮುಖಿ ಕೆಲಸದಲ್ಲಿ ವಿನಿಯೋಗಿಸಿದ್ದಾರೆ. ಅನೇಕ ಮಾದರಿಯ ಕೆಲಸಗಳನ್ನು ಮಾಡಿದ್ದಾರೆ. ಟಾಟಾ ಕುಟುಂಬದ ಬೆಳವಣಿಗೆಯೇ ರೋಚಕವಾದದ್ದು. ಹಾಗಾಗಿ ಆ ಸಾಹಸಗಾಥೆಯನ್ನು ತೆರೆಗೆ ತರಲು ಟೀ ಸಿರೀಸ್ ಮತ್ತು ಆಲ್ಮ್ ಲೈಟ್ ಮೋಷನ್ ಪಿಕ್ಚರ್ಸ್ ಜಂಟಿಯಾಗಿ ರೆಡಿಯಾಗಿದೆ. ರತನ್ ಟಾಟಾ ಮತ್ತು ಕುಟುಂಬದವರ ಕಥೆಯನ್ನು ರೋಚಕವಾಗಿ ಹೇಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದನ್ನೂ ಓದಿ : ‘ಕಾಳಿ’ ಟೈಟಲ್ ಧ್ರುವ ಸರ್ಜಾಗಾ? ಅಥವಾ ಅಭಿಷೇಕ್ ಅಂಬರೀಶ್ ಗಾ?

ಪತ್ರಕರ್ತ ಗಿರೀಶ್ ಕುಬೇರ್ ಅವರು ಬರೆದ ‘ದಿ ಟಾಟಾಸ್: ಹವ್ ಎ ಫ್ಯಾಮಿಲಿ ಬಿಲ್ಟ್ ಎ ಬಿಸ್ನೆಸ್ ಅಂಡ್ ನೇಷನ್’ ಎಂಬ ಪುಸ್ತಕವನ್ನು ಆಧರಿಸಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಈಗಾಗಲೇ ಕುಟುಂಬದ ಅನುಮತಿಯನ್ನು ನಿರ್ಮಾಣ ಸಂಸ್ಥೆಗಳು ಪಡೆದುಕೊಂಡಿವೆಯಂತೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ

ಟಾಟಾ ಫ್ಯಾಮಿಲಿ ಅತೀ ದೊಡ್ಡ ಕುಟುಂಬ. ಹಾಗಾಗಿ ಒಂದು ಸಿನಿಮಾವಾಗಿ ಅದನ್ನು ನೋಡುವುದಕ್ಕಿಂತ ವೆಬ್ ಸರಣಿ ಮೂಲಕ ಕಟ್ಟಿಕೊಡುವುದೇ ಸೂಕ್ತ ಅನಿಸಿ, ಅದನ್ನು ವೆಬ್ ಸರಣಿಯಾಗಿಸುವ ಪ್ರಯತ್ನವನ್ನೂ ಮಾಡುತ್ತಾರಂತೆ ನಿರ್ಮಾಣ ಸಂಸ್ಥೆಗಳು.

Leave a Reply

Your email address will not be published.

Back to top button