ಟಾಲಿವುಡ್ನ (Tollywood) ಮೆಗಾ ಸ್ಟಾರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಒಂದ್ ಕಡೆ ರಾಮ್ ಚರಣ್ (Ram Charan) ದಂಪತಿ ಪೋಷರಾಗುತ್ತಿರುವ ಗುಡ್ ನ್ಯೂಸ್ ನಡುವೆ ಕ್ರಿಸ್ಮಸ್ ಪಾರ್ಟಿಗೂ ಅದ್ದೂರಿ ಚಾಲನೆ ಸಿಕ್ಕಿದೆ. ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ (Allu arjun) ಕುಟಂಬ ಪಾರ್ಟಿಯಲ್ಲಿ ಫನ್ ಮಾಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಕುಟುಂಬಗಳಲ್ಲಿ ಮೆಗಾ ಸ್ಟಾರ್ ಕುಟುಂಬ ಕೂಡ ಒಂದಾಗಿದ್ದು, ಈಗ ಮೆಗಾ ಕಸಿನ್ಸ್ ಕ್ರಿಸ್ಮಸ್ ಸಂಭ್ರಮದಲ್ಲಿ ಎಂಜಾಯ್ ಮಾಡಿದ್ದಾರೆ. ಸೀಕ್ರೆಟ್ ಸಂತಾ ಜೊತೆ ಎಲ್ಲರೂ ಫನ್ ಮಾಡಿದ್ದಾರೆ. ಹೈದರಾಬಾದ್ ಮನೆಯಲ್ಲಿ ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ಸೇರಿದಂತೆ ಎಲ್ಲಾ ಕಸಿನ್ಸ್ ಒಟ್ಟಾಗಿ ಗೆಟ್ ಟುಗೆದರ್ ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ: ಬಾಯ್ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಶ್ರುತಿ ಹಾಸನ್
View this post on Instagram
ಈ ಕುರಿತ ಫೋಟೋವನ್ನು ರಾಮ್ ಚರಣ್ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲು ಅರ್ಜುನ್ ದಂಪತಿ, ಸಾಯಿ ಧರಮ್ ತೇಜ್, ನಿಹಾರಿಕಾ, ವರುಣ್ ತೇಜ್, ಅಲ್ಲು ಸಿರೀಶ್, ರಾಮ್ ಚರಣ್ ಸಹೋದರಿ ಶ್ರೀಜಾ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.