ಬೆಂಗಳೂರು: ನನಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಈ ಸತ್ಯವನ್ನ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ದಕ್ಷಿಣ ಭಾರತದ ಖ್ಯಾತ ನಟ ರಾಮ್ ಚರಣ್ ತೇಜಾ ಅವರು ಪುನೀತ್ ನೆನೆದು ಭಾವುಕರಾಗಿ ಮಾತನಾಡಿದ್ದಾರೆ.
ಪುನೀತ್ ಸಾವನ್ನು ಯಾರಿಗೂ ನಂಬಲು ಆಗುತ್ತಿಲ್ಲ. ಇವರು ಬರೀ ಕನ್ನಡಿಗರಿಗೆ ಮಾತ್ರವಲ್ಲ, ಅಪ್ಪು ಎಲ್ಲೇ ಹೋದರು ಅವರಿಗೆ ಫ್ಯಾನ್ಸ್ ಮತ್ತು ಸ್ನೇಹಿತರು ಜಾಸ್ತಿ. ಅಪ್ಪುವನ್ನು ಮಾತನಾಡಿಸಿದರೆ ಎಷ್ಟೋ ವರ್ಷಗಳ ಸ್ನೇಹ ಇದೆ ಎಂಬಂತೆ ಬೇಗ ಹೊಂದಿಕೊಳ್ಳುತ್ತಾರೆ. ಅದೇ ರೀತಿ ರಾಮ್ ಚರಣ್ ತೇಜ ಸಹ ಪುನೀತ್ ವಿಚಾರದಿಂದ ದುಃಖಿತರಾಗಿದ್ದು, ಇಂದು ಶಿವಣ್ಣನ ಮನೆಗೆ ಬಂದು ಅವರಿಗೆ ಸಾಂತ್ವನವನ್ನು ಹೇಳಿದ್ದಾರೆ.
Advertisement
Advertisement
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ತುಂಬಾ ದುಃಖವಾಗುತ್ತಿದೆ. ನನಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗುತ್ತಿಲ್ಲ. ಯಾರಿಗೆ ಏನಾದರೂ ಆದರೆ ನಮಗೆ ಅರ್ಥವಾಗುತ್ತೆ. ಆದರೆ ಪುನೀತ್ ಅವರಿಗೆ ಈ ರೀತಿಯಾಗಿದ್ದು, ನನಗೆ ನಿಜವಾಗಿಯೂ ತುಂಬಾ ದುಃಖ ತಂದಿದೆ ಎಂದು ಸಂತಾಪ ಸೂಚಿಸಿದರು. ಇದನ್ನೂ ಓದಿ: ಶಿರವಾಳ ಗ್ರಾಮದ ವೃತ್ತಕ್ಕೆ ಪುನೀತ್ ಹೆಸರು ನಾಮಕರಣ
Advertisement
Advertisement
ನನಗೆ ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಮಾತು ಸಹ ಬರುತ್ತಿಲ್ಲ. ಇದು ನಡೆಯಿತಾ, ಇಲ್ಲವಾ ಎಂದು ನನಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಇಂತಹ ಹಂಬಲ್ ವ್ಯಕ್ತಿಗೆ ಈ ರೀತಿ ಆಗಿರುವುದನ್ನು ನನಗೆ ತುಂಬಾ ದುಃಖ ತಂದಿದೆ. ಇಂತಹ ಪ್ರೀತಿ ತುಂಬಿದ ವ್ಯಕ್ತಿ ಎಲ್ಲಿಯೂ ಹುಟ್ಟಿಲ್ಲ. ನಮ್ಮ ಮನೆಗೆ ಬಂದು ಅವರು ನಮ್ಮ ಮನೆಯವರಂತೆ ಬೇಗ ಹೊಂದಿಕೊಂಡಿದ್ದರು ಎಂದು ನೆನೆದರು.
ಪುನೀತ್ ಎಂದಿಗೂ ನಮ್ಮ ಮನೆಗೆ ಬಂದಾಗ ಅತಿಥಿ ಎಂಬ ಭಾವನೆಯೇ ಬಂದಿಲ್ಲ. ನಮ್ಮ ಮನೆಗೆ ಬಂದರೆ ಅವರು ನಮ್ಮವರು ಎಂಬಂತೆ ಎಲ್ಲರ ಜೊತೆ ಬೇಗ ಹೊಂದಿಕೊಳ್ಳುವ ಗುಣ ಇತ್ತು. ಎಲ್ಲರನ್ನು ನಮ್ಮವರು ಎಂದು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಅವರು ಎಂದರು. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್
ನಾನು ಅವರನ್ನು ಭೇಟಿಯಾದಗಲೆಲ್ಲ ಮಾನವೀಯತೆ ಏನು? ಸಾಮಾನ್ಯವಾಗಿ ಹೇಗೆ ಇರಬೇಕು? ಎಂಬುದನ್ನು ನೋಡಿ ಕಲಿಯುತ್ತಿದೆ. ಪುನೀತ್ ಎಲ್ಲೇ ಇದ್ದರೂ ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಚಿತ್ರರಂಗಕ್ಕೆ ನೀವು ಕೊಟ್ಟ ಕೂಡುಗೆಗೆ ಧನ್ಯವಾದ. ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ಅಭಿಮಾನಿಗಳು ಮತ್ತು ಪುನೀತ್ ಅವರ ಕುಟುಂಬದವರ ಜೊತೆ ಯಾವಾಗಲೂ ನಾವು ಇರುತ್ತೇವೆ ಎಂದು ಹೇಳಿದರು.