ಬೆಂಗಳೂರು: ಅವನು ಇನ್ನೂ ನನ್ನ ಮಡಿಲಲ್ಲಿ ಮತ್ತು ನನ್ನ ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ ಎಂದು ತಮ್ಮನನ್ನು ನೆನೆದು ರಾಘವೇಂದ್ರ ರಾಜ್‍ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಫೋಟೋವನ್ನು ಶೇರ್ ಮಾಡಿದ್ದಾರೆ.
ಪುನೀತ್ ರಾಜ್‍ಕುಮಾರ್ ನಿಧನರಾಗಿ ಇವತ್ತಿಗೆ 6ನೇ ದಿನ. ಇಂದಿಗೂ ಎಷ್ಟೋ ಜನರಿಗೆ ಅವರಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ತಮ್ಮನನ್ನು ಮಗನಂತೆ ನೋಡುತ್ತಿದ್ದ ರಾಘವೇಂದ್ರ ರಾಜ್‍ಕುಮಾರ್ ಮತ್ತು ಶಿವಣ್ಣ ಈ ವಿಷಯ ತಿಳಿದು ಕುಸಿದು ಹೋಗಿದ್ದರು. ಈಗ ರಾಘವೇಂದ್ರ ರಾಜ್‍ಕುಮಾರ್ ಫೇಸ್ ಬುಕ್ ನಲ್ಲಿ ತಮ್ಮನೊಂದಿಗಿನ ವಿಶೇಷ ಫೋಟೋವನ್ನು ಹಾಕಿದ್ದು, ಅವನು ಇನ್ನೂ ನನ್ನ ಮಡಿಲಲ್ಲಿ ಮತ್ತು ನನ್ನ ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ. ಲವ್ ಯೂ ಮಗನೇ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಸಾಲುಗಳನ್ನು ನೋಡಿದರೆ, ಅಪ್ಪು ಎಷ್ಟೇ ದೊಡ್ಡವನಾದರೂ ಅವನು ಇನ್ನು ನನಗೆ ಮಗುವೇ ಎನ್ನುವ ರೀತಿ ರಾಘವೇಂದ್ರ ಅವರು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ
Advertisement
Advertisement
ರಾಘವೇಂದ್ರ ಅವರು, ಅವರ ಮತ್ತು ಅಪ್ಪುವಿನ ಚಿಕ್ಕ ವಯಸ್ಸಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಈ ಫೋಟೋದಲ್ಲಿ ಅಪ್ಪು ತನ್ನ ಮುಗ್ಧ ನಗುವಿನೊಂದಿಗೆ ರಾಘವೇಂದ್ರ ರಾಜ್‍ಕುಮಾರ್ ಅವರ ತೊಡೆಯ ಮೇಲೆ ಕುಳಿತುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
Advertisement
Appu ❤️???????? pic.twitter.com/Gqbj0MNRdp
— Raghavendra Rajkumar (@RRK_Official_) November 1, 2021
Advertisement
ರಾಘವೇಂದ್ರ ಅವರು ಇತ್ತೀಚೆಗೆ ಅಪ್ಪುವಿನೊಂದಿಗೆ ತೆಗೆದುಕೊಂಡಂತಹ ಸೆಲ್ಫಿ ಫೋಟೋವನ್ನು ಪೋಸ್ಟ್ ಮಾಡಿದ್ದು, ಜೊತೆಗೆ ಭಾವುಕ ನುಡಿಗಳನ್ನು ಕೂಡ ಬರೆದುಕೊಂಡಿದ್ದರು. ಇತ್ತೀಚಿಗೆ ನನಗೆ ದಾದಾಸಾಹೇಬ್ ಫಾಲ್ಕೆ ಎಂಎಸ್‍ಕೆ ಟ್ರಸ್ಟ್ ವತಿಯಿಂದ ಜೀವನ ಸಾಧನೆ ಪ್ರಶಸ್ತಿ ಬಂದಿತ್ತು. ಅದು ಅಪ್ಪುಗೆ ಎಲ್ಲಿಲ್ಲದ ಸಂತಸವನ್ನು ತಂದುಕೊಟ್ಟಿತ್ತು. ನನ್ನನ್ನು ತಕ್ಷಣ ಭೇಟಿ ಮಾಡಿ ರಾಘಣ್ಣ ನೀವು ಕೂಡ ಈ ಮೂರ್ತಿಯ ಹಾಗೆಯೇ ಅಪ್ಪಾಜಿಯವರ ಮೂರ್ತಿಯನ್ನು ಮಾಡಿ ಎಂದಿನಂತೆ ಡಾಕ್ಟರ್ ರಾಜಕುಮಾರ್ ಟ್ರಸ್ಟ್ ವತಿಯಿಂದ ನೀಡುವ ಪ್ರಶಸ್ತಿಯನ್ನು ಇದೇ ರೂಪದಲ್ಲಿ ಮಾಡೋಣ ಎಂದು ಹೇಳಿದನು. ಅಪ್ಪು ನಿನ್ನ ಆಲೋಚನೆಗೆ ನನ್ನದೊಂದು ನಮನ. ಲವ್ ಯು ಮಗನೇ ಎಂದು ರಾಘವೇಂದ್ರ ರಾಜ್‍ಕುಮಾರ್ ಅವರು ಬರೆದುಕೊಂಡು ಅಪ್ಪುನನ್ನು ನೆನಪು ಮಾಡಿಕೊಂಡಿದ್ದರು. ಇದನ್ನೂ ಓದಿ: ಅಪ್ಪು ಕೊನೆ ಕ್ಷಣದ ವಿಡಿಯೋ ಲಭ್ಯ