CinemaDistrictsKarnatakaLatestMain PostSandalwood

ಕೆಜಿಎಫ್ 2 ಅಭಿಮಾನಿಗಳಿಗೆ ಅರ್ಪಿಸಿ, ಮಕ್ಕಳ ಜತೆ ಆಟದಲ್ಲಿ ತಲ್ಲೀನರಾದ ರಾಕಿಭಾಯ್

ವಿಶ್ವದಾದ್ಯಂತ ಕೆಜಿಎಫ್ 2 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತೀಯ ಸಿನಿಮಾ ರಂಗವೇ ಕೆಜಿಎಫ್ 2 ವೇಗಕ್ಕೆ ಸಂಭ್ರಮ ಪಡುತ್ತಿದೆ. ಬಾಲಿವುಡ್ ನಟರು ಬಾಕ್ಸ್ ಆಫೀಸ್ ಕಲೆಕ್ಷನ್ ಗೆ ಬೆಚ್ಚಿಬಿದ್ದಿದ್ದಾರೆ. ಆದರೆ, ಯಶ್ ತಮ್ಮ ಸಿನಿಮಾವನ್ನು ಅಭಿಮಾನಿಗಳ ಉಡಿಗೆ ಹಾಕಿ, ತಾವು ಮಕ್ಕಳೊಂದಿಗೆ ಆಟದಲ್ಲಿ ತಲ್ಲೀನರಾಗಿದ್ದಾರೆ. ಇದನ್ನೂ ಓದಿ : ಭಾವಿ ಪತಿಯ ತಂದೆ ನಿಧನ: ನಟಿ ಕಾವ್ಯ ಶಾ ಮದುವೆ ಮುಂದೂಡಿಕೆ

ಕೆಜಿಎಫ್ 2 ಸಿನಿಮಾದ ಪ್ರಚಾರದಲ್ಲಿ ಈವೆಗೂ ಬ್ಯುಸಿಯಾಗಿದ್ದ ಯಶ್, ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದಂತೆಯೇ ರಿಲ್ಯಾಕ್ಸ್ ಆಗಿದ್ದಾರೆ. ಮಕ್ಕಳು, ಪತ್ನಿ ರಾಧಿಕಾ ಪಂಡಿತ್ ಅವರನ್ನು ಕರೆದುಕೊಂಡು ಟೂರ್ ಹೊಡೆಯುತ್ತಿದ್ದಾರೆ. ಆ ಫೋಟೋವನ್ನು ರಾಧಿಕಾ ತಮ್ಮ ಇನ್ಸ್ಟಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇದನ್ನೂ ಓದಿ : ನಾನೇಕೆ ಡ್ರಗ್ಸ್ ತಗೆದುಕೊಳ್ಳುತ್ತಿದ್ದೆ? ಅಸಲಿ ಕಾರಣ ಬಿಚ್ಚಿಟ್ಟ ಸಂಜಯ್ ದತ್

ವಿಶಾಲವಾದ ಮರಳು ನೆಲದಲ್ಲಿ ಕೂತಿರುವ ಯಶ್ ಮತ್ತು ರಾಧಿಕಾ ಮಕ್ಕಳಿಗೆ ಆಟಿಕೆಗಳನ್ನು ಕೊಟ್ಟು ಅವರೊಂದಿಗೆ ಆಟವಾಡುತ್ತಿದ್ದಾರೆ. ಹಿಂದೆ ಮುಗಿಲೆತ್ತರಕ್ಕೆ ಬೆಳೆದ ತೆಂಗಿನ ಮರಗಳಿವೆ. ಈ ಆಹ್ಲಾದಕರ ವಾತಾವರಣದಲ್ಲಿ ಆಟಿಕೆಗಳೊಂದಿಗೆ ಮಕ್ಕಳ ಜತೆ ಆಟವಾಡುತ್ತಿದ್ದಾರೆ ಸ್ಟಾರ್ ದಂಪತಿ. ಇದನ್ನೂ ಓದಿ: 29 ದಾಖಲೆಗಳನ್ನು ಬರೆದು ರಾಕೆಟ್ ವೇಗದಲ್ಲಿ ಮುನ್ನುಗ್ತಿದೆ ಕೆಜಿಎಫ್ 2: ದಾಖಲೆಗಳ ಪಟ್ಟಿ ಇಲ್ಲಿದೆ

ಸಿನಿಮಾ ಶೂಟಿಂಗ್, ಬ್ಯುಸಿ ಓಡಾಟದ ನಡುವೆಯೂ ಯಶ್ ತಮ್ಮ ಮಕ್ಕಳಿಗೆ ಟೈಮ್ ಕೊಡುತ್ತಲೇ ಬಂದಿದ್ದಾರೆ. ಮನೆಯಲ್ಲಿದ್ದಾಗ ಮಕ್ಕಳೊಂದಿಗೆ ಆಟ ಆಡುವುದನ್ನು ತಪ್ಪಿಸುವುದಿಲ್ಲ. ಮಕ್ಕಳೊಂದಿಗೆ ಪ್ರತಿ ಕ್ಷಣವನ್ನೂ ಅವರು ಎಂಜಾಯ್ ಮಾಡುತ್ತಾರೆ. ವಿಶ್ವವೇ ಕೆಜಿಎಫ್ 2 ಅಬ್ಬರದಲ್ಲಿ ಇರುವಾಗ, ಯಶ್ ತಣ್ಣಗೆ ಮಕ್ಕಳೊಂದಿಗೆ ಆಟವಾಡುತ್ತಾ ತಾವು ಕೂಲ್ ಇರುವುದಾಗಿ ಸಂದೇಶ ರವಾನಿಸಿದ್ದಾರೆ.

Leave a Reply

Your email address will not be published.

Back to top button