BollywoodCinemaDistrictsKarnatakaLatestMain PostSandalwood

ನಾನೇಕೆ ಡ್ರಗ್ಸ್ ತಗೆದುಕೊಳ್ಳುತ್ತಿದ್ದೆ? ಅಸಲಿ ಕಾರಣ ಬಿಚ್ಚಿಟ್ಟ ಸಂಜಯ್ ದತ್

ಕೆಜಿಎಫ್ 2 ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಸಂಜಯ್ ದತ್ ಮತ್ತೆ ಪುಟಿದೆದ್ದಾರೆ. ಕೆಜಿಎಫ್ 2 ಸಿನಿಮಾದ ಅಧಿರ ಪಾತ್ರವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಂತೆಯೇ ಅವರು ಮತ್ತೆ ಅಭಿಮಾನಿಗಳ ಎದುರು ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಅವರು ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ : ‘ದಿ ಡೆಲ್ಲಿ ಫೈಲ್ಸ್’ : 1984ರ ಗಲಭೆಯೇ ಕಥಾವಸ್ತು ಎಂದ ವಿವೇಕ್ ಅಗ್ನಿಹೋತ್ರಿ

ಸಂಜಯ್ ದತ್ ಬದುಕು ಹೂವಿನ ಹಾಸಿಗೆಯಲ್ಲಿ ಪವಡಿಸಿದ್ದಲ್ಲ. ನಾನಾ ರೀತಿಯ ಏರುಪೇರುಗಳನ್ನು ಕಂಡಿದೆ. ಅದರಲ್ಲೂ ಎಕೆ 47 ಗನ್ ಇಟ್ಟುಕೊಂಡಿದ್ದು, ಡ್ರಗ್ಸ್ ತಗೆದುಕೊಳ್ಳುತ್ತಿದ್ದದ್ದು, ಜೈಲಿಗೆ ಹೋಗಿ ಬಂದದ್ದು, ತಮ್ಮ ತಂದೆ ತಾಯಿಗೆ ಬೇಡವಾದ ಮಗನಾಗಿದ್ದು ಹೀಗೆ ಹತ್ತಾರ ಎಡರುತೊಡರುಗಳನ್ನು ಸಂಜಯ್ ದಾಟಿಕೊಂಡು ಬಂದಿದ್ದಾರೆ. ಅವೆಲ್ಲದಕ್ಕೂ ಕಾರಣವನ್ನು ಅವರು ಕೊಟ್ಟಿದ್ದಾರೆ. ಹಾಗಂತ ಅದು ಸರಿಯಾದ ನಡೆಯೂ ಅಲ್ಲ ಎಂದು ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಅಜ್ಞಾತವಾಸಿಯಾದ ರಂಗಾಯಣ ರಘು ಮತ್ತು ಪಾವನಾ

ಸಂಜಯ್ ಮೊದಲ ಬಾರಿಗೆ ಡ್ರಗ್ಸ್ ತಗೆದುಕೊಂಡಿದ್ದು ತಮ್ಮ ತಂದೆಯವರು ಬೈದರು ಎನ್ನುವ ಕಾರಣಕ್ಕಾಗಿ ಅಂತೆ. ಎರಡನೇ ಬಾರಿಗೆ ಡ್ರಗ್ಸ್ ತಗೆದುಕೊಂಡಿದ್ದು ಅವರ ತಾಯಿಯ ಕಾರಣಕ್ಕಾಗಿ ಅಂತೆ. ಅವತ್ತು ಅವರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲವಂತೆ ಹಾಗಾಗಿ ಡ್ರಗ್ಸ್ ಮೂಲಕ ತಮ್ಮನ್ನು ತಾವು ಹಿಡಿದಿಟ್ಟುಕೊಳ್ಳುವ ಸಲುವಾಗಿ ಹಾಗೆಲ್ಲ ಮಾಡಿದ್ದಾರಂತೆ. ಇದನ್ನೂ ಓದಿ : ಲಾಕಪ್ ನಲ್ಲಿ ಗಳಗಳನೆ ಅತ್ತ ಪೂನಂ: ಈ ನಟಿಗೆ ಅದೆಂಥ ಅವಮಾನ?

‘ಹಲವು ವರ್ಷಗಳ ಕಾಲ ನಾನು ನನ್ನ ಲೀವಿಂಗ್ ರೂಮ್ ಮತ್ತು ಶೌಚಗೃಹವನ್ನು ಬಿಟ್ಟು ಆಚೆ ಬಂದಿಲ್ಲ. ಡ್ರಗ್ಸ್ ನನ್ನ ಊಟವಾಗಿತ್ತು. ಅದೇ ನನ್ನ ಸಂಗಾತಿ ಕೂಡ ಆಗಿತ್ತು. ನನ್ನಲ್ಲಿ ಅನೇಕ ನೋವುಗಳು ಇದ್ದವು. ಅವುಗಳನ್ನು ದಾಟಿಕೊಳ್ಳಲು ನಾನು ಹಾಗೆಲ್ಲ ಮಾಡಬೇಕಾಯಿತು. ಅದಕ್ಕಾಗಿ ನಾನು ನನ್ನ ಜೀವನವನ್ನೇ ಹಾಳುಮಾಡಿಕೊಂಡಿದ್ದೇನೆ’ ಎಂದಿದ್ದಾರೆ ಸಂಜಯ್. ಇದನ್ನೂ ಓದಿ : ಪುನೀತ್ ಬ್ಯಾನರ್ ಗಾಗಿ ನಡೆಯಿತು ಮಾರಾಮಾರಿ : ರಾಡ್ ಹಿಡಿದುಕೊಂಡು ಗಲಾಟೆ

ಹುಡುಗಿಯರನ್ನು ಮಾತನಾಡಿಸಲು ಅವರು ಹಿಂಜರಿಯುತ್ತಿದ್ದರಂತೆ. ಹುಡುಗಿಯರ ಜತೆ ಮಾತನಾಡುವ ಸಂದರ್ಭ ಬಂದಾಗ ಅವರು ಡ್ರಗ್ಸ್ ತಗೆದುಕೊಳ್ಳುತ್ತಿದ್ದಂತೆ. ಹಾಗೆ ಮಾಡಿದರೆ ಮಾತ್ರ ಅವರಿಗೆ ಧೈರ್ಯ ಬರುತ್ತಿತ್ತಂತೆ. ಹಾಗೆ ಅವರು ಮೈಂಡ್ ಸೆಟ್ ಮಾಡಿಕೊಂಡಿದ್ದರಂತೆ. ಆಗ ಮಾಡಿದ್ದೆಲ್ಲವೂ ಸರಿಯಾಗಿ ಇರಲಲ್ಲ ಎಂದು ನೊಂದುಕೊಂಡಿದ್ದಾರೆ.

Leave a Reply

Your email address will not be published.

Back to top button