ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಇಷ್ಟು ದಿನ ಮದುವೆ ಆಗಿದೆ ಎಂದು ಹೇಳುತ್ತಿದ್ದರು. ಆದರೆ ತಮ್ಮ ಪತಿಯ ಫೋಟೋವನ್ನು ಅವರು ರಿವೀಲ್ ಮಾಡಿರಲಿಲ್ಲ. ಆದರೆ ಈಗ ಅವರ ಪತಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ರಾಖಿ ಪತಿ ರಿತೇಶ್, ನಾನು ಐಟಿ ಸೆಕ್ಟರ್ ನಲ್ಲಿ ಉದ್ಯಮಿ. ತುಂಬಾ ಸಾಧಾರಣ ವ್ಯಕ್ತಿ. ರಾಖಿ ನನ್ನನ್ನು ಮದುವೆಯಾಗಿದ್ದಾರೆ ಎಂದು ಅನೇಕ ಜನರು ನಂಬುತ್ತಿಲ್ಲ ಎಂದು ನನಗೆ ತಿಳಿದಿದೆ. ಆದರೆ ನಾನು ಇದ್ದೇನೆ ಹಾಗೂ ನಿಮ್ಮ ಜೊತೆ ಮಾತನಾಡುತ್ತಿದ್ದೇನೆ ಎಂದರು.
Advertisement
Advertisement
ರಾಖಿ ಕ್ಯಾಮೆರಾ ಮುಂದೆ ಹೇಗೆ ಇರಲಿ, ಆದರೆ ಆಕೆ ಹೃದಯದಲ್ಲಿ ಅದ್ಭುತ ವ್ಯಕ್ತಿ. ನಾನು ಅದೃಷ್ಟವಂತ. ಏಕೆಂದರೆ ದೇವರು ನನಗೆ ರಾಖಿಯನ್ನು ಉಡುಗೊರೆಯಾಗಿ ನೀಡಿದ್ದಾನೆ. ನಾನು ರಾಖಿ ಅಂತಹ ಮಹಿಳೆಯನ್ನು ಎಲ್ಲಿಯೂ ನೋಡಿಲ್ಲ ಎಂದು ತಿಳಿಸಿದರು.
Advertisement
ಮಾಧ್ಯಮಗಳ ಮುಂದೆ ಬರುವುದಿಲ್ಲವೇ ಎಂದು ಪ್ರಶ್ನಿಸಿದಾಗ, ನಾನು ಮಾಧ್ಯಮಗಳ ಮುಂದೆ ಏಕೆ ಬರಬೇಕು? ಇದರಿಂದ ನನಗೆ ಏನೂ ಸಿಗುತ್ತದೆ? ಒಂದಲ್ಲಾ ಒಂದು ವಿವಾದ ಶುರುವಾಗುತ್ತದೆ. ನಾನು ತುಂಬಾ ಖಾಸಗಿ ವ್ಯಕ್ತಿ. ಜನರು ನನ್ನ ಬಗ್ಗೆ ಏನೂ ಯೋಚಿಸುತ್ತಾರೆ ಎಂಬುದು ನನಗೆ ಬೇಕಾಗಿಲ್ಲ. ಅವರು ಏನೂ ಬೇಕಾದರೂ ಯೋಚಿಸಲಿ ಎಂದರು.
Advertisement
ರಾಖಿ ಬೋಲ್ಡ್ ಸೀನ್‍ನಲ್ಲಿ ನಟಿಸಬಾರದು ಎಂದು ಹೇಳಿದ್ದೀರಾ ಎಂದು ಕೇಳಿದಾಗ, ರಾಖಿ ಈಗ ವಿವಾಹಿತೆ ಹಾಗೂ ಆಕೆ ಹೊಸ ಜೀವನವನ್ನು ಶುರು ಮಾಡಿದ್ದಾಳೆ. ಯಾವ ಪತಿ ತಾನೇ ತನ್ನ ಪತ್ನಿ ಬೋಲ್ಡ್ ಸೀನ್‍ನಲ್ಲಿ ನಟಿಸಲಿ ಎಂದು ಇಚ್ಛಿಸುತ್ತಾರೆ? ರಾಖಿ ತನಗೆ ಇಷ್ಟವಾದಂತಹ ಉಡುಪನ್ನು ಧರಿಸಲಿ. ಈ ಬಗ್ಗೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದರು.
ಇದೇ ವೇಳೆ ರಾಖಿ ಸಾವಂತ್ ಗರ್ಭಿಣಿನಾ ಎಂದು ಪ್ರಶ್ನಿಸಿದಾಗ, ಸದ್ಯಕ್ಕೆ ರಾಖಿ ಈಗ ಗರ್ಭಿಣಿ ಇಲ್ಲ. ಆದರೆ ಶೀಘ್ರದಲ್ಲೇ ಗರ್ಭಿಣಿ ಆಗಲಿದ್ದಾರೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.