ಪತಿ ಆದಿಲ್ ನನ್ನು ಜೈಲಿಗೆ ಕಳುಹಿಸಿ, ಮತ್ತೊಬ್ಬ ಹುಡುಗನಿಗೆ ಮನಸೋತ ರಾಖಿ

Public TV
2 Min Read
rakhi sawant 3

ಕೆಲ ದಿನಗಳ ಕಾಲ ದುಬೈಗೆ ಹಾರಿ ಹೋಗಿದ್ದ ಡ್ರಾಮಾ ಕ್ವೀನ್ ರಾಖಿ ಸಾವಂತ್ (Rakhi Sawant), ಇದೀಗ ಭಾರತಕ್ಕೆ ವಾಪಸ್ಸಾಗಿದ್ದಾರೆ. ದುಬೈನಿಂದ ಬರುತ್ತಾ ಹೊಸ ಹುಡುಗನ ಸುದ್ದಿಯೊಂದನ್ನು ತಂದಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಘಟನೆಗಳಿಂದಾಗಿ ರಾಖಿ ಖಿನ್ನತೆಗೆ ಒಳಗಾಗಿದ್ದರಂತೆ. ಹಾಗಾಗಿ ದುಬೈಗೆ (Dubai) ಅವರು ಹಾರಿದ್ದರು. ಈ ಸಮಯದಲ್ಲಿ ರಾಖಿ ಜೀವನದಲ್ಲಿ ಹುಡುಗನೊಬ್ಬನು ಪ್ರವೇಶ ಮಾಡಿದ್ದಾನಂತೆ. ಈ ವಿಷಯದಲ್ಲಿ ನನಗೆ ಭಯವಾಗುತ್ತಿದೆ ಎಂದು ರಾಖಿ ಹೇಳಿಕೊಂಡಿದ್ದಾರೆ.

rakhi sawant 2

ನನ್ನ ಜೀವನಕ್ಕೆ ಒಳ್ಳೆಯ ಹುಡುಗನ ಪ್ರವೇಶವಾಗಿದೆ. ಆದರೆ, ಈ ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರೆ, ಈ ಹುಡುಗನ ಬಗ್ಗೆಯೂ ಭಯವಾಗುತ್ತಿದೆ. ಆದರೆ, ನನ್ನ ಜೀವನಕ್ಕೆ ಇವನು ಔಷಧಿ ರೂಪದಲ್ಲಿ ಬಂದಿದ್ದಾನೆ ಅನಿಸುತ್ತಿದೆ. ಕೆಲವರು ಗಾಯಕ್ಕೆ ಉಪ್ಪು ಹಾಕುತ್ತಾರೆ. ನೋಯಿಸುತ್ತಾರೆ. ಈ ಹುಡುಗನ ಅಂಥವನಲ್ಲ ಎಂದು ರಾಖಿ ಸಾವಂತ್ ಹುಡುಗನ ಬಗ್ಗೆ ಹಾಡಿಹೊಗಳಿದ್ದಾರೆ. ಇದನ್ನೂ ಓದಿ:ಈ ವಿಚಾರಕ್ಕೆ ನಟನೆಗೆ ಗುಡ್ ಬೈ ಹೇಳ್ತಾರಾ ‌’ಮಗಧೀರ’ ನಟಿ ಕಾಜಲ್?‌

rakhi sawant 2

ಪತಿ ಆದಿಲ್ ಖಾನ್ (Adil Khan) ವಿರುದ್ಧ ರಾಖಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆ ಆದಿಲ್ ಜೈಲಿಂದ (Jail) ಮಸೇಜ್ ಮಾಡಿರುವ ಕುರಿತು ಮಾತನಾಡಿದ್ದರು. ಆತನನ್ನು ಕ್ಷಮಿಸಿದರೆ ಬಹುಶಃ ನನ್ನನ್ನು ಅವನು ಕೊಲ್ಲಬಹುದು ಎಂದು ಹೇಳಿಕೆ ನೀಡಿದ್ದರು. ಜೈಲಿನಿಂದ ಕಳುಹಿಸಿರುವ ಸಂದೇಶದಲ್ಲಿ ‘ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡಿದ್ದಾನೆ ಎಂದೂ ರಾಖಿ ತಿಳಿಸಿದ್ದರು.

rakhi sawant 1

ಕೆಲ ದಿನಗಳ ಹಿಂದೆ ಪತಿ ಆದಿಲ್ ಕುರಿತಾಗಿ ಮತ್ತಷ್ಟು ಆರೋಪಗಳನ್ನೂ ಮಾಡಿದ್ದು, ಮತ್ತೆಂದೂ ತಾವು ಮದುವೆ ಆಗುವುದಿಲ್ಲ ಎಂದು ಘೋಷಿಸಿದ್ದರು ರಾಖಿ. ಆದಿಲ್ ಗೆ ಬುದ್ಧಿ ಕಲಿಸದೇ ತಾವು ಬಿಡುವುದಿಲ್ಲ. ಸದ್ಯ ಆದಿಲ್ ಮೈಸೂರು ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ರಾಖಿಗೆ ಸಂದೇಶವನ್ನೂ ಕಳುಹಿಸಿದ್ದಾನಂತೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ರಾಖಿ, ‘ನನ್ನಿಂದ ತಪ್ಪಾಗಿದೆ. ಮತ್ತೆ ನಾನು ನಿನ್ನೊಂದಿಗೆ ಬದುಕುವೆ. ನನ್ನ ಮೇಲಿನ ದೂರನ್ನು ವಾಪಸ್ಸು ತಗೆದುಕೊ. ಒಟ್ಟಿಗೆ ಖುಷಿಯಾಗಿ ಬದುಕೋಣ’ ಅಂತ ಆದಿಲ್ ಮಸೇಜ್ ಕಳುಹಿಸಿದ್ದಾನಂತೆ. ಆದರೆ, ಆದಿಲ್ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂದಿದ್ದರು ರಾಖಿ.

rakhi sawant 3

‘ನಾನು ಆದಿಲ್ ಗೆ ಡಿವೋರ್ಸ್ ಕೊಡುವುದಿಲ್ಲ. ಅವನು ನನ್ನಂತೆ ಇನ್ನ್ಯಾರಿಗೂ ಮೋಸ ಮಾಡಬಾರದು. ನಾನೂ ಕೂಡ ಮದುವೆಯಾಗಲಾರೆ. ಮತ್ತೆ ಅವನು ನನ್ನೊಂದಿಗೆ ಬದುಕುತ್ತೇನೆ ಎನ್ನುತ್ತಾನೆ. ಬಹುಶಃ, ಅವನು ನನ್ನನ್ನು ಸಾಯಿಸೋದಕ್ಕೆ ಪ್ಲ್ಯಾನ್ ಮಾಡಿರಬಹುದು. ಹಾಗಾಗಿ ಅವನು ನನ್ನ ಜೊತೆ ಇರುತ್ತೇನೆ ಎಂದು ಹೇಳುತ್ತಿದ್ದಾನೆ. ಆದರೆ, ಅವನನ್ನು ನಾನು ನಂಬುವುದಿಲ್ಲ. ಮತ್ತೆ ಒಟ್ಟಿಗೆ ಬದುಕುವುದಿಲ್ಲ’ ಎನ್ನುತ್ತಾರೆ ರಾಖಿ.

 

ಆದಿಲ್ ಜೊತೆ ಬೇರೆ ಯಾರೂ ಮದುವೆ ಆಗಬಾರದು ಎನ್ನುವ ಕಾರಣಕ್ಕಾಗಿ ಡಿವೋರ್ಸ್ ನೀಡುವುದಿಲ್ಲ ಎಂದೂ ರಾಖಿ ಘೋಷಣೆ ಮಾಡಿದ್ದಾರೆ. ಡಿವೋರ್ಸ್ ನೀಡಿದರೆ ಅವನು ಮತ್ತೊಂದು ಮದುವೆ ಆಗುತ್ತಾನೆ. ಮತ್ತೆ ಅವನ ಬಾಳಲ್ಲಿ ಯಾವ ಹುಡುಗಿಯೂ ಬರುವುದು ಬೇಡ ಎನ್ನುವುದು ರಾಖಿ ಸಾವಂತ್ ಮಾತಾಗಿತ್ತು. ಇದೀಗ ತಮ್ಮ ಜೀವನದಲ್ಲೇ ಹೊಸ ಹುಡುಗನನ್ನು ಬಿಟ್ಟುಕೊಂಡಿದ್ದಾರೆ ಬಾಲಿವುಡ್ ನಟಿ.

Share This Article