ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮದುವೆ ನಂತರ ಬಾತ್ಟಬ್ನಲ್ಲಿರುವ ಬೋಲ್ಡ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ರಾಖಿ ಗೌಪ್ಯವಾಗಿ ಮದುವೆಯಾದ ನಂತರ ಇನ್ಸ್ಟಾಗ್ರಾಂನಲ್ಲಿ ಹಲವು ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಈ ಹಿಂದೆ ಮದುವೆ ಫೋಟೋ, ಬ್ರೈಡಲ್ ಫೋಟೋಶೂಟ್ನ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಈಗ ಅವರು ಬಾತ್ಟಬ್ನ ಫೋಟೋಗಳನ್ನು ಹಂಚಿಕೊಂಡಿದ್ದು, ಇದೀಗ ಅದು ವೈರಲ್ ಆಗುತ್ತಿದೆ.
ಇನ್ಸ್ಟಾಗ್ರಾಂನಲ್ಲಿ ರಾಖಿ ಸಾವಂತ್ ಬಾತ್ಟಬ್ನಲ್ಲಿ ಸ್ನಾನ ಮಾಡುತ್ತಿರುವ ಬೋಲ್ಡ್ ಫೋಟೋಗಳನ್ನು ಹಾಕಿ ಅದಕ್ಕೆ, “ನನ್ನ ಪ್ರೀತಿ(ಪತಿ ರಿತೇಶ್) ಜೊತೆ ಎಂಜಾಯ್ ಮಾಡುತ್ತಿದ್ದೇನೆ” ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ರಾಖಿ ಪೋಸ್ಟ್ ಮಾಡಿದ ಫೋಟೋಗಳಲ್ಲಿ ಅವರ ಪತಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಇತ್ತೀಚೆಗೆ ರಾಖಿ ಸಾವಂತ್ ಎನ್ಆರ್ಐ ಉದ್ಯಮಿಯನ್ನು ಗೌಪ್ಯವಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ರಾಖಿ ನಾನು ಮದುವೆಯಾಗಿಲ್ಲ, ಕೇವಲ ಬ್ರೈಡಲ್ ಫೋಟೋಶೂಟ್ ಮಾಡಿಸಿದೆ ಎಂದು ಉತ್ತರಿಸಿದ್ದರು. ಬಳಿಕ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹನಿಮೂನ್ ಫೋಟೋ ಹಂಚಿಕೊಳ್ಳುವ ಮೂಲಕ ಮದುವೆ ಆಗಿದ್ದೇನೆ ಎಂದು ತಿಳಿಸಿದ್ದರು.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಅವರು, ನಾನು ಹೆದರಿಕೊಂಡಿದೆ. ಹೌದು ನಾನು ಮದುವೆಯಾಗಿದ್ದೇನೆ. ನಾನು ಈ ಸುದ್ದಿಯನ್ನು ಈಗ ಅಧಿಕೃತವಾಗಿ ಹೇಳುತ್ತಿದ್ದೇನೆ. ನನ್ನ ಪತಿಯ ಹೆಸರು ರಿತೇಶ್ ಹಾಗೂ ಅವರು ಲಂಡನ್ನಲ್ಲಿದ್ದಾರೆ. ಈಗಾಗಲೇ ಅವರು ಲಂಡನ್ಗೆ ಹೋಗಿದ್ದಾರೆ. ನನ್ನ ವೀಸಾದ ಕೆಲಸ ನಡೆಯುತ್ತಿದೆ. ವೀಸಾ ಕೆಲಸ ಮುಗಿದ ನಂತರ ನಾನು ಅವರೊಂದಿಗೆ ಸೇರುತ್ತೇನೆ ಎಂದು ತಿಳಿಸಿದ್ದರು.