ನಿನ್ನೆಯಷ್ಟೇ ಮೈಸೂರಿನ ಹುಡುಗ ಆದಿಲ್ ಖಾನ್ ಜೊತೆ ರಾಖಿ ಸಾವಂತ್ ರಿಜಿಸ್ಟರ್ ಮದುವೆ ಆಗಿರುವ ವಿಚಾರ ಬಿಟೌನ್ ಅಂಗಳದಿಂದ ಹೊರ ಬಿದ್ದಿತ್ತು. ಇದರ ಬೆನ್ನಲ್ಲೇ ರಾಖಿ ಅವರ ಹೆಸರು ಕೂಡ ಬದಲಾವಣೆ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ರಿಜಿಸ್ಟರ್ ಮದುವೆ ಆದ ನಂತರ ರಾಖಿ ಅವರು ಫಾತಿಮಾ ಆಗಿ ಬದಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಮದುವೆ ರಿಜಿಸ್ಟರ್ ನಲ್ಲಿ ರಾಖಿ ಅನಂತ್ ಸಾವಂತ್ ಅಂತಾನೇ ಹೆಸರಿದೆ. ಈ ರಿಜಿಸ್ಟರ್ ಆದ ನಂತರ ಹೆಸರಿನ ಬದಲಾವಣೆ ಆಗಿದೆಯಂತೆ.
Advertisement
ರಾಖಿ ಸಾವಂತ್ ಕದ್ದುಮುಚ್ಚಿ ಎರಡನೇ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಮೈಸೂರು ಹುಡುಗ ಆದಿಲ್ ಜೊತೆ ಸಿಂಪಲ್ ಆಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಡಿದೆ. ಈ ಸುದ್ದಿಗೆ ಪೂರಕ ಆದಿಲ್ ಮತ್ತು ರಾಖಿ ಸಾವಂತ್ ಮದುವೆಯನ್ನು ರಿಜಿಸ್ಟರ್ ಮಾಡಿಸುತ್ತಿರುವ ಫೋಟೋಗಳು ಹರಿದಾಡುತ್ತಿವೆ. ಅಲ್ಲದೇ, ರಿಜಿಸ್ಟರ್ ಪತ್ರದಲ್ಲಿ ಇಬ್ಬರು ಫೋಟೋ ಕೂಡ ಇರುವುದು ಕಂಡುಬಂದಿದೆ. ಇದನ್ನೂ ಓದಿ: ಹರಿಪ್ರಿಯಾ ತಂದೆ ಕಾರ್ಯದ ದಿನ ನಾನು ಪ್ರಪೋಸ್ ಮಾಡಿದೆ:ವಸಿಷ್ಠ ಸಿಂಹ
Advertisement
Advertisement
ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ ಆದಿಲ್ ದುರ್ರಾನಿ ಜೊತೆ ಸಾಕಷ್ಟು ಊರುಗಳನ್ನು ಸುತ್ತಿದ್ದರು ರಾಖಿ. ವಿದೇಶ ಪ್ರವಾಸಗಳನ್ನು ಮುಗಿಸಿ ಬಂದಿದ್ದಾರೆ. ಹುಡುಗನ ಊರಾದ ಮೈಸೂರಿಗೂ ಬಂದು ಹೋಗಿದ್ದಾರೆ. ಆದಿಲ್ ಕುಟುಂಬವನ್ನು ಭೇಟಿ ಮಾಡಿದ್ದ ಅವರು, ಆದಿಲ್ ಕುಟುಂಬಕ್ಕಾಗಿ ನಾನು ಬದಲಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಆ ಕುಟುಂಬಕ್ಕೆ ಅರೆಬರೆ ಬಟ್ಟೆ ಹಾಕುವುದು ಇಷ್ಟವಿಲ್ಲ ಎಂದು ಹೇಳಿದ್ದರು. ಇದೀಗ ಸದ್ದಿಲ್ಲದೇ ಆ ಕುಟುಂಬವನ್ನೂ ಸೊಸೆಯಾಗಿ ಸೇರಿಕೊಂಡಿದ್ದಾರೆ.
Advertisement
ನಿನ್ನೆಯಷ್ಟೇ ತಮ್ಮ ತಾಯಿಗೆ ಕ್ಯಾನ್ಸರ್ ಆಗಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. ಮರಾಠಿ ಬಿಗ್ ಬಾಸ್ ಮನೆಯಲ್ಲಿ ಇದ್ದ ರಾಖಿ, ತಾಯಿಯ ಅನಾರೋಗ್ಯದ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಇದೀಗ ದಢೀರ್ ಅಂತ ಮದುವೆ ಪತ್ರವನ್ನು ಹಿಡಿದು ನಿಂತಿದ್ದಾರೆ. ತಾಯಿಗೆ ಹುಷಾರಿಲ್ಲದ ಕಾರಣದಿಂದಾಗಿ ಅವರು ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಈ ಮದುವೆ ಕುರಿತಾಗಿ ಆದಿಲ್ ಆಗಲಿ ಅಥವಾ ರಾಖಿ ಸಾವಂತ್ ಆಗಲಿ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆದರೆ, ರೆಜಿಸ್ಟಾರ್ ಮದುವೆ ಆಗಿರುವ ಕುರಿತು, ಅವರು ಸಹಿ ಮಾಡುತ್ತಿರುವ ಮತ್ತು ಆ ಪತ್ರವನ್ನು ಹಿಡಿದು ನಿಂತಿರುವ ಫೋಟೋಗಳು ಮಾತ್ರ ವೈರಲ್ ಆಗಿವೆ. ಮುಂದಿನ ದಿನಗಳಲ್ಲಿ ಈ ಫೋಟೋ ಕುರಿತಾಗಿ ಅವರು ಏನು ಹೇಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k