ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. 4 ಸ್ಥಾನಗಳಿಗೆ ಚುನಾವಣೆ ನಡೆಯುತಿದ್ದು, ಕಾಂಗ್ರೆಸ್-ಜೆಡಿಎಸ್ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿದೆ.
ಜೆಡಿಎಸ್ ಶಾಸಕರು ಹೋಟೆಲ್‍ಗೆ ಶಿಫ್ಟ್ ಆಗಿದ್ದು, ಜೆಡಿಎಸ್‍ಗೆ ಅಡ್ಡಮತದಾನ ಟೆನ್ಷನ್ ಶುರುವಾಗಿದೆ. ಅಸಮಾಧಾನಿತರು ಕೊನೆ ಕ್ಷಣದಲ್ಲಿ ಕೈಕೊಡುವ ಆತಂಕ ಹೆಚ್ಚಾಗಿದೆ.
Advertisement
ಜೆಡಿಎಸ್ ಶಾಸಕಾಂಗ ಸಭೆಗೆ ಐವರು ಶಾಸಕರು ಗೈರಾಗಿದ್ದು, ಎ.ಟಿ ರಾಮಸ್ವಾಮಿ, ಜಿ.ಟಿ ದೇವೇಗೌಡ, ಶಿವಲಿಂಗೇಗೌಡ, ಶ್ರೀನಿವಾಸಗೌಡ, ಗುಬ್ಬಿ ಶ್ರೀನಿವಾಸ್ ಗೈರಾಗಿದ್ದರು. ರೆಬೆಲ್ಸ್ ಮನವೊಲಿಸಲು ಫೋನ್ ಮೂಲಕ ಎಚ್‍ಡಿಕೆ ಮದ್ದರೆಯುತ್ತಿದ್ದಾರೆ. ಇದನ್ನೂ ಓದಿ: ಯಾರಾದ್ರೂ ಮೋಸ ಮಾಡಿದ್ರೆ ಹುಷಾರ್ – ಕೈ ಶಾಸಕರಿಗೆ ಡಿಕೆಶಿ ವಾರ್ನ್
Advertisement
Advertisement
ಜೆಡಿಎಸ್ ಮುಂದಿರುವ ಆಯ್ಕೆಗಳು?
ಸದ್ಯ ಕಾಂಗ್ರೆಸ್‍ಗೆ 2ನೇ ಪ್ರಾಶಸ್ತ್ಯದ ಮತಗಳು ಹಾಕುವ ಬಗ್ಗೆ ತೀರ್ಮಾನ ಆಗಿಲ್ಲ. ಇಂದು ಕಾಂಗ್ರೆಸ್ ಹೈಕಮಾಂಡ್ ಜೊತೆ ಮತ್ತೊಂದು ಸುತ್ತಿನ ಮಾತುಕತೆಗೆ ನಿರ್ಧಾರ ಮಾಡಲಾಗಿದೆ.
Advertisement
ಕಾಂಗ್ರೆಸ್ ಹೈಕಮಾಂಡ್ ಒಪ್ಪಿದರೆ ಎರಡನೇ ಪ್ರಾಶಸ್ತ್ಯದ ಮತಗಳ ಪರಸ್ಪರ ಹಂಚಿಕೆಗೆ ನಿರ್ಧಾರ. `ಕೈ’ನ 2ನೇ ಪ್ರಾಶಸ್ತ್ಯ ಮತ ಜೆಡಿಎಸ್‍ಗೆ. ಜೆಡಿಎಸ್‍ನ 2ನೇ ಪ್ರಾಶಸ್ತ್ಯ ಮತ ಕಾಂಗ್ರೆಸ್‍ಗೆ ನೀಡಲು ನಿರ್ಧಾರ. ಕಾಂಗ್ರೆಸ್ ಒಪ್ಪದಿದ್ದರೆ ನಾವು ಸೋತರೂ ಪರವಾಗಿಲ್ಲ ಕಾಂಗ್ರೆಸ್ ಗೆಲ್ಲಬಾರದು ಎಂಬ ಉದ್ದೇಶದಿಂದ ತಮ್ಮ ಅಭ್ಯರ್ಥಿಗೇ ಎಲ್ಲ ಮೊದಲ ಪ್ರಾಶಸ್ತ್ಯದ ಮತ ಹಾಕಿಸಿಕೊಳ್ಳೋದು.
ಈ ನಿರ್ಧಾರ ತೆಗೆದುಕೊಂಡಾಗ 5-6 ಅಡ್ಡ ಮತದಾನ ಆದರೂ ಕಾಂಗ್ರೆಸ್‍ಗೆ ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಗೆಲ್ಲದಂತೆ ಮಾಡೋದು ಜೆಡಿಎಸ್ ಪ್ಲ್ಯಾನ್. ಈಗ ಬಂದಿರುವ ಮಾಹಿತಿಗಳ ಪ್ರಕಾರ ರಾಜ್ಯಸಭೆ ಸ್ಥಾನ ಬಿಟ್ಟು ಪರಿಷತ್ ಸ್ಥಾನದ(ಇಬ್ರಾಹಿಂರಿಂದ ತೆರವಾಗಲಿರುವ) ಮಾತುಕತೆಗಳು ನಡೆಯುತ್ತಿವೆ. ಒಂದು ವೇಳೆ ಇದು ಓಕೆ ಆದರೆ ಜೆಡಿಎಸ್ ಕಾಂಗ್ರೆಸ್‍ಗೆ ಬೆಂಬಲ ಕೊಡುವ ಸಾಧ್ಯತೆಯಿದೆ. ಆದರೆ ಈ ಆಯ್ಕೆಗೆ ಕಾಂಗ್ರೆಸ್ ಒಪ್ಪಿಕೊಳ್ಳುವುದು ಅನುಮಾನ. ಕಾಂಗ್ರೆಸ್‍ನ ಕೆಲವು ಶಾಸಕರ ಜೊತೆ 2ನೇ ಪ್ರಾಶಸ್ತ್ಯದ ಮತ ಕೊಡುವಂತೆ ಎಚ್‍ಡಿಕೆ ಮಾತನಾಡಿದ್ದಾರೆ. ಆ ಮತಗಳು ಬಿದ್ದರೆ ಗೆಲುವು ಸಾಧ್ಯ ಎಂಬ ಲೆಕ್ಕಾಚಾರವನ್ನು ಜೆಡಿಎಸ್ ಹಾಕಿಕೊಂಡಿದೆ.