ಜೈಪುರ: ರಾಜಸ್ಥಾನದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಶುರುವಾಗಿದೆ. ರಾಜ್ಯಸಭೆ ಚುನಾವಣೆ ಹಿನ್ನೆಲೆ ರಾಜಸ್ಥಾನದ ಕಾಂಗ್ರೆಸ್ ಅಡ್ಡ ಮತದಾನದ ಭೀತಿಯಿಂದ ತನ್ನ ಶಾಸಕರನ್ನು ಉದಯಪುರದ ಹೋಟೆಲ್‍ಗೆ ಸ್ಥಳಾಂತರಿಸಲು ನಿರ್ಧರಿಸಿದೆ.
ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಮುನ್ನವೇ ಬಿಜೆಪಿ ಆಪರೇಷನ್ ಕಮಲ ಪ್ರಾರಂಭಿಸುತ್ತದೆ ಎಂಬ ಆತಂಕದಿಂದ ರಾಜಸ್ಥಾನದಲ್ಲಿರುವ ತನ್ನ ಶಾಸಕರನ್ನು ಉದಯಪುರದ ಹೋಟೆಲ್‍ಗೆ ಕಾಂಗ್ರೆಸ್ ಶಿಫ್ಟ್ ಮಾಡಲಿದೆ.
Advertisement
Advertisement
ಜೈಪುರದ ಕ್ಲಾರ್ಕ್ ಹೋಟೆಲ್‍ನಲ್ಲಿ ನಡೆಯುತ್ತಿರುವ ತರಬೇತಿ ಶಿಬಿರ ಮುಗಿದ ನಂತರ ಗುರುವಾರ ಕಾಂಗ್ರೆಸ್ ತನ್ನ ಶಾಸಕರನ್ನು ಉದಯಪುರದ ಅರಾವಳಿ ರೆಸಾರ್ಟ್‍ಗೆ ಕರೆದೊಯ್ಯುವ ಸಾಧ್ಯತೆಯಿದೆ. ಅಲ್ಲದೆ ಪಕ್ಷೇತರ ಶಾಸಕರು ಮತ್ತು ಇತರ ಪಕ್ಷಗಳಿಗೆ ಸೇರಿದವರು ಹಾಗೂ ಆಡಳಿತ ಪಕ್ಷವನ್ನು ಬೆಂಬಲಿಸುವವರನ್ನು ಉದಯಪುರಕ್ಕೆ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ಹೇಳಿವೆ.
Advertisement
ಮತ್ತೊಂದೆಡೆ ಹರಿಯಾಣ ಕಾಂಗ್ರೆಸ್ ಶಾಸಕರನ್ನೂ ಜೈಪುರಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ಜೈಸಲ್ಮೇರ್‍ನ ಸೂರ್ಯಗಢದಲ್ಲಿ 40 ಕೊಠಡಿಗಳನ್ನು ಬುಕ್ ಮಾಡಲಾಗಿದೆ. ನಾಳೆ ಬಿಜೆಪಿಯು ತನ್ನ ಶಾಸಕರನ್ನು ಹೊಟೇಲ್‍ಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ – 2 ಬಾರಿ ಅಬಾರ್ಷನ್ ಮಾಡಿಸಿದ್ದ ರೇಖಾ
Advertisement
ಬಲಾಬಲ ಹೇಗಿದೆ?
ವಿಧಾನಸಭೆಯಲ್ಲಿ ಕಾಂಗ್ರೆಸ್ 108 ಶಾಸಕರ ಬಲವನ್ನು ಹೊಂದಿದ್ದು ನಾಲ್ಕು ಸ್ಥಾನಗಳ ಪೈಕಿ ಎರಡನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಅಭ್ಯರ್ಥಿ ಗೆಲ್ಲಲು 41 ಮತಗಳ ಅಗತ್ಯವಿದ್ದು 26 ಹೆಚ್ಚುವರಿ ಮತಗಳಿದ್ದು 3ನೇ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು 15 ಮತಗಳ ಕೊರತೆಯಿದೆ.
ಬಿಜೆಪಿ 71 ಶಾಸಕರ ಬಲವನ್ನು ಹೊಂದಿದ್ದು 1 ಸ್ಥಾನವನ್ನು ಸುಲಭವಾಗಿ ಗೆಲ್ಲಲಿದೆ. ನಂತರ 30 ಹೆಚ್ಚುವರಿ ಮತಗಳಿವೆ. ಹೀಗಾಗಿ ಅಡ್ಡ ಮತದಾನ ಭೀತಿ ಕಾಂಗ್ರೆಸ್ಸಿಗಿದೆ. ಇದನ್ನೂ ಓದಿ: ಅಮೆರಿಕದ ಆಸ್ಪತ್ರೆ ಆವರಣದಲ್ಲಿಯೇ ಗುಂಡಿನ ದಾಳಿ – ನಾಲ್ವರು ಸಾವು
13 ಪಕ್ಷೇತರ ಶಾಸಕರ ಪೈಕಿ ಮಂಗಳವಾರ 10 ಮಂದಿ ಜೊತೆ ಸಿಎಂ ಗೆಹ್ಲೋಟ್ ಮಾತನಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.