ಭಾರತಕ್ಕೆ ಆಸ್ಕರ್ ಅವಾರ್ಡ್ (Oscars 2023) ಬರುವಂತೆ ಮಾಡಿರುವ ಸ್ಟಾರ್ ನಿರ್ದೇಶಕ ರಾಜಮೌಳಿ (Rajamouli) ಅವರ ಶ್ರಮ ಸಾಕಷ್ಟಿದೆ. ಅಷ್ಟೇ ಅಲ್ಲದೇ, ಇಡೀ RRR ಚಿತ್ರದ ತಂಡದ ಟೀಂ ವರ್ಕ್ ಎಂದೇ ಹೇಳಬಹುದು. ಈ ಸಿನಿಮಾವನ್ನ ಆಸ್ಕರ್‌ಗೆ ನಾಮಿನೇಟ್ ಮಾಡಿಸಲು ನಡೆಸಿದ ಕ್ಯಾಂಪೇನ್‌ಗಾಗಿ ಕೋಟಿ ಕೋಟಿ ಖರ್ಚು ಮಾಡಿದ್ದ ರಾಜಮೌಳಿ ಆ್ಯಂಡ್ ಟೀಂ ಆಸ್ಕರ್ ಸಮಾರಂಭದಲ್ಲಿ ಸಹ ದೊಡ್ಡ ಮೊತ್ತದ ಹಣವನ್ನೇ ತೆತ್ತಿದ್ದಾರೆ.
Advertisement
ಆಸ್ಕರ್ ಅಂಗಳದಲ್ಲಿ ಭಾರತದ ಎರಡು ಸಿನಿಮಾ ಆಸ್ಕರ್ ಅವಾರ್ಡ್ (Oscars 2023) ಪಡೆದು ಗೆದ್ದು ಬೀಗಿದೆ. ಹೀಗಿರುವಾಗ RRR ಚಿತ್ರದ `ನಾಟು ನಾಟು’ (Naatu Naatu) ಸಾಂಗ್‌ನ ನಾಮಿನೇಟ್ ಮಾಡಿಸಲು ಭರ್ಜರಿ ಕ್ಯಾಂಪೇನ್ ಮಾಡಿದ್ದರು. ಅದಕ್ಕಾಗಿ ಹಣದ ಹೊಳೆಯನ್ನೇ ಹರಿಸಿದ್ದರು. ಆದರೆ ಮತ್ತೊಂದು ಅಚ್ಚರಿಯ ಮಾಹಿತಿ ಸಿಕ್ಕಿದೆ. ರಾಜಮೌಳಿ ಚಿತ್ರತಂಡ ತಮ್ಮ ಕುಟುಂಬದ ಜೊತೆ ಆಸ್ಕರ್ ಅವಾರ್ಡ್‌ನಲ್ಲಿ ಭಾಗಿಯಾಗಲು ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇದನ್ನೂ ಓದಿ: ಉರಿಗೌಡ- ನಂಜೇಗೌಡ ಚಿತ್ರ: ಚುಂಚಶ್ರೀ ಭೇಟಿಯಾಗಲಿರುವ ಮುನಿರತ್ನ
Advertisement
Advertisement
ಆಸ್ಕರ್ ನಾಮಿನೇಟ್ ಆದವರಿಗಷ್ಟೆ ಪ್ರಶಸ್ತಿಯ ಆಯೋಜಕರಾದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ ಆಂಡ್ ಸೈನ್ಸ್ ನವರು ಟಿಕೆಟ್ ಕಳಿಸುತ್ತಾರೆ. ಹಾಗಾಗಿ ನಾಮಿನೇಟ್ ಆಗಿದ್ದ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ ಮತ್ತು ಚಿತ್ರ ಸಾಹಿತಿ ಚಂದ್ರಭೋಸ್ ಹಾಗೂ ಅವರ ಕುಟುಂಬದವರಿಗಷ್ಟೆ ವಿಮಾನ ಟಿಕೆಟ್ ಹಾಗೂ ಆಸ್ಕರ್ ಹಾಲ್‌ಗೆ ಉಚಿತ ಎಂಟ್ರಿ ನೀಡಲಾಗಿತ್ತು. ರಾಜಮೌಳಿ, ರಾಮ್ ಚರಣ್, ತಾರಕ್ ಅವರ ಕುಟುಂಬಗಳಿಗೆ ಟಿಕೆಟ್ ನೀಡಿರಲಿಲ್ಲ. ಅವರುಗಳು ಸ್ವಂತ ಖರ್ಚಿನಲ್ಲಿಯೇ ಆಸ್ಕರ್ ಸಮಾರಂಭದಲ್ಲಿ ಭಾಗವಹಿಸಿದ್ದರು.
Advertisement
ಆಸ್ಕರ್ ಸಮಾರಂಭ ವೀಕ್ಷಿಸಲು, ರೆಡ್ ಕಾರ್ಪೆಟ್ ಇವೆಂಟ್‌ನಲ್ಲಿ ಭಾಗವಹಿಸಲು ಮತ್ತು ಇನ್ನಿತರೆಗಳಿಗೆ ಭಾರಿ ದೊಡ್ಡ ಮೊತ್ತದ ಟಿಕೆಟ್ ಅನ್ನು ಖರೀದಿಸಬೇಕಾಗುತ್ತದೆ. ಈ ಹಿಂದಿಗಿಂತಲೂ ಈ ಬಾರಿ ಟಿಕೆಟ್ ಬೆಲೆ ಹೆಚ್ಚು ನಿಗದಿಪಡಿಸಲಾಗಿತ್ತು. ಹಾಗಾಗಿ ರಾಜಮೌಳಿ ಬರೋಬ್ಬರಿ 25000 ಡಾಲರ್ ನೀಡಿ ಟಿಕೆಟ್ ಖರೀದಿ ಮಾಡಿದ್ದರಂತೆ. ಭಾರತದ ರೂಪಾಯಿ ಲೆಕ್ಕದಲ್ಲಿ ಒಂದು ಟಿಕೆಟ್‌ಗೆ ಜಕ್ಕಣ್ಣ 20.60 ಲಕ್ಷ ಹಣ ತೆತ್ತಿದ್ದಾರೆ. ರಾಜಮೌಳಿಯವರು ತಮ್ಮ ಪತ್ನಿ ಹಾಗೂ ಪುತ್ರ ಹಾಗೂ ಸೊಸೆಯೊಡನೆ ಇವೆಂಟ್‌ಗೆ ಹೋಗಿದ್ದರಾದ್ದರಿಂದ ಸುಮಾರು 80 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಕೇವಲ ಟಿಕೆಟ್‌ಗೆ ಖರ್ಚು ಮಾಡಿದ್ದಾರೆ.
20 ಲಕ್ಷ ಒಬ್ಬ ವ್ಯಕ್ತಿಗೆ ನೀಡಿದ್ದರೂ ಸಹ ಅದು ವಿಐಪಿ ಟಿಕೆಟ್ ಆಗಿರಲಿಲ್ಲ ವಿಐಪಿ ಟಿಕೆಟ್ ಪಡೆಯಲು 40 ಲಕ್ಷಕ್ಕಿಂತಲೂ ಹೆಚ್ಚು ಹಣ ತೆರಬೇಕಿತ್ತು. ಇದೇ ಕಾರಣಕ್ಕೆ ರಾಜಮೌಳಿ ಹಾಗೂ ಅವರ ಕುಟುಂಬ ಸದಸ್ಯರು ಆಸ್ಕರ್ ನಡೆಯುತ್ತಿದ್ದ ಹಾಲ್‌ನ ಕೊನೆಯ ಸಾಲಿನಲ್ಲಿ ಕೂತು ಇವೆಂಟ್ ಅನ್ನು ವೀಕ್ಷಿಸಿದ್ದರು.