ಆರ್.ಆರ್.ಆರ್ ಯಶಸ್ಸಿನಲ್ಲಿ ತೇಲುತ್ತಿರುವ ನಿರ್ದೇಶಕ ರಾಜಮೌಳಿ, ಸದ್ದಿಲ್ಲದೇ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಮಹೇಶ್ ಬಾಬು ಅವರಿಗಾಗಿ ಸಿನಿಮಾ ಮಾಡಲಿದ್ದು, ಈ ಕೆಲಸದಲ್ಲಿ ರಾಜಮೌಳಿ ಬ್ಯುಸಿಯಾಗಿದ್ದಾರಂತೆ. ಸ್ಕ್ರಿಪ್ಟ್ ಕೆಲಸದಲ್ಲಿ ತಲ್ಲೀಣರಾಗಿರುವ ನಿರ್ದೇಶಕರು ಮಹೇಶ್ ಬಾಬು ಅವರನ್ನು ಈ ಸಿನಿಮಾದಲ್ಲಿ ಹೊಸ ರೀತಿಯಲ್ಲಿ ತೋರಿಸಲಿದ್ದಾರಂತೆ. ಕಥೆಯೇ ಬಗ್ಗೆ ಯಾವುದೇ ಮಾಹಿತಿ ಕೊಡದೇ ಇದ್ದರೂ, ಇದು ಕೂಡ ಐತಿಹಾಸಿಕ ಸಂಬಂಧವನ್ನು ಹೊಂದಿದೆಯಂತೆ.
ರಾಜಮೌಳಿ ಅವರ ಮುಂದಿನ ಸಿನಿಮಾಗೆ ಮಹೇಶ್ ಬಾಬು ಅವರೇ ನಾಯಕ ಎಂದು ಹೇಳಲಾದರೂ, ನಾಯಕಿ ಯಾರು ಎನ್ನುವ ಬಗ್ಗೆ ಚರ್ಚೆ ನಡೆದಿತ್ತು. ಈ ಬಾರಿ ಯಾವ ನಾಯಕಿಗೆ ರಾಜಮೌಳಿ ಅವರು ಅವಕಾಶ ನೀಡಲಿದ್ದಾರೆ ಎಂಬ ಪ್ರಶ್ನೆ ಮೂಡಿತ್ತು. ತೆಲುಗು ಸಿನಿಮಾ ರಂಗದಲ್ಲಿ ಸದ್ಯ ಐಶ್ವರ್ಯ ರೈ ಅವರ ಹೆಸರು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿ ಐಶ್ವರ್ಯ ರೈ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಥೈಲ್ಯಾಂಡ್ ಟ್ರಿಪ್ನಲ್ಲಿ ಪಟಾಕಿ ಪೋರಿ ಆಶಿಕಾ ರಂಗನಾಥ್
ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ ನ ಈ ಸಿನಿಮಾ ಸೆಟ್ಟೇರುವುದು ತಡವಾಗಿದ್ದರೂ, ಈಗಾಗಲೇ ಹಲವು ಸುತ್ತು ಚರ್ಚೆಗಳು ನಡೆದಿವೆ. ಸಿನಿಮಾದ ಬಜೆಟ್, ಕಲಾವಿದರ ಆಯ್ಕೆ, ಕಥೆ ಹೀಗೆ ಹಲವು ಕಾರಣಗಳಿಂದಾಗಿ ಸಿನಿಮಾ ಈಗಿನಿಂದಲೇ ನಿರೀಕ್ಷೆ ಮೂಡಿಸಿದೆ. ಆರ್.ಆರ್.ಆರ್ ಸಿನಿಮಾದ ನಂತರ ಈ ಸಿನಿಮಾ ಬರುತ್ತಿರುವುದರಿಂದ ಮತ್ತಷ್ಟು ಬೇಡಿಕೆಯಂತೂ ಹೆಚ್ಚಾಗಲಿದೆ.