ಬೆಂಗಳೂರು: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಯಮಲೂರು ಬಳಿ ಕೋಟಿಗಟ್ಟಲೆ ಬೆಲೆಯ ವಿಲ್ಲಾಗಳಿಗೂ ಮಳೆಯ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಯಾಗಿದೆ.
Advertisement
ಹೌದು ಕೋಟಿಗಟ್ಟಲೇ ಹಣ ಕೊಟ್ಟು ಖರೀದಿಸಿದ ಅತ್ಯಂತ ಪ್ರತಿಷ್ಟಿತ ವಿಲ್ಲಾಗಳಿಗೂ ಮಳೆಯ ನೀರು ನುಗ್ಗಿದ್ದು, ಮನೆಯಿಂದ ಹೊರಬರಲಾಗದೇ ಜನರು ಪರದಾಡುತ್ತಿದ್ದಾರೆ. ಲಕ್ಷಗಟ್ಟಲೇ ಬೆಲೆಯ ಐಷಾರಾಮಿ ಕಾರುಗಳು ನೀರಿಗೆ ಮುಳುಗಡೆಯಾಗಿದೆ. ವಿಲ್ಲಾದ ಜನ ಈಗ ಟ್ರ್ಯಾಕ್ಟರ್ ಮೂಲಕ ಸಂಚಾರ ಮಾಡುತ್ತಿದ್ದಾರೆ. ಐಟಿ ಬಿಟಿ ಕಂಪನಿ ಉದ್ಯೋಗಿಗಳಿಗೆ ಟ್ರಾಕ್ಟರ್‌ಗಳೇ ಆಸರೆಯಾಗಿದೆ. ಎಸಿ ಕಾರು, ಎಸಿ ಬಸ್‍ಗಳಲ್ಲಿ ಓಡಾಡುತ್ತಿದ್ದವರು ಇದೀಗ ಟ್ರಾಕ್ಟರ್‌ನಲ್ಲಿ ಪ್ರಯಾಣಿಸುವ ಸ್ಥಿತಿ ಎದುರಾಗಿದೆ.
Advertisement
Advertisement
ಹೆಚ್‍ಎಎಲ್‍ಟು ಬೆಳ್ಳಂದೂರು ಸಂಪರ್ಕಿಸುವ ರಸ್ತೆಗಳಲ್ಲಿ ನಾಲ್ಕು ಆಡಿ ನೀರು ತುಂಬಿದ್ದು, ಐದು ನಿಮಿಷಕ್ಕೊಂದಂತೆ ಎರಡು ಕಡೆಗಳಲ್ಲಿ ಹತ್ತಕ್ಕೂ ಹೆಚ್ಚು ಟ್ರಾಕ್ಟರ್‌ಗಳು ಪ್ರಯಾಣಕ್ಕೆ ಸಿದ್ದವಾಗಿವೆ. ಇನ್ನೂ ಬೆಳ್ಳಂದೂರು, ಯಮಲೂರು, ಚಲ್ಲಘಟ್ಟ ಕಡೆಗಳಿಗೆ ಹೋಗುವವರ ಸ್ಥಿತಿ ಕೇಳುವವರೆ ಇಲ್ಲದಂತಾಗಿದೆ. ಇದನ್ನೂ ಓದಿ: ನಿಮ್ಮ ಸರ್ಕಾರದಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರ ನೆನಪಿಸಿಕೊಳ್ಳಿ- ಸಿದ್ದುಗೆ ಸುನಿಲ್ ತಿರುಗೇಟು
Advertisement
ಯಮಲೂರು, ಕೆರೆ ನೀರು, ರಾಜಕಾಲುವೆ ನೀರು ಐಟಿ, ಬಿಟಿ ಕಂಪನಿಗಳಿಗೂ ನುಗ್ಗಿದ್ದು ಅವಾಂತರ ಸೃಷ್ಟಿಯಾಗಿದೆ. ಇದೀಗ ಮಳೆ ನೀರನ್ನು ಹೊರ ತೆಗೆಯಲು ಕ್ರೈನ್‍ಗಳು, ಜೆಸಿಬಿಗಳು, ಅಗ್ನಿಶಾಮಕ ಸಿಬ್ಬಂದಿ, ಎನ್‍ಡಿಆರ್‌ಎಫ್ ತಂಡಗಳು ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೂ ಓದಿ: ಕಾಕ್‍ಪಿಟ್‍ನಲ್ಲಿ ಕೇಳಿಸಿತು ಶಿಳ್ಳೆ – ಮಧ್ಯದಲ್ಲಿಯೇ ಹಿಂದಿರುಗಿದ ವಿಸ್ತಾರ ವಿಮಾನ