ನವದೆಹಲಿ: ಬೋಯಿಂಗ್ 737 ವಿಮಾನದ ಕಾಕ್‍ಪಿಟ್ ಬಲಭಾಗದಲ್ಲಿ ‘ಶಿಳ್ಳೆ’ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ವಿಸ್ತಾರಾ ಏರ್‌ಲೈನ್ಸ್‌ನ ವಿಮಾನ ದೆಹಲಿಗೆ ಮರಳಿದೆ.
ಈ ಕುರಿತಂತೆ ವಿಮಾನದ ಪ್ರಾಥಮಿಕ ಭೂ ತಪಾಸಣೆ ವೇಳೆ ಯಾವುದೇ ರಚನಾತ್ಮಕ ನ್ಯೂನತೆ ಕಂಡುಬಂದಿಲ್ಲವಾದರೂ, ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಿದೆ. ಇದನ್ನೂ ಓದಿ: 2024ರಲ್ಲಿ ಬಿಜೆಪಿಯೇತರ ಸರ್ಕಾರ ಬಂದ್ರೆ ರೈತರಿಗೆ ಉಚಿತ ವಿದ್ಯುತ್ – ಕೆಸಿಆರ್ ಭರವಸೆ
2022ರ ಸೆಪ್ಟೆಂಬರ್ 4ರಂದು ವಿಸ್ತಾರಾ ಬಿ737-800 ವಿಮಾನ ವಿಟಿ-ಟಿಜಿಬಿ ಯುಕೆ 951 (ದೆಹಲಿ-ಮುಂಬೈ) ವಿಮಾನ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕಾಕ್‍ಪಿಟ್‍ನ ಬಲಭಾಗದಲ್ಲಿ ಶಿಳ್ಳೆ ಸದ್ದು ಕೇಳಿ ಬಂದಿದ್ದರಿಂದ ದೆಹಲಿಗೆ ಮರಳಿತು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಪುತ್ತೂರು ಮತ್ತು ಸುಳ್ಯದ 32 ಕಡೆ NIA ದಾಳಿ
ವಿಸ್ತಾರಾ – ಟಾಟಾ ಮತ್ತು ಸಿಂಗಾಪುರ್ ಏರ್‌ಲೈನ್ಸ್ ಲಿಮಿಟೆಡ್ (ಎಸ್‍ಐಎ) ಜಂಟಿ ಉದ್ಯಮವಾಗಿದ್ದು, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪೈಲಟ್‍ಗಳು ಹಿಂದಿರುಗಲು ನಿರ್ಧರಿಸಿದರು. ಹೀಗಾಗಿ ದೆಹಲಿಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ವಿಮಾನ ಲ್ಯಾಂಡಿಂಗ್ ಆಯಿತು ಮತ್ತು ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆಗೊಳಿಸಲಾಯಿತು ಏರ್‌ಲೈನ್ ತಿಳಿಸಿದೆ.