ಬೆಂಗಳೂರು: ಅಕಾಲಿಕ ಮಳೆ, ಬಿರುಬಿಸಿಲಿನ ಪರಿಣಾಮ ಮಾರುಕಟ್ಟೆಗೆ ತರಕಾರಿ ಸರಿಯಾಗಿ ಬರುತ್ತಿಲ್ಲ. ಇದರಿಂದ ಸೊಪ್ಪು-ತರಕಾರಿ ಬೆಲೆ ಗಗನಕ್ಕೇರಿದೆ.
ಹೌದು..ರಾಜ್ಯದಲ್ಲಿ ಅನೇಕ ದಿನಗಳಿಂದ ಬಿಸಿಲಿನ ತಾಪ ಹೆಚ್ಚಾಗಿದ್ದು, ಅಕಾಲಿಕ ಮಳೆಯಾಗುತ್ತಿದೆ. ಇದರ ಪರಿಣಾಮ ತರಕಾರಿ ಬೆಳೆಗಳಿಗೆ ಹಾನಿಯಾಗಿದ್ದು, ಇದೀಗ ತರಕಾರಿಗಳ ಬೆಲೆ ಏರಿಕೆಯಾಗಿದೆ. ಅದರಲ್ಲೂ ಟೊಮೆಟೋ ದರವಂತೂ ಕೇಳೋದೆ ಬೇಡ. ನಗರದ ಹಾಪ್ ಕಾಮ್ಸ್ ಮಾರುಕಟ್ಟೆಯಲ್ಲಿ ತರಕಾರಿಗಳ ದರವನ್ನು ನೋಡೋದಾದರೆ…
Advertisement
Advertisement
ತರಕಾರಿ ಹಿಂದಿನ ದರ ಇವತ್ತಿನ ದರ (ಕೆ.ಜಿಗೆ)
ಟೊಮೆಟೊ – 25 ರೂ. 40 ರೂ.
ಬೀನ್ಸ್ – 40 ರೂ. 100 ರೂ.
ಬದನೆಕಾಯಿ – 40 ರೂ. 60 ರೂ.
ಹೀರೆಕಾಯಿ- 40 ರೂ. 62 ರೂ.
ಬೆಂಡೇಕಾಯಿ- 30 ರೂ. 35 ರೂ.
ಹಾಗಲಕಾಯಿ – 40 ರೂ. 60 ರೂ.
Advertisement
ಟೊಮೆಟೋ ದರ 25 ರೂ.ನಿಂದ 40 ರೂ.ಗೆ ಏರಿಕೆಯಾದರೆ. ಬೀನ್ಸ್ 40 ರೂ.ನಿಂದ 100ರೂ.ಗೆ ಜಂಪ್ ಆಗಿದೆ. ಇನ್ನೂ ಬದನೆಕಾಯಿ 40 ರಿಂದ 60 ರೂಗೆ ಏರಿಕೆಯಾದರೇ, ಹೀರೆಕಾಯಿ 40 ರೂ.ನಿಂದ 62 ರೂ, ಬೆಂಡೆಕಾಯಿ 30 ರೂ.ನಿಂದ 35 ರೂ ಮತ್ತು ಹಾಗಲಕಾಯಿ 40 ರೂನಿಂದ 60 ರೂಗೆ ಏರಿಕೆ ಕಂಡಿದೆ ಎಂದು ಮಾರ್ಕೆಟಿಂಗ್ ಮ್ಯಾನೇಜರ್ ಗೋಪಾಲಗೌಡ ತಿಳಿಸಿದ್ದಾರೆ.
Advertisement
ಇನ್ನೂ ಅಗ್ಗವಾಗಿದ್ದ ತರಕಾರಿಗಳ ಬೆಲೆ ಏರಿಕೆಗೆ ಪ್ರಮುಖ ಕಾರಣಗಳೆಂದರೆ,
* ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿರುವುದು.
* ಮಳೆ ಇಲ್ಲದೆ ಇಳುವರಿ ಕುಂಠಿತವಾಗಿರೋದು.
* ತರಕಾರಿಗಳ ಸರಬರಾಜು ವ್ಯವಸ್ಥೆಯಲ್ಲಿ ವ್ಯತಯ.