ಹೈದರಾಬಾದ್: ರೈಲು ಎಂಜಿನ್ ತನ್ನ ಬೋಗಿಗಳಿಂದ ಬೇರ್ಪಟ್ಟು ಸುಮಾರು 10 ಕಿ.ಮೀ. ದೂರದವರೆಗೂ ಹೋಗಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಭುವನೇಶ್ವರ-ಸಿಕಂದರಾಬಾದ್ ನಡುವೆ ಸಂಪರ್ಕ ಕಲ್ಪಿಸುವ ವಿಶಾಖ ಎಕ್ಸ್ ಪ್ರೆಸ್‍ಗೆ ಸೇರಿದ ಎಂಜಿನ್ ಇದಾಗಿದೆ. ಎಂಜಿನ್ ಮತ್ತು ಬೋಗಿಗಳ ನಡುವಿನ ರಾಡ್‍ಗಳು ಮುರಿದುಹೋಗಿದೆ. ಪರಿಣಾಮ ಅದು ನರಸಿಪಟ್ನಮ್ ಮತ್ತು ಟುನಿ ರೈಲ್ವೆ ನಿಲ್ದಾಣಗಳ ನಡುವೆ ಎಂಜಿನ್ ತನ್ನ ಬೋಗಿಯಿಂದ ಬೇರ್ಪಟ್ಟು ಮುಂದೆ ಹೋಗಿದೆ. ತಕ್ಷಣ ಈ ಘಟನೆ ಬಗ್ಗೆ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.
Advertisement
Andhra Pradesh: The engine of Visakha Express that plies between Bhubaneshwar to Secunderabad got detached from its coaches between Narsipatnam and Tuni railway stations, yesterday. The engine travelled at least 10 km. Investigation underway. pic.twitter.com/tdpBG88iRH
— ANI (@ANI) August 19, 2019
Advertisement
ಮಾಹಿತಿ ತಿಳಿದು ರೈಲ್ವೆ ಅಧಿಕಾರಿಗಳು ತಂತ್ರಜ್ಞರ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಇದರಿಂದ ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಇತರ ಕೆಲವು ರೈಲುಗಳು ತಡವಾಗಿದೆ ಹೋಗಿವೆ. ಆದರೆ ಇದರಿಂದ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಎಂದು ರೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಎಂಜಿನ್ ರೈಲು ಬೋಗಿಗಳನ್ನು ಬಿಟ್ಟು ಚಲಿಸುತ್ತಿದ್ದುದ್ದನ್ನು ನೋಡಿ ಸಾರ್ವಜನಿಕರು ವಿಡಿಯೋ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಸದ್ಯಕ್ಕೆ ರೈಲ್ವೆ ಅಧಿಕಾರಿಗಳು ಈ ಕುರಿತು ತನಿಖೆ ಆರಂಭಿಸಿದ್ದಾರೆ.