Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪೌರಕಾರ್ಮಿಕರ ಮನೆಗೆ ಭೇಟಿ, ಮೆಟ್ರೋ ಪ್ರಯಾಣ – ರಾಹುಲ್ ಬೆಂಗಳೂರು ರೌಂಡ್ಸ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪೌರಕಾರ್ಮಿಕರ ಮನೆಗೆ ಭೇಟಿ, ಮೆಟ್ರೋ ಪ್ರಯಾಣ – ರಾಹುಲ್ ಬೆಂಗಳೂರು ರೌಂಡ್ಸ್

Bengaluru City

ಪೌರಕಾರ್ಮಿಕರ ಮನೆಗೆ ಭೇಟಿ, ಮೆಟ್ರೋ ಪ್ರಯಾಣ – ರಾಹುಲ್ ಬೆಂಗಳೂರು ರೌಂಡ್ಸ್

Public TV
Last updated: April 8, 2018 10:23 pm
Public TV
Share
2 Min Read
rahul bng c
SHARE

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು. ಬೆಳಗ್ಗೆ 8.30ಕ್ಕೆ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಿಂದ ಶುರು ಮಾಡಿದ ರಾಹುಲ್ ದಿನವಿಡಿ ಸಾಲು ಸಾಲು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

rahul bng 4

ಅಶೋಕ ಹೋಟೆಲ್‍ನಲ್ಲಿ ಮಾಧ್ಯಮದವರೊಂದಿಗೆ ಬೆಳಿಗ್ಗಿನ ಉಪಹಾರ ಕೂಟದಲ್ಲಿ ಭಾಗವಹಿಸುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದಿನ ತಮ್ಮ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಉಪಹಾರ ಸೇವಿಸುತ್ತಾ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ಸಂದರ್ಭದಲ್ಲಿ ರಾಹುಲ್ ಗೆ ಸಾಥ್ ನೀಡಿದ ಸಿಎಂ ಸಿದ್ದರಾಮಯ್ಯ 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಭಿನ್ನಮತೀಯರಿಗೆಲ್ಲ ಟಿಕೆಟ್ ಕೊಡುತ್ತೇವೆ ಏಳು ಜನರು ಕೂಡ ಸ್ಪರ್ಧೆ ಮಾಡುತ್ತಾರೆ. ಪುಲಿಕೇಶಿನಗರದಲ್ಲಿ ಟಿಕೆಟ್ ಹಂಚಿಕೆ ಕುರಿತು ಎರಡು ದಿನಗಳ ಕಾಲ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ ಅಲ್ಲಿ ಎಲ್ಲವೂ ನಿರ್ಧಾರ ಆಗಲಿದೆ ಎಂದು ತಿಳಿಸಿದರು.

ನಗರದ ಜಕ್ಕರಾಯನ ಕೆರೆ ಸ್ಲಂ ಬಳಿ ಪೌರ ಕಾರ್ಮಿಕರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಿದರು. ಸಂವಾದ ಸಂದರ್ಭದಲ್ಲಿ ಜನರ ಬಳಿಗೆ ಬರುವಾಗ ತಾವೇ ಸ್ವತಃ ಖುರ್ಚಿ ತೆಗೆದುಕೊಂಡು ಬಂದು ಕುಳಿತು ಆತ್ಮೀಯರೆನಿಸಿದರು. ದಿಢೀರ್ ಭೇಟಿ ಭಾಗವಾಗಿ ಪೌರಕರ್ಮಿರರೊಂಬ್ಬರ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿ ಕಾರ್ಮಿಕರೊಬ್ಬರ ಮನೆಯಲ್ಲಿ ಕಾಂಗ್ರೆಸ್ ನಾಯಕರ ಜೊತೆ ಆತಿಥ್ಯ ಸ್ವೀಕರಿಸಿದರು. ಇದನ್ನೂ ಓದಿ: ಮಹಿಳಾ ಸಾಧಕರ ಜೊತೆ ರಾಹುಲ್ ಸಂವಾದ ವೇಳೆ ರಮ್ಯಾ ದರ್ಪ!

rahul bng

ಸೆಂಟ್ರಲ್ ಕಾಲೇಜಿನ ಜ್ಞಾನಜೋತಿ ಆವರಣದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ, ಜಿಎಸ್‍ಟಿ ಸಮಸ್ಯೆಗಳು, ಎಪಿಎಂಸಿ ಮಾರುಕಟ್ಟೆ ಸಮಸ್ಯೆಗಳು, ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳ ಆಥೀಕತೆ ಕುರಿತು ಉದ್ಯಾಮಿಗಳು ಕೇಳಿದ ಪ್ರಶ್ನೇಗಳಿಗೆ ಉತ್ತರಿಸಿದರು. ಬಳಿಕ ಬ್ಲೂ ರ್ಯಾಡಿಸನ್ ಹೋಟೆಲ್‍ನಲ್ಲಿ ಆಯ್ದ ಮಹಿಳಾ ಸಾಧಕಿಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂವಾದ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಎಂಟ್ರಿ ಕೊಡದೆ ನಟಿ, ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ದರ್ಪ ಪ್ರದರ್ಶಿಸಿದರು. ಇದನ್ನೂ ಓದಿ: ಕೈ ಸಮಾವೇಶದಲ್ಲಿ ತಪ್ಪಿದ ಭಾರೀ ದುರಂತ- ನೋಡನೋಡ್ತಿದಂತೆ ಉರುಳಿ ಬಿತ್ತು ಬೃಹತ್ ಕಟೌಟ್

rahul bng 7

ಇದೇ ವೇಳೆ ರಾಹುಲ್ ಗಾಂಧಿ ನಮ್ಮ ಮೆಟ್ರೋದಲ್ಲಿ ರೌಂಡ್ಸ್ ಹಾಕಿ ಗಮನ ಸೆಳೆದರು. ಸಾಮಾನ್ಯ ಪ್ರಯಾಣಿಕರಂತೆ ರಾಹುಲ್ ಗಾಂಧಿ ವಿಧಾನ ಸೌಧ ಮೆಟ್ರೋ ಸ್ಟೇಷನ್‍ನಿಂದ ಎಂ.ಜಿ ರಸ್ತೆ ಮೆಟ್ರೋ ಸ್ಟೇಷನ್ ವರೆಗೆ ಪ್ರಯಾಣ ಬೆಳೆಸಿದರು. ಸಿಎಂ ಸಿದ್ಧರಾಮಯ್ಯ ಖುದ್ದು ಟಿಕೇಟ್ ಖರೀದಿಸಿದರು. ಮೆಟ್ರೋನಲ್ಲಿ ನಿಂತೆ ಕಾಂಗ್ರೆಸ್ ನಾಯಕರ ಜೊತೆ ಪ್ರಯಾಣವನ್ನು ರಾಹುಲ್ ಗಾಂಧಿ ಎಂಜಾಯ್ ಮಾಡಿದರು. ಈ ವೇಳೆ ಪ್ರಯಾಣಿಕರು ರಾಹುಲ್ ಗಾಂಧಿ ಜೊತೆ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು. ಇದನ್ನೂ ಓದಿ: ಬೆಂಗಳೂರು ದೇಶದ ಎರಡನೇ ರಾಜಧಾನಿ ಮಾಡಲು ಚಿಂತನೆ: ರಾಹುಲ್ ಗಾಂಧಿ

rahul gandhi 1

TAGGED:aiccAssembly ElectionsbengalurucongressPublic TVRahul GandhiRamyaಎಐಸಿಸಿಕಾಂಗ್ರೆಸ್ಪಬ್ಲಿಕ್ ಟಿವಿಬೆಂಗಳೂರುರಮ್ಯಾರಾಹುಲ್ ಗಾಂಧಿವಿಧಾನಸಭಾ ಚುನಾವಣೆ
Share This Article
Facebook Whatsapp Whatsapp Telegram

Cinema news

ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories
ranveer singh 2
ದೈವಕ್ಕೆ ಅಪಮಾನ – ಇನ್ಮುಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲ್ಲ: ಕ್ಷಮೆಯಾಚಿಸಿದ ರಣವೀರ್ ಸಿಂಗ್
Cinema Court Latest South cinema Top Stories

You Might Also Like

White House Dinner shooting How did the attacker Cole Tomas Allen break into the Trump dinner party despite ample security
Latest

ದಾಳಿಗೂ ಮುನ್ನವೇ ಪ್ಲ್ಯಾನ್‌ – ಸಾಕಷ್ಟು ಭದ್ರತೆ ಇದ್ದರೂ ದಾಳಿಕೋರ ಟ್ರಂಪ್‌ ಡಿನ್ನರ್‌ ಪಾರ್ಟಿಗೆ ನುಗ್ಗಿದ್ದು ಹೇಗೆ?

Public TV
By Public TV
9 minutes ago
Public Tv Vidhyapeeta 6
Bengaluru City

ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಇಂದು ಕೊನೆ ದಿನ – ಬನ್ನಿ, ಭಾಗವಹಿಸಿ, ಮಾಹಿತಿ ಪಡೆಯಿರಿ

Public TV
By Public TV
11 minutes ago
Narendra Modi 1 2
Latest

White House Dinner Shooting | ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ: ಮೋದಿ

Public TV
By Public TV
15 minutes ago
Donald Trump 1
Latest

ಕೊನೆಕ್ಷಣದಲ್ಲಿ ಶಾಂತಿ ಮಾತುಕತೆ ರದ್ದುಗೊಳಿಸಿದ ಟ್ರಂಪ್‌- ಪೆಚ್ಚಾದ ಪಾಕಿಸ್ತಾನ

Public TV
By Public TV
2 hours ago
trump attack rally
Latest

White House Dinner Shooting| 4 ಬಾರಿ ಟ್ರಂಪ್‌ ಹತ್ಯೆಗೆ ಯತ್ನ – ಯಾವಾಗ ಏನಾಗಿತ್ತು?

Public TV
By Public TV
3 hours ago
Chikkamagaluru Suicide copy
Chikkamagaluru

ಸಾಂಬಾರ್ ಮಾಡಿಲ್ಲ ಅಂತ ಅಪ್ಪ ಬೈದಿದ್ದಕ್ಕೆ ಯುವತಿ ಆತ್ಮಹತ್ಯೆ

Public TV
By Public TV
3 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?