ಕೆಟಿಎಮ್ 390 ಬೈಕ್‌ನಲ್ಲಿ ರಾಹುಲ್ ಗಾಂಧಿ ಲಡಾಖ್ ಪ್ರವಾಸ – ಪ್ಯಾಂಗಾಂಗ್ ಸರೋವರ ಭೇಟಿ

Public TV
2 Min Read
rahul gandhi ladakh 2

ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಪ್ರಸ್ತುತ ಲಡಾಖ್ (Ladakh) ಪ್ರವಾಸ ಕೈಗೊಂಡಿದ್ದು, ಶನಿವಾರ ಬೈಕ್ ರೈಡ್ (Bike Ride) ಮೂಲಕ ಪ್ಯಾಂಗಾಂಗ್ ಸರೋವರಕ್ಕೆ (Pangong Lake) ತೆರಳಿದ್ದಾರೆ. ರಾಹುಲ್ ಗಾಂಧಿ ಅವರ ಬೈಕ್ ರೈಡ್ ಫೋಟೋಸ್ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

ರಾಹುಲ್ ಗಾಂಧಿ ತಾವು ಬೈಕ್ ಓಡಿಸುತ್ತಿರುವ ಫೋಟೋಗಳನ್ನು ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲವು ಫೋಟೋಗಳನ್ನು ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ. ರಾಹುಲ್ ಗಾಂಧಿ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಕೆಲವು ಸಾಲುಗಳನ್ನು ಕೂಡಾ ಬರೆದಿದ್ದಾರೆ. ಪ್ಯಾಂಗಾಂಗ್ ಸರೋವರ ವಿಶ್ವದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದು ಎಂದು ನಮ್ಮ ತಂದೆ ಸರೋವರಕ್ಕೆ ಹೋಗುತ್ತಿದ್ದ ದಾರಿಯಲ್ಲಿ ಹೇಳುತ್ತಿದ್ದರು ಎಂದು ರಾಗಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದ್ವಾರಕಾ ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ ಅಕ್ರಮ ನಡೆದಿಲ್ಲ: ನಿತಿನ್ ಗಡ್ಕರಿ ಸ್ಪಷ್ಟನೆ

rahul gandhi ladakh 1

ಮಾಹಿತಿಗಳ ಪ್ರಕಾರ, ರಾಹುಲ್ ಗಾಂಧಿ ಆಗಸ್ಟ್ 20ರಂದು ತಮ್ಮ ತಂದೆ ರಾಜೀವ್ ಗಾಂಧಿಯವರ (Rajiv Gandhi) ಜನ್ಮದಿನದ ಸಲುವಾಗಿ ಪ್ಯಾಂಗಾಂಗ್ ಸರೋವರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ರಾಹುಲ್ ಗಾಂಧಿ ತಮ್ಮದೇ ಆದ ಕೆಟಿಎಮ್ ಬೈಕ್ ಅನ್ನು ಹೊಂದಿದ್ದರೂ ಸಹಿತ ಅವರ ಭದ್ರತಾ ಸಿಬ್ಬಂದಿ ಅದರಲ್ಲಿ ಸವಾರಿ ಮಾಡಲು ಬಿಡುವುದಿಲ್ಲ ಎಂದು ಈ ಹಿಂದೆ ಹೇಳಿದ್ದರು. ಇದನ್ನೂ ಓದಿ: Rajasthan: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಸಮಿತಿ ರಚಿಸಿದ ರಾಜಸ್ಥಾನ ಸಿಎಂ

rahul gandhi ladakh

ರಾಹುಲ್ ಗಾಂಧಿ ಕೆಟಿಎಮ್ 390 ಅಡ್ವೆಂಚರ್ ಬೈಕ್ ಅನ್ನು ಸವಾರಿ ಮಾಡುತ್ತಿದ್ದು, ಹೆಲ್ಮೆಟ್, ಕೈಗವಸು, ಸವಾರಿ ಬೂಟುಗಳು ಮತ್ತು ಜಾಕೆಟ್ ಧರಿಸಿರುವುದನ್ನು ಫೋಟೋದಲ್ಲಿ ಕಾಣಬಹುದು. ಕೆಟಿಎಮ್ 390 ಅಡ್ವೆಂಚರ್ ಬೈಕ್ 373 ಸಿಸಿ ಬೈಕ್ ಆಗಿದ್ದು, ಗರಿಷ್ಠ 32 ಕಿಲೋ ವ್ಯಾಟ್ ಪವರ್ ಮತ್ತು 37 ಎನ್‌ಎಮ್ ಗರಿಷ್ಠ ಟಾರ್ಕ್ ಅನ್ನು ಹೊಂದಿದೆ. ಅಲ್ಲದೇ ಗರಿಷ್ಠ 155 ಕಿಲೋ ಮೀಟರ್ ವೇಗವನ್ನು ಹೊಂದಿದೆ. ಇದನ್ನೂ ಓದಿ: ಸರ್ಕಾರದ ಎಲ್ಲ ಸಂಸ್ಥೆಗಳಲ್ಲೂ RSS ತನ್ನ ಜನರನ್ನಿರಿಸಿದೆ – ರಾಹುಲ್ ಗಾಂಧಿ ಆರೋಪ

ರಾಹುಲ್ ಗಾಂಧಿ ಕೆಟಿಎಮ್ ಬೈಕ್ ಅನ್ನು ಹೊಂದಿದ್ದರೂ ಸಹಿತ ಅವರ ಭದ್ರತಾ ಸಿಬ್ಬಂದಿ ಅದರಲ್ಲಿ ಸವಾರಿ ಮಾಡಲು ಬಿಡುವುದಿಲ್ಲ ಎಂದು ಈ ಹಿಂದೆ ಹೇಳಿದ್ದರು. ಇದನ್ನೂ ಓದಿ: ಅಮೇಥಿಯಿಂದ ರಾಹುಲ್, ವಾರಣಾಸಿಯಿಂದ ಪ್ರಿಯಾಂಕಾ ಸ್ಪರ್ಧೆ

Web Stories

Share This Article