-ಸಿದ್ದರಾಮೋತ್ಸವಕ್ಕೆ ಬಂದವ್ರು ಕಾಂಗ್ರೆಸ್ ಓಟರ್ಸ್ ಅಲ್ಲ
-ದಾವಣಗೆರೆಯಲ್ಲಿ ಬಿಜೆಪಿಯ ಕಾರ್ಯಕ್ರಮ ಮಾಡಲು ಸಿದ್ದತೆ
-ದಾವಣಗೆರೆಯಲ್ಲಿ ಬಿಜೆಪಿಯ ಕಾರ್ಯಕ್ರಮ ಮಾಡಲು ಸಿದ್ದತೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ರಾಹುಲ್ ಗಾಂಧಿ ಜೀರೋ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ
Advertisement
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಮಾಡಿರುವುದು ಸಿದ್ದರಾಮಯ್ಯನವರ ಅಭಿಮಾನಿಗಳು. ಕಾಂಗ್ರೆಸ್‍ನವರು ಈಗ ಭ್ರಮಾಲೋಕದಲ್ಲಿ ತೇಲಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಅಂದುಕೊಂಡಿದ್ದಾರೆ. ಅಲ್ಲಿ ಬಂದಿರುವ 60 ಪರ್ಸೆಂಟ್ ಜನ ಸಿದ್ದರಾಮಯ್ಯ ಅಭಿಮಾನಿಗಳು. ನಾನು ಸಿದ್ದರಾಮಯ್ಯನವರ ಬಗ್ಗೆ ಟೀಕೆ ಮಾಡಲ್ಲ. ಸಿದ್ದರಾಮಯ್ಯನವರ ಬಗ್ಗೆ ಇಟ್ಟಿರುವ ಗೌರವಕ್ಕೆ ಅಭಿಮಾನಿಗಳು ಬಂದಿದ್ದಾರೆ. ಆದರೆ ಅವರು ಕಾಂಗ್ರೆಸ್ ಓಟರ್ಸ್ ಅಲ್ಲ. ಕಾಂಗ್ರೆಸ್ ಒಂದು ರೀತಿ ಸತ್ತೇ ಹೋಗಿದೆ. ರಾಜ್ಯದಲ್ಲಿ, ದೇಶದಲ್ಲಿ ಕಾಂಗ್ರೆಸ್ ಬಲಿಷ್ಟವಾಗಿದೆ. ಬಸವರಾಜ್ ಬೊಮ್ಮಾಯಿ ಕೊಟ್ಟ ಅನೇಕ ಕಾರ್ಯಕ್ರಮಗಳು ಜನಪರವಾಗಿವೆ. ಕಾಂಗ್ರೆಸ್ ಸಿದ್ದರಾಮೋತ್ಸವ ಕಾರ್ಯಕ್ರಮದ ಬಗ್ಗೆ ನಮಗೇನೂ ಭಯ ಇಲ್ಲ. ಆ ಕಾರ್ಯಕ್ರಮ ವಿರೋಧ ಮಾಡಿದ್ದು ಕಾಂಗ್ರೆಸ್‍ನವರೇ ಹೊರತು, ನಾವಲ್ಲಾ. ಬಿಜೆಪಿ ಜನಪರ ಕಾರ್ಯಕ್ರಮಗಳ ಬಗ್ಗೆ ರಾಜ್ಯಾದ್ಯಂತ ಕಾರ್ಯಕ್ರಮ ಮಾಡಲಿದೆ. ಆ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ದಾವಣಗೆರೆಯಲ್ಲಿ ಮಾಡಲು ಸಿಎಂಗೆ ವಿನಂತಿ ಮಾಡುತ್ತೇನೆ ಎಂದಿದ್ದಾರೆ.
Advertisement
Advertisement
ಬಿಜೆಪಿ ಸಂಘಟನೆ ದೇಶದಲ್ಲಿ ರಾಜ್ಯದಲ್ಲಿ ಬಲಿಷ್ಠವಾಗಿದೆ. ಮೋದಿ, ಬಿಎಸ್‍ವೈ ಅವರು ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ನೇಕಾರ ಸಮುದಾಯದ ಮಕ್ಕಳಿಗೆ ವಿದ್ಯಾನಿಧಿ ಕಾರ್ಯಕ್ರಮವನ್ನು ಸಿಎಂ ಕೊಟ್ಟಿದ್ದಾರೆ. ಸ್ವಾಮಿ ವಿವೇಕಾನಂದ ಹೆಸರಿನಲ್ಲಿ ಯುವಕರಿಗೆ ಆದ್ಯತೆ ಕೊಟ್ಟಿದ್ದಾರೆ. ನಮ್ಮ ಸರ್ಕಾರದ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದೆ. ಒಟ್ಟಾಗಿ ನಾವು ಮುನ್ನುಗ್ಗಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಜನರ ಮನೆ ಬಾಗಿಲನ್ನು ತಲುಪಿ ಮತ್ತೆ ನಾವು ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ನಾವು ಸಹ ದಾವಣಗೆರೆಯಲ್ಲಿ ಸಮಾವೇಶ ಮಾಡುತ್ತೇವೆ. ಆದರೆ ಇದು ಸಿದ್ದರಾಮೋತ್ಸವಕ್ಕೆ ಕೌಂಟರ್ ಅಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿ ಸಂಬಂಧಿ ಜೊತೆ ಲವ್ವಿ-ಡವ್ವಿ, ವೇಶ್ಯೆ ಪ್ರೀತಿಗೆ ಬಿದ್ದು ಆದ ಸೈಕೋ ಕಿಲ್ಲರ್ – ಮಂಡ್ಯದಲ್ಲೊಂದು ಮರ್ಡರ್ ಮಿಸ್ಟ್ರಿ
Advertisement
ಜನಪರವಾದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಸಲುವಾಗಿ ಸಮಾರೋಪ ಕಾರ್ಯಕ್ರಮ ಮಾಡುತ್ತೇವೆ. ಈ ಬಗ್ಗೆ ಸಿಎಂ ಹಾಗೂ ಅಧ್ಯಕ್ಷರ ಜೊತೆಗೆ ಚರ್ಚೆ ನಡೆಸಿದ್ದೇವೆ. ಕಾರ್ಯಕ್ರಮದ ಸಮಾರೋಪಕ್ಕೆ ಅವಕಾಶ ಕೊಡಿ ಅಂತ ಕೇಳಿದ್ದೇವೆ. ಸಿದ್ದರಾಮೋತ್ಸವ ವಿರೋಧ ಮಾಡಿದ್ದು ಕಾಂಗ್ರೆಸ್‍ನವರು. ಕಾಂಗ್ರೆಸ್‍ನಲ್ಲಿ ಗುಂಪಿಗಾರಿಕೆ ಇದೆ. ಬಿಜೆಪಿಯಲ್ಲಿ ಯಾವುದೇ ಗುಂಪಿಗಾರಿಕೆ ಇಲ್ಲ. ಸಿದ್ದರಾಮಯ್ಯನವರ ಮೇಲೆ ಗೌರವ ಇದೆ. ಯಾವುದೇ ಭಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾಲು-ಸಾಲು ಸರಗಳ್ಳತನ- 5 ರಾಜ್ಯಗಳಲ್ಲಿ ಸದ್ದು ಮಾಡ್ತಿದ್ದ ಖತರ್ನಾಕ್ ಕಳ್ಳ ಬೆಂಗ್ಳೂರಿನಲ್ಲಿ ಅರೆಸ್ಟ್
ನನಗೆ ಸರಿಯಾಗಿ ಹುಟ್ಟುಹಬ್ಬದ ದಿನ ಗೊತ್ತಿಲ್ಲ ಅಂತ ಸಿದ್ದರಾಮಯ್ಯನವರು ಹೇಳಿರುವುದನ್ನು ಗಮನಿಸಿದ್ದೇನೆ. ಕಾಂಗ್ರೆಸ್‍ನ ಮುಖಂಡರು ಭ್ರಮಾಲೋಕದಲ್ಲಿದ್ದಾರೆ. ರಾಹುಲ್ ಗಾಂಧಿಯವರು ಬಲವಂತವಾಗಿ ಅಪ್ಪಿಕೊಳ್ಳಿ ಅಂತ ಹೇಳಿದರು. ನನಗೆ ಇದು ಒಂದು ಕಡೆ ನಗು ಬರುತ್ತದೆ, ಮತ್ತೊಂದು ಕಡೆ ಆಶ್ಚರ್ಯ ಆಗುತ್ತದೆ. ದೇವಸ್ಥಾನದಲ್ಲಿ ತೀರ್ಥವನ್ನ ಮಾತ್ರೆಯಂತೆ ತೆಗೆದುಕೊಳ್ಳುತ್ತಾರೆ. ನರೇಂದ್ರ ಮೋದಿ ವಿಶ್ವ ಮೆಚ್ಚಿದ ನಾಯಕ. ಮೋದಿ ಮುಂದೆ ರಾಹುಲ್ ಗಾಂದಿ ಜೀರೋ. ಹಿಂದೂ ವಿರೋಧಿಯವರು. ವಿನಃ ಕಾರಣ ಕಾಂಗ್ರೆಸ್‍ನವರಿಗೆ ಕಾನೂನನ್ನು ಗೌರವಿಸುವುದು ಗೊತ್ತಿಲ್ಲ. ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬಂದವರು ಕಾಂಗ್ರೆಸ್‍ನವರಲ್ಲ, ಸಿದ್ದರಾಮಯ್ಯನವರ ಅಭಿಮಾನಿಗಳು. ಬಹಳಷ್ಟು ಜನ ಪಕ್ಷಾತೀತವಾಗಿ ಹೋಗಿದ್ದಾರೆ ಎಂದಿದ್ದಾರೆ.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]