CrimeDistrictsKarnatakaLatestLeading NewsMain PostMandya

ಪತ್ನಿ ಸಂಬಂಧಿ ಜೊತೆ ಲವ್ವಿ-ಡವ್ವಿ, ವೇಶ್ಯೆ ಪ್ರೀತಿಗೆ ಬಿದ್ದು ಆದ ಸೈಕೋ ಕಿಲ್ಲರ್ – ಮಂಡ್ಯದಲ್ಲೊಂದು ಮರ್ಡರ್ ಮಿಸ್ಟ್ರಿ

Advertisements

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲೀಗ ರಕ್ತಪಾತದ ಕಥೆಗಳೇ ಹೆಚ್ಚಾಗಿ ಸದ್ದು ಮಾಡುತ್ತಿದೆ. ಕಳೆದ 2 ತಿಂಗಳ ಹಿಂದೆ ನಾಲೆಯಲ್ಲಿ ತೇಲಿಬಂದ ರುಂಡವಿಲ್ಲದ 2 ಮಹಿಳೆಯರ ಮೃತದೇಹ ಪ್ರಕರಣ ಮಂಡ್ಯ ಜನತೆಯನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು.

ಪ್ರಕರಣ ಬೇಧಿಸಲು ಮುಂದಾಗಿದ್ದ ಪೊಲೀಸರಿಗೆ ಹಲವು ಸವಾಲುಗಳು ಎದುರಾಗಿದ್ದವು. ಕೊನೆಗೂ ರಹಸ್ಯ ಹೊರಬಿದ್ದಿದ್ದು, ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಐಷಾರಾಮಿ ಮದ್ವೆ, 3 ತಿಂಗಳಲ್ಲಿ ಸಂಸಾರ ಬೀದಿಗೆ – ಪತ್ನಿಯನ್ನು ಮನೆಯಿಂದ ಹೊರಹಾಕಿದ ಕುಡುಕ ಪತಿ!

ಹೌದು.. ಮದುವೆಯಾಗಿದ್ದರೂ ಪರ ಸ್ತ್ರೀ ಮೋಹದ ಬಲೆಗೆ ಬಿದ್ದಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ ಮೂರು ಕೊಲೆ ಮಾಡಿದ್ದ. ಮಂಡ್ಯದಲ್ಲಿ 2 ತಿಂಗಳ ಹಿಂದೆ ನಾಲೆಯಲ್ಲಿ ಎರಡು ರುಂಡವಿಲ್ಲದ ಮೃತದೇಹ ತೇಲಿಬಂದಿತ್ತು. ಈ ಪ್ರಕರಣದ ಬೆನ್ನುಬಿದ್ದ ಶ್ರೀರಂಗಪಟ್ಟಣ ಪೊಲೀಸರಿಗೆ ಲಿಂಕ್ ಸಿಕ್ಕಿದ್ದು ಚಾಮರಾಜನಗರದಲ್ಲಿನ ಒಂದು ಮಿಸ್ಸಿಂಗ್ ಕೇಸ್. ಆ ಮಿಸ್ಸಿಂಗ್ ಕೇಸ್ ಬೆನ್ನತ್ತಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಭಾರತದ ಮೇಲೆ ಉಗ್ರರ ದಾಳಿ ಭೀತಿ: ಗುಪ್ತಚರ ಇಲಾಖೆ ಎಚ್ಚರಿಕೆ

ಪತ್ನಿ ಸಂಬಂಧಿಯೊಂದಿಗೆ ಲವ್ವಿ-ಡವ್ವಿ:
ಬೆಂಗಳೂರು ಮೂಲದ ಸಿದ್ದಲಿಂಗಪ್ಪ(35) ಎಂಬಾತನೇ ಕೊಲೆ ಆರೋಪಿ. ಈತನಿಗೆ ಮದುವೆಯಾಗಿದ್ದರೂ ಪತ್ನಿ ಸಂಬಂಧಿಯ ಜೊತೆ ಲವ್‌ನಲ್ಲಿ ಬಿದ್ದಿದ್ದ. ಆದರೆ ಆಕೆಗೆ ವೇಶ್ಯಾವಟಿಕೆ ಲಿಂಕ್ ಇತ್ತು. ಇದನ್ನು ಸಿದ್ದಲಿಂಗಪ್ಪ ಸಹಿಲಾಗದೇ ಪ್ರೇಯಸಿಯ ಲಿಂಕ್‌ನಲ್ಲಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಕೊಲೆಗೈಯ್ಯುತ್ತಿದ್ದ. ಪ್ರೇಯಸಿಯ ಗುಂಗಲ್ಲಿ ಸಿದ್ದಲಿಂಗಪ್ಪ ಸೈಕೋ ಆಗಿದ್ದ. ಅದಕ್ಕಾಗಿ ಪ್ರೇಯಸಿಗೆ ಹಣ, ಚಿನ್ನಾಭರಣದ ಆಸೆ ಹುಟ್ಟಿಸಿ ಮೂವರು ಮಹಿಳೆಯರ ಕೊಲೆಗೈದಿದ್ದಾನೆ. ಜೂನ್ 7ರಂದು ಇಬ್ಬರು ಮಹಿಳೆಯರ ಕೊಲೆಗೈದು ರುಂಡ-ಮುಂಡ ಬೇರೆ ಮಾಡಿ ಮಂಡ್ಯದ ಬೇಬಿ ಗ್ರಾಮದ ಕೆರೆ ಹಾಗೂ ಅರಕೆರೆ ಸಮೀಪದ ಕಿರುನಾಲೆಯಲ್ಲಿ ಮೃತದೇಹ ಎಸೆದಿದ್ದ.

ಸಾವಿರಾರು ನಾಪತ್ತೆ ಪ್ರಕರಣಗಳನ್ನ ಜಾಲಾಡಿದ್ರೂ ಪೊಲೀಸರಿಗೆ ಸುಳಿವು ಸಿಕ್ಕಿರಲಿಲ್ಲ. ಇತ್ತ ದೇಹದ ಮೇಲ್ಭಾಗ ಸಿಗದೆ, ಮೃತರ ನಾಪತ್ತೆ ಪ್ರಕರಣವೂ ದಾಖಲಾಗದೆ ಪೊಲೀಸರಿಗೆ ತಲೆನೋವಾಗಿತ್ತು. ಹೀಗಿರೋವಾಗ ಜು.25ರಂದು ಚಾಮರಾಜನಗರದಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಕಾಲ್ ಲಿಸ್ಟ್ ಆಧರಿಸಿ ತನಿಖೆ ನಡೆಸಿದಾಗ 3 ಕೊಲೆ ಪ್ರಕರಣ ಬಯಲಾಗಿದೆ. ಇದನ್ನೂ ಓದಿ: ಸಾಲು-ಸಾಲು ಸರಗಳ್ಳತನ- 5 ರಾಜ್ಯಗಳಲ್ಲಿ ಸದ್ದು ಮಾಡ್ತಿದ್ದ ಖತರ್ನಾಕ್ ಕಳ್ಳ ಬೆಂಗ್ಳೂರಿನಲ್ಲಿ ಅರೆಸ್ಟ್

ಮೇ 30ರಂದು ಚಿತ್ರದುರ್ಗ ಮೂಲದ ಮಹಿಳೆಯೊಬ್ಬರ ಕೊಲೆಯಾಗಿತ್ತು. ಜು.3ರಂದು ಚಾಮರಾಜನಗರ ಮೂಲದ ಮತ್ತೊಂದು ಮಹಿಳೆಯ ಕೊಲೆಯಾಗಿತ್ತು. ಇಬ್ಬರನ್ನೂ ಮನೆಗೆ ಕರೆಸಿ ಕುತ್ತಿಗೆ ಬಿಗಿದು ಹತ್ಯೆಗೈದು, ನಂತರ ಇಬ್ಬರ ರುಂಡ ಮುಂಡ ಬೇರ್ಪಡಿಸಿ ನಾಲೆಗೆ ಎಸೆಯಲಾಗಿತ್ತು.

ಅದರಲ್ಲೂ ಚಾಮರಾಜನಗರ ಮೂಲದ ಮಹಿಳೆ ನಾಪತ್ತೆ ಪ್ರಕರಣ ಬಳಿಕ ಈ ಎಲ್ಲಾ ಕೊಲೆ ರಹಸ್ಯ ಬಯಲಾಗಿದೆ. ಸಿದ್ದಲಿಂಗಪ್ಪ ಮತ್ತು ಉಳಿದ ಹಂತಕರು ತಗ್ಲಾಕೊಂಡಿದ್ದಾರೆ. ವಿಚಾರಣೆಯಲ್ಲಿ ಎರಡರ ಜೊತೆ ಮತ್ತೊಂದು ಕೊಲೆ ಹಾಗೂ 5 ಹತ್ಯೆ ಸ್ಕೆಚ್‌ಗಳ ಬಗ್ಗೆಯೂ ಪಾಪಿಗಳು ಬಾಯ್ಬಿಟ್ಟಿದ್ದಾರೆ. ಮಂಡ್ಯದ ನಾಲೆಯಲ್ಲಿ ಮಾತ್ರವಲ್ಲದೇ ಅದಕ್ಕೂ ಮೊದಲು ಬೆಂಗಳೂರಿನಲ್ಲೂ ಒಂದು ಕೊಲೆ ಮಾಡಿರೋದು ಗೊತ್ತಾಗಿದೆ. ಪ್ರಕರಣ ಭೇದಿಸಿದ ಮಂಡ್ಯ ಪೊಲೀಸರಿಗೆ 1 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ.

Live Tv

Leave a Reply

Your email address will not be published.

Back to top button