Bengaluru CityCrimeDistrictsKarnatakaLatestLeading NewsMain Post

ಸಾಲು-ಸಾಲು ಸರಗಳ್ಳತನ- 5 ರಾಜ್ಯಗಳಲ್ಲಿ ಸದ್ದು ಮಾಡ್ತಿದ್ದ ಖತರ್ನಾಕ್ ಕಳ್ಳ ಬೆಂಗ್ಳೂರಿನಲ್ಲಿ ಅರೆಸ್ಟ್

Advertisements

ಬೆಂಗಳೂರು: ಒಂದರ ನಂತರ ಒಂದರಂತೆ ಸಾಲು-ಸಾಲು ಸರಗಳ್ಳತನ ಮಾಡುತ್ತಾ 5 ರಾಜ್ಯಗಳಲ್ಲಿ ಸದ್ದು ಮಾಡ್ತಿದ್ದ ಖತರ್ನಾಕ್ ಕಳ್ಳನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಪುಣೆ ಮೂಲದ ಖತರ್ನಾಕ್ ಸರಗಳ್ಳ ಅಮೂಲ್ ಶಿಂಧೆ ಬಂಧಿತ ಆರೋಪಿಯಾಗಿದ್ದು, ಈತನಿಂದ 130 ಗ್ರಾಂ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ನಟ ರೋಹಿತ್ ವಿರುದ್ಧ ಕೊಲೆ ಬೆದರಿಕೆ ಸೇರಿದಂತೆ ಹಲವು ಆರೋಪ

5 ರಾಜ್ಯಗಳಿಂದ ಬರೊಬ್ಬರಿ 28 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಅಮೂಲ್, ತಮಿಳುನಾಡಿನಲ್ಲಿ ಇತ್ತೀಚೆಗೆ ಲಾಕ್ ಆಗಿದ್ದ. ಜೈಲು ವಾಸ ಅನುಭವಿಸಿ ರಿಲೀಸ್ ಆದ ಮರುದಿನವೇ ಬೆಂಗಳೂರಿಗೆ ಬಂದಿದ್ದಾನೆ. ಇಲ್ಲಿ ಮೂರು ದಿನಗಳಿದ್ದು, ಮತ್ತೆ ಸರಳಗಳ್ಳತನ ಮಾಡೋಕೆ ಶುರು ಮಾಡಿದ್ದ. ಇದನ್ನೂ ಓದಿ: ಚಿಲಿಯಲ್ಲಿ ನಿಗೂಢ ಸಿಂಕ್‍ಹೋಲ್ ಪತ್ತೆ – ಹೇಗೆ ಬಂತು ಅಂತ ಯಾರಿಗೂ ಗೊತ್ತಿಲ್ಲ!

ಮಹಾರಾಷ್ಟ್ರ, ಮುಂಬೈ, ಹೈದರಾಬಾದ್, ತಮಿಳುನಾಡಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಆಸಾಮಿ ಜುಲೈ 21ರಂದು ತಮಿಳುನಾಡಿನ ಚೆನ್ನೈ ಜೈಲಿಂದ ರಿಲೀಸ್ ಆಗಿದ್ದ. ಇದಾದ ಮಾರನೇ ದಿನವೇ ಬೆಂಗಳೂರಿಗೆ ಎಂಟ್ರಿಕೊಟ್ಟ ಅಮೂಲ್ ಶಿಂಧೆ ಮೈಕೊಲೇಔಟ್ ಹಾಗೂ ಜೆ.ಪಿ.ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ. ಪ್ರಕರಣಗಳ ದಾಖಲಾದ ಕೂಡಲೇ ಅಲರ್ಟ್ ಆದ ಪೊಲೀಸರು, ಮೈಕೋಲೇಔಟ್ ಎಸಿಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Live Tv

Leave a Reply

Your email address will not be published.

Back to top button