ಮುಂಬೈ: ಟೀಂ ಇಂಡಿಯಾ ಯುವ ಪ್ರತಿಭೆಗಳಿಗೆ ಯಶಸ್ವಿ ಮಾರ್ಗದರ್ಶನ ನೀಡಿರುವ ರಾಹುಲ್ ದ್ರಾವಿಡ್ ನನ್ನ ವೃತ್ತಿ ಜೀವನದ ಯಶಸ್ವಿ ಬದಲಾವಣೆಗೆ ಪ್ರಮುಖ ಕಾರಣ ಎಂದು ಯುವ ವೇಗಿ ಖಲೀಲ್ ಅಹ್ಮದ್ ತಿಳಿಸಿದ್ದಾರೆ.
ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಆಯ್ಕೆ ಆಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಖಲೀಲ್, ನನಗೆ ಮೊದಲ ಬಾರಿ ಈ ಸುದ್ದಿ ಕೇಳಿದ ತಕ್ಷಣ ಹೆಚ್ಚಿನ ಸಂತಸ ಉಂಟಾಯಿತು. ಇದಕ್ಕೆ ನಾನು ರಾಹುಲ್ ದ್ರಾವಿಡ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಅವರು ನನ್ನ ಕ್ರಿಕೆಟ್ ವೃತ್ತಿ ಜೀವನದ ಪ್ರಮುಖ ಮಾರ್ಗದರ್ಶಕರು ಎಂದು ಹೇಳಿದ್ದಾರೆ.
Advertisement
There are two, three slots we are yet to see before we fix the final team for the World Cup and one of the slots is a seamer slot which is available. We are looking at a left-hander option in Khaleel Ahmed: MSK Prasad, BCCI Chief selector pic.twitter.com/w1hAtSkln3
— ANI (@ANI) September 1, 2018
Advertisement
ಟೀಂ ಇಂಡಿಯಾ ಭಾಗವಾಗಿ ಆಡುವುದು ನನ್ನ ಕನಸಾಗಿತ್ತು, ಸದ್ಯ ಈ ಅವಕಾಶ ಲಭಿಸಿರುವುದು ನನಗೆ ನಂಬಲೂ ಅಸಾಧ್ಯವಾಗಿದೆ. ಪ್ರತಿಯೊಬ್ಬ ಆಟಗಾರನಿಗೂ ದೇಶದ ಪರ ಆಡುವ ಕನಸು ಇರುತ್ತೆ. ಅದಕ್ಕೆ ನಾನು ಭಿನ್ನ ಅಲ್ಲ. ಆದರೆ ಒಬ್ಬ ಬೌಲರ್ ಆಗಿ ನನ್ನನ್ನು ರೂಪಿಸಿದ ರಾಹುಲ್ ದ್ರಾವಿಡ್ ಅವರಿಗೆ ನನ್ನ ಧನ್ಯವಾದ. ಅಲ್ಲದೇ ನಾನು ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ರನ್ನು ಅನುಕರಿಸಿ ಬೌಲ್ ಮಾಡಲು ಕಲಿತ್ತಿದ್ದೆ. ಜಹೀರ್ ನನ್ನ ಹೀರೋ ಎಂದು ಖಲೀಲ್ ಸಂತಸ ವ್ಯಕ್ತಪಡಿಸಿದ್ದಾರೆ.ಇದನ್ನು ಓದಿ: ಚಿನ್ನ ಗೆದ್ದ ಸ್ವಪ್ನಾ ಸಾಧನೆಯ ಹಿಂದಿದೆ ದ್ರಾವಿಡ್ ಸಹಾಯಹಸ್ತ!
Advertisement
Very happy to see Manish Pandey and Ambati Rayudu back in the team. Been hearing good things about Khaleel Ahmed. Being left handed has helped him. Bit hard maybe on Kaul.
— Harsha Bhogle (@bhogleharsha) September 1, 2018
Advertisement
ದ್ರಾವಿಡ್ ನಿಮ್ಮ ವೃತ್ತಿ ಜೀವನದಲ್ಲಿ ಹೇಗೆ ಪ್ರಭಾವ ಬೀರಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಖಲೀಲ್, ತರಬೇತಿ ವೇಳೆ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ರಾಹುಲ್ ಸರ್ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಅಲ್ಲದೇ ಹೊಸ ಅಂಶಗಳನ್ನು ಕಲಿಯಲು ಎಂದು ಹಿಂದೇಟು ಹಾಕಬಾರದು ಎಂದು ತಿಳಿಸಿದ್ದರು. ಅವರ ಸಲಹೆಗಳು ನನ್ನ ವೃತ್ತಿ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ರಾಹುಲ್ ದ್ರಾವಿಡ್ ಸಲಹೆಗಳು ಇಂದಿಗೂ ಕಿವಿಯಲ್ಲಿ ಗುಂಯ್‍ಗುಡುತ್ತಿದೆ: ಶಿವಂ ಮಾವಿ
ಯುನೈಟೆಡ್ ಅರಬ್ ಎಮಿರೇಟ್ಸ್ ಏಷ್ಯಾಕಪ್ ಟೂರ್ನಿ ನಡೆಯಲಿದ್ದು, ಬಿಸಿಸಿಐ 16 ಆಟಗಾರರ ಪಟ್ಟಿಯನ್ನು ಶನಿವಾರ ಬಿಡುಗಡೆಗಳಿಸಿತ್ತು. ದ್ರಾವಿಡ್ ಗರಡಿಯಲ್ಲಿ ಪಳಗಿರುವ ರಿಷಬ್ ಪಂತ್, ಪಾಂಡ್ಯ ಈಗಾಗಲೇ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು, ನಾನು ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುತ್ತೆನೆ ಎಂದು ಖಲೀಲ್ ನಗೆ ಬೀರಿದ್ದಾರೆ. ಅಂದಹಾಗೇ ಖಲೀಲ್ ಎಡಗೈ ವೇಗಿಯಾಗಿದ್ದು, ಟೀಂ ಇಂಡಿಯಾ ಅಂಡ್ 19 ವಿಶ್ವಕಪ್ ಹಾಗೂ ಐಪಿಎಲ್ ನಲ್ಲಿ ಹೈದರಾಬಾದ್ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.ಇದನ್ನು ಓದಿ:ಚಿನ್ನ ಗೆದ್ದ ಸ್ವಪ್ನಾ ಸಾಧನೆಯ ಹಿಂದಿದೆ ದ್ರಾವಿಡ್ ಸಹಾಯಹಸ್ತ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Now that I have got selected, I want to play maximum number of matches for India & not just the Asia Cup. I want to play for at least 10 years & take as many wickets as I can: Khaleel Ahmed, cricketer on being selected for #AsiaCup2018 pic.twitter.com/wv9aqZelJO
— ANI (@ANI) September 1, 2018