ರಾಗಿ ದೇಹಕ್ಕೆ ಆರೋಗ್ಯಕರ. ಅದರಿಂದ ಮಾಡಿದ ಯಾವುದೇ ತಿಂಡಿ, ತಿಸುಗಳು ಅಷ್ಟೇ ಆರೋಗ್ಯ ಕರವಾಗಿರುತ್ತದೆ. ಶುಗರ್ ರೋಗಿಗಳಿಗೆ ಮತ್ತು ಡಯಟಿಂಗ್ ಮಾಡುವರಿಗೂ ಈ ರಾಗಿಯಿಂದ ತಯಾರಿಸೋ ದೋಸೆ ಉತ್ತಮ. ಜೊತೆಗೆ ರಾಗಿ ದೋಸೆಯನ್ನು ತಕ್ಷಣಕ್ಕೆ ಮಕ್ಕಳಿಗೂ ಮಾಡಿಕೊಡಬಹುದು. ಆದ್ದರಿಂದ ಕಡಿಮೆ ಸಮಯದಲ್ಲಿ ರಾಗಿ ದೋಸೆ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಾನು:
1. ರಾಗಿ ಹಿಟ್ಟು – 1 ಕಪ್
2. ರವೆ – 2 ಟೇಬಲ್ ಚಮಚ
3. ಅಕ್ಕಿ ಹಿಟ್ಟು – ಅರ್ಧ ಕಪ್
4. ಮೊಸರು – ಅರ್ಧ ಕಪ್
5. ಉಪ್ಪು -ರುಚಿಗೆ ತಕ್ಕಷ್ಟು
6. ಸೋಡ -ಚಿಟಿಕೆ
7. ಎಣ್ಣೆ – ಅರ್ಧ ಕಪ್
Advertisement
Advertisement
ಮಾಡುವ ವಿಧಾನ:
* ಮೊದಲು ರಾಗಿ ಹಿಟ್ಟು, ಅಕ್ಕಿ ಹಿಟ್ಟು, ರವಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸೋಡ ಹಾಕಿ ಮಿಕ್ಸ್ ಮಾಡಿ.
* ಬಳಿಕ ಮೊಸರು ಹಾಕಿ ಮಿಕ್ಸ್ ಮಾಡಿ.
* ಸ್ವಲ್ಪ ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನ ಹದ ಬರುವಾಗೆ ಮಿಕ್ಸ್ ಮಾಡಿ, 15 ನಿಮಿಷ ನೆನೆಸಿಡಿ.
* ದೋಸೆ ಹಂಚನ್ನು ಬಿಸಿಗೆ ಹಿಡಿ.
* ನಂತರ ಕಾದಿರುವ ಹಂಚಿನ ಮೇಲೆ ದೋಸೆ ರೀತಿ ಬಿಡಿ.
* ಹಂಚಿನ ಮೇಲೆ ಬಿಟ್ಟ ರಾಗಿ ದೋಸೆಗೆ ಸುತ್ತಲು ಒಂದು ಚಮಚ ಎಣ್ಣೆ ಚಿಮುಕಿಸಿ.
* ಅದರ ಮೇಲೆ ಒಂದು ಪ್ಲೇಟ್ ಮುಚ್ಚಿ ಒಂದು ನಿಮಿಷ ಬೇಯಲು ಬಿಡಿ.
* ಬಳಿಕ ರಾಗಿ ದೋಸೆಯನ್ನು ಉಲ್ಟ ಮಾಡಿ ಬೇಯಿಸಿರಿ.
* ಬಳಿಕ ಒಂದು ಪ್ಲೇಟಿಗೆ ಹಾಕಿಕೊಂಡು, ಕಾಯಿ ಚಟ್ನಿ ಜೊತೆಗೆ ಸವಿಯಿರಿ.
Advertisement