ಬೆಂಗಳೂರು: ಔರಾದ್ಕರ್ ವರದಿ ಸಂಪೂರ್ಣವಾಗಿ ಜಾರಿಯಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್ ರಾಜು ಸ್ಪಷ್ಟಪಡಿಸಿದ್ದಾರೆ.
ಕಳೆದ 2 ವರ್ಷದಿಂದ ಪೊಲೀಸ್ ಮಹಾನಿರ್ದೇಶಕಿಯಾಗಿ ಕೆಲಸ ಮಾಡಿದ ನೀಲಮಣಿ ಎನ್ ರಾಜು ಇಂದು ನಿವೃತ್ತಿಯಾದರು. ಕೋರಮಂಗಲ ಕೆಎಸ್‍ಆರ್ ಪಿ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮುಗಿದ ಬಳಿಕ ಮಾತನಾಡಿದ ಡಿಜಿ ಐಜಿ ನೀಲಮಣಿ ಎನ್ ರಾಜು ಪೊಲೀಸರ ವೇತನ ತಾರತಮ್ಯದ ಬಗ್ಗೆ ಸರ್ಕಾರಕ್ಕೆ ಸಲ್ಲಿಸಿದ ರಾಘವೇಂದ್ರ ಔರಾದ್ಕರ್ ವರದಿ ಸಂಪೂರ್ಣವಾಗಿ ಜಾರಿಯಾಗಿದೆ ಎಂದರು.
Advertisement
Advertisement
ಇದೇ ಸಂದರ್ಭದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಹಿರಿಯ ಅಧಿಕಾರಿ ರಾಘವೇಂದ್ರ ಔರಾದ್ಕರ್ ಅವರು, ಸರ್ಕಾರಕ್ಕೆ ಪೊಲೀಸರ ವೇತನ ತಾರತಮ್ಯದ ಬಗ್ಗೆ ಸ್ಟಡಿ ಮಾಡಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿ ಮಾಡಿದೆ. ಸರ್ಕಾರ ನನ್ನ ವರದಿಯನ್ನು ಸಮರ್ಪಕವಾಗಿ ಜಾರಿಗೆ ತರದ ಬಗ್ಗೆ ಸ್ವಲ್ಪ ಅಸಮಾದಾನ ಇದೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಜಾರಿಗೆ ತರುತ್ತಾರೆ ಎಂಬ ಭರವಸೆ ಇದೆ ಎಂದರು.
Advertisement
ವರದಿ ಸಲ್ಲಿಸಿದ ಬಳಿ ಮೂರು ಸರ್ಕಾರಗಳು ಬಂದು ಹೋಗಿವೆ. ಮೂರು ಸರ್ಕಾರದ ಸಂಬಂಧ ಪಟ್ಟವರ ಬಗ್ಗೆ ವರದಿ ಜಾರಿಯ ವಿಚಾರವಾಗಿ ಚರ್ಚೆ ಮಾಡಿದ್ದೆನೆ. ಸಮರ್ಪಕವಾಗಿ ವರದಿ ಜಾರಿ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ. ವರದಿ ಜಾರಿಯಾಗುವುದರಿಂದ ಪೊಲೀಸರಿಗೆ ಇರುವಂತಹ ವೇತನ ತಾರತಮ್ಯ ಸೇರಿ ಹಲವು ಮೂಲ ಸೌಕರ್ಯಗಳಿಗೆ ಅನುಕೂಲವಾಗುತ್ತೆ. ಆದ್ದರಿಂದ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಜಾರಿ ಮಾಡಬೇಕು. ವೇತನ ತಾರತಮ್ಯದ ಬಗ್ಗೆ ವರದಿ ಸಿದ್ಧ ಪಡಿಸಿರುವುದು ನನ್ನ ವೃತ್ತಿ ಬದುಕಿನ ದೊಡ್ಡ ಸಾಧನೆ. ಆದರೆ ಸರ್ಕಾರ ಲಾಂಗ್ ಟಾರ್ಮ್ ವಿಚಾರದಲ್ಲಿ ನೋಡುವುದಾದರೆ ಒಂದೇ ವರ್ಷದಲ್ಲಿ ವರದಿ ಜಾರಿ ಮಾಡುವುದು ಆರ್ಥಿಕವಾಗಿ ಕಷ್ಟಸಾಧ್ಯ ಎಂಬ ಅರಿವಿದೆ. ಎಲ್ಲಾ ಸರ್ಕಾರಗಳು ಪೊಲೀಸ್ ಇಲಾಖೆಗೆ ಉತ್ತಮವಾಗಿ ನಡೆಸಿಕೊಂಡಿದೆ ಎಂದು ಧನ್ಯವಾದ ತಿಳಿಸಿದರು.