ಕೊಪ್ಪಳ: ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್‍ನ್ನು ಅಧಿಕಾರಕ್ಕೆ ತರಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಯಾತ್ರೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಇಂದಿನ ಪ್ರವಾಸವನ್ನು ರೋಡ್ ಶೋ ಮೂಲಕ ಆರಂಭಿಸಲಿದ್ದಾರೆ. ಇದನ್ನೂ ಓದಿ: ಮೋದಿಯವರೇ ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯನವರ ಬಳಿ ಪಾಠ ಕೇಳಿ ತಿಳಿದುಕೊಳ್ಳಿ: ರಾಹುಲ್ ಗಾಂಧಿ
Advertisement
ಶನಿವಾರ 97 ಕಿಲೋ ಮೀಟರ್ ಯಾತ್ರೆ ಮಾಡಿದ ರಾಹುಲ್, ಇಂದು ಕೊಪ್ಪಳದಲ್ಲಿ ರೋಡ್ ಶೋ ಮೂಲಕ ಯಾತ್ರೆ ಶುರು ಮಾಡಲಿದ್ದಾರೆ. ಇಂದು ಬೆಳಿಗ್ಗೆ 9-30 ಗಂಟೆಗೆ ಕುಕನೂರಿನಿಂದ ಹೊರಟ ರಾಹುಲ್ ಗಾಂಧಿ ಕುಷ್ಟಗಿ ತಾಲೂಕು ಬಂಡಿ ಕ್ರಾಸ್ ನಲ್ಲಿ ರೋಡ್ ಶೋ ನಲ್ಲಿ ನೆಡಸಲಿದ್ದಾರೆ. ನಂತರ ಬೆಳಿಗ್ಗೆ 11 ಗಂಟೆಗೆ ಕುಷ್ಟಗಿಯಲ್ಲಿ, ಮಧ್ಯಾಹ್ನ 01-15 ಗಂಟೆಗೆ ಕನಕಗಿರಿಯಲ್ಲಿ, 2-05 ಗಂಟೆಗೆ ಗಂಗಾವತಿಯಲ್ಲಿ ರೋಡ್ ಶೋ ಮಾಡಲಿದ್ದಾರೆ. ಮಧ್ಯಾಹ್ನ 03 ಗಂಟೆಗೆ ಕಾರಟಗಿಯಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾಗಿರುವ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಗೆಲುವಿನಿಂದ ಕಾಂಗ್ರೆಸ್ಸಿಗೆ ದೇಶದಲ್ಲೇ ಹೊಸ ಶಕ್ತಿ ಬರುತ್ತೆ: ಸಿಎಂ
Advertisement
Advertisement
ಶನಿವಾರ ಸಾರ್ವಜನಿಕ ಸಭೆಗಳ ಮೂಲಕ ಚುಣಾವಣೆ ಪ್ರಚಾರಕ್ಕೆ ಚಾಲನೆ ನೀಡಿದ ರಾಹುಲ್ ಗಾಂಧಿ ಇಂದು ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಈ ಮೂಲಕ ಜನರಿಗೆ ಹತ್ತಿರವಾಗೋದು ರಾಹುಲ್ ಗಾಂಧಿ ಪ್ಲಾನ್ ಮಾಡಿದ್ದಾರೆ. ಸೋಮವಾರ ಕೊಪ್ಪಳ ವಿಧಾನಸಭಾ ಹೊರತುಪಡಿಸಿ ಉಳಿಸ ನಾಲ್ಕು ವಿಧಾನಸಭೆ ಚುಣಾವಣೆಯಲ್ಲಿ ರೋಡ್ ಶೋ ನೆಡಸಲಿದ್ದಾರೆ. ಇದನ್ನೂ ಓದಿ: ನಿಮ್ಮ ಮುಖ ಕನ್ನಡಿಯಲ್ಲಿ ನೋಡಿ, ಆಮೇಲೆ ಬೇರೆಯವರ ಬಗ್ಗೆ ಮಾತಾಡಿ: ಮೋದಿಗೆ ಅಂಬಿ ಟಾಂಗ್
Advertisement