Connect with us

ನಿಮ್ಮ ಮುಖ ಕನ್ನಡಿಯಲ್ಲಿ ನೋಡಿ, ಆಮೇಲೆ ಬೇರೆಯವರ ಬಗ್ಗೆ ಮಾತಾಡಿ: ಮೋದಿಗೆ ಅಂಬಿ ಟಾಂಗ್

ನಿಮ್ಮ ಮುಖ ಕನ್ನಡಿಯಲ್ಲಿ ನೋಡಿ, ಆಮೇಲೆ ಬೇರೆಯವರ ಬಗ್ಗೆ ಮಾತಾಡಿ: ಮೋದಿಗೆ ಅಂಬಿ ಟಾಂಗ್

ಬಳ್ಳಾರಿ: ಭಾರತದಲ್ಲಿರೋ ನಂಬರ್ 1 ಪಕ್ಷ ಅಂದ್ರೆ ಅದು ಕಾಂಗ್ರೆಸ್ ಪಕ್ಷ. ಜನಕ್ಕೋಸ್ಕರ ಬೇಕಾದ ಹಲವಾರು ಯೋಜನೆಗಳನ್ನು ಕೊಟ್ಟ ಪಕ್ಷವಾಗಿದೆ. ಕಾಂಗ್ರೆಸ್ ನಲ್ಲಿ ಬರೀ ಹಣ ಕೊಟ್ಟಿಲ್ಲ ಜನಕ್ಕೆ ಬದಲಾಗಿ ರಕ್ತವನ್ನೂ ಕೊಟ್ಟಿದ್ದಾರೆ ಅಂತ ನಟ, ಮಂಡ್ಯ ಶಾಸಕ ಅಂಬರೀಶ್ ಹೇಳಿದ್ರು.

ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಯಾರು ಪಕ್ಷಕ್ಕೋಸ್ಕರ ದುಡಿಯುತ್ತಿದ್ದಾರೆ. ಅದನ್ನು ಮರೆತು ಇವರು ಇಂದು ಪ್ರಧಾನ ಮಂತ್ರಿಗಳಾಗಿದ್ದಾರೆ. ಆದ್ರೆ ನೆಹರೂರವರು ವಲ್ಲಭಭಾಯ್ ಪಟೇಲ್ ಬಾಳಬೇಕಾದ್ರೆ ಇವರು ಅನ್ಯಾಯ ಮಾಡಿಬಿಟ್ರು ಅಂತ ಹೇಳ್ತಾರೆ. ಆದ್ರೆ ಅದಕ್ಕೂ ಮೊದಲು ನಮ್ಮ ಮುಖ ಕನ್ನಡಿಯಲ್ಲಿ ನೋಡಿ, ಆಮೇಲೆ ಬೇರೆಯವರ ಬಗ್ಗೆ ಮಾತಾಡಬೇಕು ಅಂದ್ರು.

ಇವರೆಲ್ಲಾ ಆಧಾರ್ ಕಾರ್ಡ್ ಬೇಡ ಅಂದ್ರು. ವಿದೇಶಿ ಬಂಡವಾಳ ಹೂಡಿಕೆ, ಜಿಎಸ್ ಟಿ ಇವುಗಳನ್ನು ಬೇಡ ಅಂದವರು ಇವತ್ತು ಇವೆಲ್ಲವನ್ನು ನಮ್ಮ ಮೇಲೆ ತಂದು ಹಾಕಿದ್ದಾರೆ. ಇವೆಲ್ಲವನ್ನು ಅವರು ತಿಳುವಳಿಕೆಯಿಂದ ಮಾಡಿಲ್ಲ. ನಿಮಗೆಲ್ಲಾ ಅದೇನು ಅಂತ ಗೊತ್ತಿಲ್ಲ. ಅದಕ್ಕೆ ಸದನ-ವಿಧಾನ ಇದೆ. ಆ ವಿಧಾನದ ಪ್ರಕಾರ ಮಾಡಿದ್ರೆ ಅದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಗೊತ್ತಿರುವುದು ಅಂತ ಹೇಳಿದ್ರು.

ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರೂ ರಕ್ತ ಕೊಟ್ರು. ಆದ್ರೂ ನಾವಿದ್ದೀವಿ ನಿಮಗೆ ಅಂತ ಛಲದಿಂದ ರಾಜಕೀಯವನ್ನು ಬಹಳ ಸಜ್ಜನತೆಯಿಂದ ಮಾಡುತ್ತಿರುವ ಕುಟುಂಬದ ಕುಡಿ ಒಂದು ಇಂದು ನಿಮ್ಮ ಮುಂದೆ ಬರುತ್ತಿದೆ ಅಂದ್ರು.

ಹೊಸಪೇಟೆ, ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ನ ಭದ್ರೆ ಕೋಟೆಯಾಗಿದೆ. ಸೋನಿಯಾ ಗಾಂಧಿಯವರನ್ನು ಗೆಲ್ಲಿಸಿ ಕುಹಿಸಿಕೊಟ್ಟ ಜನ ನೀವು. ಯಾಕೆಂದರೆ ನಾವೇನು ಪೆದ್ದರಲ್ಲ. ಕೆಲವೊಂದು ಸಲ ತಪ್ಪಾಗಬಹುದು. ಆದ್ರೆ ಇಲ್ಲಿ ನೆರೆದಿರುವ ಲಕ್ಷಾಂತರ ಜನಗಳನ್ನು ನೋಡಿದ್ರೆ ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ತಿಳಿದಿರುವ ತಿಳುವಳಿಕೆ, ಆಸಕ್ತಿ ಹಾಗೂ ಅಭಿಮಾನ ಇರುವುದನ್ನು ಗಮನಿಸಬಹುದು. ಇದಕ್ಕೆಲ್ಲಾ ವೇದಿಕೆಯಲ್ಲಿ ಕುಳಿತಿರುವಂತಹ ರಾಷ್ಟ್ರ, ರಾಜ್ಯ ನಾಯಕರು ಹಾಗೂ ಧುರೀಣರು ಕಾರಣ ಅಂತ ಹೇಳಿದ್ರು.